• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅದ್ಯಾವ ಗಳಿಗೆಯಲ್ಲಿ ಡಿಕೆಶಿಗೆ, ರಮೇಶ್ ಕುಮಾರ್ ಮಾತು ಕೊಟ್ರೋ? ಹಾಗೇ ಆಯ್ತು

|
   ಡಿಕೆಶಿ ಗೆ ಕೊಟ್ಟ ಮಾತನ್ನು ಉಳಿಸಿಕೊಳ್ತಾರ ರಮೇಶ್ ಕುಮಾರ್..? | DK Shivakumar | Oneindia Kannada

   ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರದ ವಿಶ್ವಾಸ ಗೊತ್ತುವಳಿಯ ವೇಳೆ, ಸಚಿವರಾಗಿದ್ದ ಡಿ ಕೆ ಶಿವಕುಮಾರ್, ಬಿಜೆಪಿ ವಿರುದ್ದ ಟೀಕೆಯೇ ಪ್ರವಾಹವನ್ನೇ ಹರಿಸುತ್ತಿದ್ದರು. ಸತತ ಇಡಿ/ಐಟಿ ಅಧಿಕಾರಿಗಳ ವಿಚಾರಣೆಯ ಸಿಟ್ಟು ಅವರಲ್ಲಿ ಮಾತಿನಲ್ಲಿ, ಮುಖದಲ್ಲಿ ಕಾಣುತ್ತಿತ್ತು.

   "ನಾನು ಪಟ್ಟಂಹತ ನೋವು, ಹಿಂಸೆ, ಯಾವ ಶತ್ರುವಿಗೂ ಬಾರದಿರಲಿ" ಎಂದು ಹೇಳುತ್ತಾ ಡಿಕೆಶಿ, ' ನನಗೆ, ನನ್ನ ಕುಟುಂಬವನ್ನು, ಏನೂ ಅರಿಯದ ನನ್ನ ತಾಯಿಯನ್ನೂ ಅಧಿಕಾರಿಗಳು ಬಿಟ್ಟಿಲ್ಲ, ಸಮಯ ಸಂದರ್ಭ ಎನ್ನುವುದು ಇದೆ, ಹಾಗಾಗಿ, ಸೂಕ್ತ ಸಮಯದಲ್ಲಿ ಇದಕ್ಕೆಲ್ಲಾ ಉತ್ತರ ನೀಡುತ್ತೇನೆ" ಎಂದು ವಾಗ್ದಾಳಿ ನಡೆಸುತ್ತಿದ್ದರು.

   "ನಾವು ಆಡಳಿತ ಪಕ್ಷದಲ್ಲಿರುವುದೂ ಶಾಸ್ವತವಲ್ಲ, ನೀವು ವಿರೋಧ ಪಕ್ಷದಲ್ಲಿ ಇರುವುದು ಶಾಸ್ವತ ಅಲ್ಲ ಎನ್ನುವುದನ್ನು ನಾನು ಅರಿತಿದ್ದೇನೆ, ಕಾಲಚಕ್ರದ ಸುಳಿಯಲ್ಲಿ ಎಲ್ಲರೂ ಒಂದಲ್ಲಾ ಒಂದು ಸಿಲುಕಿ ಹಾಕಿಕೊಳ್ಳಲೇಬೇಕು", ಹೀಗೆ, ಪರೋಕ್ಷವಾಗಿ ತಾನು ಎದುರಿಸುತ್ತಿರುವ ವಿಚಾರಣೆಯ ನೋವನ್ನು ಡಿಕೆಶಿ ತೋಡಿಕೊಳ್ಳುತ್ತಿದ್ದರು.

   ಹಾಗಿದ್ದರೆ ಇಷ್ಟುದಿನ ಡಿಕೆ ಶಿವಕುಮಾರ್ ಮಾಧ್ಯಮದ ಮುಂದೆ ಹೇಳಿದ್ದೆಲ್ಲಾ ಸುಳ್ಳಾ?

   ಹೀಗೆ, ಮಾತು ಮುಂದುವರಿಸುತ್ತಾ ಡಿಕೆಶಿ, "ಇಂದಲ್ಲಾ.. ನಾಳೆ.. ನಾನು ಜೈಲಿಗೆ ಹೋಗುತ್ತೇನೆ. ನಾನು ಒಂದು ವೇಳೆ ಜೈಲಿಗೆ ಹೋದರೆ, ನನ್ನನ್ನು ನೋಡಲು ನೀವು ಬರುತ್ತೀರಾ" ಎಂದು ಸ್ಪೀಕರ್ ರಮೇಶ್ ಕುಮಾರ್ ಅವರಲ್ಲಿ ಪ್ರಶ್ನಿಸುತ್ತಾರೆ.

   ಹಿಂದೆಲ್ಲಾ ಶಾಸಕರನ್ನು ನೋಡಿದರೆ ಜನರು ಕೈಮುಗೀತಾ ಇದ್ದರು

   ಹಿಂದೆಲ್ಲಾ ಶಾಸಕರನ್ನು ನೋಡಿದರೆ ಜನರು ಕೈಮುಗೀತಾ ಇದ್ದರು

   "ಹಿಂದೆಲ್ಲಾ ಶಾಸಕರನ್ನು ನೋಡಿದರೆ ಜನರು ಕೈಮುಗೀತಾ ಇದ್ದರು, ಕಾಲಿಗೆ ಬೀಳುತ್ತಿದ್ದರು. ಈಗ, ಜನಪ್ರತಿನಿಧಿಗಳನ್ನು ನೋಡಿದರೆ, ಜನ ಛೀ..ಥೂ.. ಎಂದು ಉಗೀತಾರೆ. ಪರಿಸ್ಥಿತಿ ಹೀಗಿರುವಾಗ, ನಾವೆಲ್ಲಾ ತುಂಬಾ ಎಚ್ಚರಿಕೆಯಿಂದ ರಾಜಕಾರಣ ಮಾಡುವ ಅವಶ್ಯಕತೆಯಿದೆ. ಇಲ್ಲಿ, ಯಾರೂ ಶಾಸ್ವತವಲ್ಲ ಎನ್ನುವುದನ್ನು ನನ್ನ ಬಿಜೆಪಿ ಮಿತ್ರರಿಗೆ ಹೇಳಲು ಇಷ್ಟ ಪಡುತ್ತೇನೆ" ಎಂದು, ಅಂದು ಡಿಕೆಶಿ ಹೇಳಿದ್ದರು.

   ನಾನು ಬಂಡೆಯಂತವನು, ಯಾವುದಕ್ಕೂ ಜಗ್ಗುವುದಿಲ್ಲ

   ನಾನು ಬಂಡೆಯಂತವನು, ಯಾವುದಕ್ಕೂ ಜಗ್ಗುವುದಿಲ್ಲ

   "ವಿಚಾರಣೆಯ ಹೆಸರಿನಲ್ಲಿ ನನ್ನ ಮೇಲೆ ದ್ವೇಷ ಸಾಧಿಸಲಾಗುತ್ತಿದೆ. ಆದರೆ, ನಾನು ಬಂಡೆಯಂತವನು, ಯಾವುದಕ್ಕೂ ಜಗ್ಗುವುದಿಲ್ಲ. ಇಂದಲ್ಲಾ ನಾಳೆ, ನಾನು ಜೈಲಿಗೆ ಹೋಗಬೇಕಾದ ಪರಿಸ್ಥಿತಿ ಬರಬಹುದು ಎನ್ನುವುದನ್ನು ಅರಿತಿದ್ದೇನೆ. ಮಾನಸಿಕವಾಗಿ ಸಿದ್ದನಾಗಿದ್ದೇನೆ ಕೂಡಾ" ಎಂದು ಡಿಕೆಶಿ ಹೇಳಿದ್ದರು.

   ಆಸ್ಪತ್ರೆಯಲ್ಲಿ ಡಿ.ಕೆ. ಶಿವಕುಮಾರ್; ವೈದ್ಯರ ವರದಿಗಾಗಿ ಕಾದು ಕುಳಿತ ಇಡಿ

   ಡಿಕೆಶಿ, ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ ಅವರಲ್ಲಿ ಕೇಳಿಕೊಂಡಿದ್ದು

   ಡಿಕೆಶಿ, ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ ಅವರಲ್ಲಿ ಕೇಳಿಕೊಂಡಿದ್ದು

   " ನಾನು ಒಂದು ವೇಳೆ ಜೈಲಿಗೆ ಹೋದರೆ, ಯಾರು ನನ್ನನ್ನು ನೋಡಲು ಬರುತ್ತಾರೋ, ಇಲ್ಲವೋ, ನೀವಂತೂ ಬರುತ್ತೀರಾ ಎಂದು ನಂಬಿದ್ದೇನೆ" ಎಂದು ಡಿಕೆಶಿ, ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ ಅವರಲ್ಲಿ ಹೇಳಿದ್ದರು. ಅದಕ್ಕೆ ರಮೇಶ್ ಕುಮಾರ್ "ಹಂಗೆಲ್ಲಾ ಮಾತಾಡೋಕೆ ಹೋಗಬೇಡಿ" ಎಂದು ಹೇಳಿದ್ದರು.

   ನಾನಂತೂ ನಿನ್ನನ್ನು ನೋಡಲು ಬರುತ್ತೇನೆ

   ನಾನಂತೂ ನಿನ್ನನ್ನು ನೋಡಲು ಬರುತ್ತೇನೆ

   ರಮೇಶ್ ಕುಮಾರ್ ಮಾತು ಮುಂದವರಿಸುತ್ತಾ, " ನೀನು ನನಗೆ ಸಹೋದರ ಇದ್ದ ಹಾಗೇ.. ನೀನು ಜೈಲಿಗೆ ಹೋಗಬಾರದು ಎಂದು ಹಿತೈಷಿಯಾಗಿ ಬಯಸುತ್ತೇನೆ. ಒಂದು ವೇಳೆ, ಪರಿಸ್ಥಿತಿ ಕೈಮೀರಿ, ನೀನೇನಾದರೂ ಜೈಲಿಗೆ ಹೋಗಿದ್ದೇ ಆದಲ್ಲಿ, ಯಾರು ಬರುತ್ತಾರೋ, ಗೊತ್ತಿಲ್ಲ, ನಾನಂತೂ ನಿನ್ನನ್ನು ನೋಡಲು ಪ್ರತೀದಿನಾ ಬರುತ್ತೇನೆ" ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದರು.

   ರಮೇಶ್ ಕುಮಾರ್ - ಡಿಕೆಶಿ ಈ ಚರ್ಚೆಯ ವಿಷಯ

   ರಮೇಶ್ ಕುಮಾರ್ - ಡಿಕೆಶಿ ಈ ಚರ್ಚೆಯ ವಿಷಯ

   ಇಡಿಯಿಂದ ಡಿಕೆಶಿ ಬಂಧನವಾದ ನಂತರ, ರಮೇಶ್ ಕುಮಾರ್ - ಡಿಕೆಶಿ ಈ ಚರ್ಚೆಯ ವಿಷಯ ಮತ್ತೆ ಮುನ್ನಲೆಗೆ ಬಂದಿದೆ. ಅದ್ಯಾವ ಗಳಿಗೆಯಲ್ಲಿ ಈ ವಿಷಯ ಚರ್ಚೆಗೆ ಬಂತೋ ಎಂದು ಡಿಕೆಶಿ ಅಭಿಮಾನಿಗಳು, ಕಾರ್ಯಕರ್ತರು ನೊಂದುಕೊಳ್ಳುವಂತಾಗಿದೆ.

   English summary
   Recalling The Debate Between Former Minister and Congress Leader DK Shivakumar And Ex Speaker Ramesh Kumar During HDK Confidence Motion.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X