SSLC: ಫೇಲಾದವರಿಗೆ ಮರು ವ್ಯಾಸಂಗಕ್ಕೆ ಅವಕಾಶ, ಶಾಲೆಗೆ ಹೋಗಬಹುದು!

ಬೆಂಗಳೂರು, ಮೇ 10: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಈ ಶೈಕ್ಷಣಿಕ ವರ್ಷದಲ್ಲಿ 10 ನೇ ತರಗತಿಯಲ್ಲಿ ವ್ಯಾಸಂಗಕ್ಕೆ ಪ್ರವೇಶಾವಕಾಶ ಕಲ್ಪಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಆದರೆ, ಅನುತ್ತೀರ್ಣರಾದ ವಿದ್ಯಾರ್ಥಿಗಳು ಮರು ಪ್ರವೇಶ ಪಡೆಯಬೇಕಾದರೆ ಎಲ್ಲಾ ಅರು ವಿಷಯಗಳನ್ನೂ ವ್ಯಾಸಂಗ ಮಾಡಿ ಪರೀಕ್ಷೆಗೆ ಕುಳಿತೊಕೊಳ್ಳಬೇಕಾಗುತ್ತದೆ. ತೇರ್ಗಡೆಯಾದ ವಿಷಯಗಳಿಗೆ ವಿನಾಯಿತಿ ನೀಡಲು ಅವಕಾಶವಿರುವುದಿಲ್ಲ. ಅನುತ್ತೀರ್ಣರಾದ ವಿದ್ಯಾರ್ಥಿಗಳ ಶಾಲಾ ಮರು ದಾಖಲಾತಿ ಮುಂದಿನ ಒಂದು ಶೈಕ್ಷಣಿಕ ವರ್ಷಕ್ಕೆ ಮಾತ್ರ ಸೀಮಿತವಾಗಿರುತ್ತದೆ ಎಂದು ಇಲಾಖೆ ತಿಳಿಸಿದೆ.

ಶಾಲಾ ವಿದ್ಯಾರ್ಥಿಗಳಿಗೆ ಅನುಸರಿಸುವ ಎಲ್ಲಾ ಮಾನದಂಡಗಳನ್ನು ಅನುಸರಿಸಿ ಫೇಲಾದ ವಿದ್ಯಾರ್ಥಿಗಳಿಗೆ ಮರು ಪ್ರವೇಶಕ್ಕೆ ದಾಖಲು ಮಾಡಿಕೊಳ್ಳಲಾಗುತ್ತದೆ. ಫೇಲಾದ ವಿದ್ಯಾರ್ಥಿಗಳು ಪುನಃ ಶಾಲಾ ಪ್ರವೇಶ ಪಡೆದು ದಾಖಲಾಗಿರುವುದರಿಂದ ಸಿಸಿಇ ಪದ್ಧತಿಯಲ್ಲಿ ವ್ಯಾಸಂಗ ಮುಂದುವರೆಸಬೇಕಾಗುತ್ತದೆ.

Readmission for failed students to SSLC

ಈ ವಿದ್ಯಾರ್ಥಿಗಳು ಕೂಡ ಉಳಿದ ವಿದ್ಯಾರ್ಥಿಗಳಂತೆಯೇ ಆಂತರಿಕ ಮೌಲ್ಯಮಾಪನದ ಭಾಗ -ಎ ಮತ್ತು ಭಾಗ ಬಿ ಗಳಲ್ಲಿ ಅಂಕ ಮತ್ತು ಶ್ರೇಣಿಯನ್ನು ಪಡೆಯಬೇಕಾಗುತ್ತದೆ. ಎಂದು ಪ್ರೌಢ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ವಿಟಿ ರಾಜಶ್ರೀ ಆದೇಶ ಹೊರಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+