7th Pay Commission: 7 ನೇ ವೇತನ ಆಯೋಗ ಶಿಫಾರಸು ಜೂನ್‌ನಲ್ಲಿ ಜಾರಿ?
ಬೆಂಗಳೂರು, ಮೇ 23: ರಾಜ್ಯದ ಸರ್ಕಾರಿ ನೌಕರರಿಗೆ ಲೋಕಸಭಾ ಚುನಾವಣೆಯ ನಂತರ ಸಿಗಲಿದೆ ಏಳನೇ ವೇತನ ಆಯೋಗದ ಕುರಿತು ಶೀಘ್ರದಲ್ಲೇ ಶುಭ ಸುದ್ದಿ ಸಿಗಲಿದೆ. ಸರ್ಕಾರಿ ನೌಕಕರು ಲೋಕಸಭಾ ಚುನಾವಣೆಗೂ ಮೊದಲೇ 7 ನೇ ವೇತನ ಆಯೋಗದ ಜಾರಿ ಕುರಿತು ಸರ್ಕಾರಕ್ಕೆ ಅನೇಕ ಬಾರಿ ಮನವಿ ಮಾಡಿದ್ದು, ಸರ್ಕಾರದ ವಿರುದ್ಧ ಹಲವಾರು ಭಾರಿ ಹೋರಾಟವನ್ನೂ ಕೂಡ ನಡೆಸಿದ್ದು, ಇದೀಗ ಜಾರಿಯಾಗುವ ಸಾಧ್ಯತೆ ಇದೆ.
ಹೌದು, ಲೋಕಸಭಾ ಚುನಾವಣೆಯ ನೀತಿ ಸಂಹಿತೆಗೆ ತೆರೆ ಬೀಳುತ್ತಿದ್ದಂತೆ 7 ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ, ಭತ್ಯೆ ಹಾಗೂ ಸೌಲಭ್ಯಗಳ ಪರಿಷ್ಕರಣೆಯಾಗುತ್ತದೆ ಎಂದು ತಿಳಿಸಿದ್ದಾರೆ. ರಾಜ್ಯದಲ್ಲಿ ಲೋಕಸಭಾ ಚುನಾವಣೆ ಈಗಾಗಲೇ ಎರಡು ಹಂತದಲ್ಲಿ ಮುಗಿದಿದ್ದು, ಜೂನ್ 4 ರಂದು ಫಲಿತಾಂಶ ಹೊರಬರಲಿದೆ. ಜೂನ್ 2 ರಂದು ಚುಣಾವಣಾ ನೀತಿ ಸಂಹಿತೆ ಮುಕ್ತಾಯಗೊಳಲಿದ್ದು, 7 ನೇ ವೇತನ ಆಯೋಗದ ಶಿಫಾರಸ್ಸಿನಂತೆಯೇ ಎಷ್ಟು ವೇತನ ಹೆಚ್ಚಳ ಹಾಗುವ ಸಾಧ್ಯತೆ ಇದೆ.

ಇನ್ನೂ ಈ ಕುರಿತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ ಎಸ್ ಷಡಾಕ್ಷರಿ ಅವರು ಮಂಗಳವಾರ ಹಂಪನಕಟ್ಟೆಯಲ್ಲಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ನವೀಕರಣಗೊಂಡ ಸಭಾಂಗಣ ಹಾಗೂ ಅಧ್ಯಕ್ಷರ ನೂತನ ಕೊಠಡಿ ಉದ್ಘಾಟಿಸಿ ಮಾತನಾಡಿದ ಅವರು, ಏಳನೇ ವೇತನ ಆಯೋಗದ ಶಿಫಾರಸುಗಳು ಜೂನ್ ನಲ್ಲಿ ಜಾರಿಯಾಗುವ ಸಾಧ್ಯತೆ ಇದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 22 ಸಾವಿರ ರಾಜ್ಯ ಸರ್ಕಾರಿ ನೌಕರರಿದ್ದು, ಅವರ ಬೇಡಿಕೆಗಳ ಧ್ವನಿ ಎತ್ತಲು ಸಂಘ ವೇದಿಕೆಯಾಗಿದೆ. ಎಲ್ಲಾ ವರ್ಗಗಳಿಗೆ ಸೇರಿದ ನೌಕರರು ಒಂದು ಕುಟುಂಬದಂತೆ ಒಗ್ಗಟ್ಟಾಗಿದ್ದಾರೆ. ಹಳೆಯ ಪಿಂಚಣಿ ಯೋಜನೆಯನ್ನು ಶೀಘ್ರದಲ್ಲಿ ಪುನರಾರಂಭಿಸುವ ಬಗ್ಗೆ ಸರ್ಕಾರ ನಿರ್ಧರಿಸಲಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ ಎಸ್ ಷಡಾಕ್ಷರಿ ಅವರು ವಿಶ್ವಾಸ ವ್ಯಕ್ತಪಡಿಸಿದರು.
7ನೇ ವೇತನ ಆಯೋಗದಲ್ಲಿ ಪ್ರಮುಖ ಶಿಫಾರಸುಗಳು
1. 7ನೇ ರಾಜ್ಯ ವೇತನ ಆಯೋಗವು ಶೇ.31 ತುಟ್ಟಿಭತ್ಯೆಯನ್ನು ವಿಲೀನಗೊಳಿಸುವ ಮೂಲಕ ಮತ್ತು ಶೇ.27.50 ರಷ್ಟು ಫಿಟ್‌ಮೆಂಟ್ ಪ್ರಯೋಜನವನ್ನು ಒದಗಿಸುವ ಮೂಲಕ ರಾಜ್ಯ ಸರ್ಕಾರಿ ನೌಕರರ ಕನಿಷ್ಠ ಮೂಲ ವೇತನವನ್ನು ತಿಂಗಳಿಗೆ ಅಸ್ತಿತ್ವದಲ್ಲಿರುವ ರೂ.17,000 ರಿ೦ದ ರೂ.27,000 ಕ್ಕೆ ಪರಿಷ್ಕರಿಸಲು ಶಿಫಾರಸ್ಸು ಮಾಡುತ್ತದೆ.
2. ವೇತನ ರಚನೆಯಲ್ಲಿ ಕನಿಷ್ಠ ಮತ್ತು ಗರಿಷ್ಠ ವೇತನದ ನಡುವೆ ಅಸ್ತಿತ್ವದಲ್ಲಿರುವ 1:8.86 ರ ಅನುಪಾತವನ್ನು ಹೆಚ್ಚು-ಕಡಿಮೆ ಹಾಗೇ ಉಳಿಸಿಕೊಳ್ಳುವುದು ಮತ್ತು ಗರಿಷ್ಠ ವೇತನವನ್ನು ರೂ.2,41,200ಕ್ಕೆ ನಿಗದಿಪಡಿಸಲು ಆಯೋಗವು ಶಿಫಾರಸ್ಸು ಮಾಡುತ್ತದೆ.
3.ಹೊಸ ವೇತನ ಶ್ರೇಣಿಗಳನ್ನು ದಿನಾ೦ಕ: 01.07.2022 ರಿ೦ದ ಕಾಲ್ಪನಿಕವಾಗಿ ಅನ್ವಯಿಸುತ್ತದೆ. ಅನುಷ್ಠಾನಗೊಳಿಸುವ ನೈಜ್ಯ ದಿನಾ೦ಕವನ್ನು ರಾಜ್ಯ ಸರ್ಕಾರವು ನಿರ್ಧರಿಸುವುದೆ೦ದು ಆಯೋಗವು ಶಿಫಾರಸ್ಸು ಮಾಡುತ್ತದೆ
4.ನೌಕರರ ಕುಟುಂಬದ ಕನಿಷ್ಠ ಬಳಕೆ ವೆಚ್ಚದ ಲೆಕ್ಕಾಚಾರಕ್ಕಾಗಿ ಬಳಸಲಾಗುವ ಅಕ್ರೋಯ್ದ್ನಾ ಸೂತ್ರವನ್ನು ಚಾಲ್ತಿಯಲ್ಲಿರುವ '1' ಮತ್ತು '0.8, ರ ಪ್ರಮಾಣದ ಬದಲಿಗೆ ಪ್ರಾತಿನಿಧಿಕ ಕುಟು೦ಬದ ವಯಸ್ಕ ಪುರುಷ ಮತ್ತು ಮಹಿಳಾ ಸದಸ್ಯರಿಗೆ '1' ಸಮಾನ ಪ್ರಮಾಣವನ್ನು ನೀಡುವ ಮೂಲಕ, ಎರಡೂ ಲಿ೦ಗಗಳನ್ನು ಸಮಾನವಾಗಿ ಪರಿಗಣಿಸಿ, ಸ್ವಲ್ಪ ಮಟ್ಟಿಗೆ ಮಾರ್ಪಡಿಸಲಾಗಿದೆ (ಅಧ್ಯಾಯ 5.33).
5. ಪರಿಷ್ಕೃತ ಪ್ರತ್ಯೇಕ 1761/1602) ವೇತನ ಶ್ರೇಣಿಗಳೊ೦ದಿಗೆ, ಪರಿಷ್ಕತ ಮುಖ್ಯ ಶ್ರೇಣಿಯನ್ನು ರೂಪಿಸಲಾಗಿದೆ. ಚಾಲ್ತಿಯಲ್ಲಿರುವ ರೂ.400 ರಿ೦ದ ರೂ.3,100 ರ ಬದಲಿಗೆ ವಾರ್ಷಿಕ ಬಡ್ತಿ ದರಗಳು ಮುಖ್ಯ ಶ್ರೇಣಿಯಾದ್ಯ೦ತ ರೂ.650 ರಿ೦ದ ರೂ.5,000 ರದವರೆಗೆ ಆಗಿರುತ್ತದೆ.
6.ಪ್ರಸ್ತುತ ಜಾರಿಯಲ್ಲಿರುವಂತೆ, ಒ೦ದು ಕ್ಯಾಲೆ೦ಡರ್ ವರ್ಷದಲ್ಲಿ 1ನೇ ಜನವರಿ ಅಥವಾ 1ನೇ ಜುಲೈನಲ್ಲಿ ವಾರ್ಷಿಕ ಬಡ್ತಿ ದರಗಳನ್ನು ಮ೦ಜುರೂ ಮಾಡುವುದನ್ನು ಮುಂದುವರೆಸಲು ಆಯೋಗವು ಶಿಫಾರಸ್ಸು ಮಾಡಿರುತ್ತದೆ (ಅಧ್ಯಾಯ 5.44).












Click it and Unblock the Notifications