Ration Card: ಇವತ್ತು ಈ ಕೆಲ್ಸ ಮಾಡದಿದ್ರೆ ನಾಳೆ ನಿಮ್ಮ ರೇಷನ್ ಕಾರ್ಡ್ ರದ್ದು
Ration Card: ಪ್ರಮುಖ ದಾಖಲೆಗಳಲ್ಲಿ ರೇಷನ್ ಕಾರ್ಡ್ ಕೂಡ ಒಂದಾಗಿದೆ. ಈ ಕುರಿತು ಗ್ರಾಹಕರಿಗೆ ಅನುಕೂಲ ಆಗುವ ದೃಷ್ಟಿಯಿಂದ ರಾಜ್ಯ ಸರ್ಕಾರ ಆಗಾಗ ಹೊಸ ನಿಯಮಗಳನ್ನು ಹೊರಡಿಸುತ್ತಲಿರುತ್ತದೆ. ಹಾಗೆಯೇ ಪಡಿತರ ಚೀಟಿದಾರರು ಜೂನ್ 30 ಅಂದರೆ ಇಂದು ಈ ಕೆಲ್ಸ ಮಾಡದಿದ್ರೆ ನಾಳೆಯಿಂದಲೇ ರೇಷನ್ ರದ್ದಾಗುವ ಸಾಧ್ಯತೆಯಿದೆ. ಹಾಗಾದ್ರೆ ಅದೇನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ರಾಜ್ಯದಲ್ಲಿ ಈಗಾಗಲೇ ನಕಲಿ ದಾಖಲೆ ದೃಷ್ಟಿಸಿ ಪಡೆದಂತಹ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸುವ ಕೆಲಸವನ್ನು ಸರ್ಕಾರ ಮಾಡಿತ್ತು. ಅಲ್ಲದೆ, ಅಂತಹವರನ್ನು ಎಪಿಎಲ್‌ಗೆ ವರ್ಗಾಹಿಸುವ ಕೆಲಸವನ್ನು ಸಹ ಮಾಡಿತ್ತು. ಇದರ ಬೆನ್ನಲ್ಲೇ ಹಲವು ಜಿಲ್ಲೆಗಳಲ್ಲಿ ಬಡವರ ಬಿಪಿಎಲ್ ಕಾರ್ಡ್‌ಗಳನ್ನು ಸಹ ರದ್ದುಪಡಿಸಲಾಗಿದೆ ಎಂದು ಪ್ರತಿಭಟನೆ ಮಾಡವ ಮೂಲಕ ಜನರು ಆರೋಪ ಮಾಡಿದ್ದರು. ಬಳಿಕ ಎಚ್ಚೆತ್ತ ಸರ್ಕಾರ ಅರ್ಹರಿಗೆ ಬಿಪಿಲ್ ಕಾರ್ಡ್‌ಗಳನ್ನು ಹಿಂತಿರುಗಿಸಿ ಅವರಿಗೆ ಸಿಗಬೇಕಾದ ಪಡಿತರ ನೀಡುವುದಾಗಿ ಭರವಸೆ ನೀಡಿತ್ತು.

ಅಲ್ಲದೆ, ಕಳೆದ ಕೆಲವು ದಿನಗಳಿಂದ ಅನರ್ಹರ ಬಳಿಯ ಎಲ್ಲಾ ರೀತಿಯ ಪಡಿತರ ಚೀಟಿಗಳನ್ನು ರದ್ದುಪಡಿಸುವ ಕಾರ್ಯಕ್ಕೆ ಮುಂದಾಗಿದೆ. ಈ ನಡುವೆಯೇ ಮತ್ತೊಂದು ಮಹತ್ವದ ಕಾರ್ಯಕ್ಕೆ ಕೈಹಾಕಿದೆ. ಅದೇನೆಂದರೆ ಇ-ಕೆವೈಸಿ ಪ್ರಕ್ರಿಯೆ. ಇದಕ್ಕೆ ತುಂಬಾ ದಿನಗಳಿಂದಲೂ ಸಮಯವಕಾಶವನ್ನು ನೀಡಲಾಗಿದ್ದು, ಇಂದು ಅಂದರೆ ಜೂನ್ 30 ಆಗಿದೆ.
ಜೂನ್ 30, 2025ರ ಒಳಗೆ ಇ-ಕೆವೈಸಿ ಪ್ರಕ್ರಿಯೆ ಮುಗಿಸದಿದ್ರೆ, ಜುಲೈ 1ರಿಂದ ನಿಮ್ಮ ಪಡಿತರ ಚೀಟಿಗೆ ಸಂಬಂಧಿಸಿದ ಎಲ್ಲಾ ಸೌಲಭ್ಯಗಳು ರದ್ದಾಗುವ ಸಾಧ್ಯತೆಯಿದೆ. ಇದರಲ್ಲಿ ಇಂದಿರಾ ಕಿಟ್ ಸಹ ಸೇರಿದೆ. ರಾಜ್ಯ ಸರ್ಕಾರದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರ ಇಲಾಖೆಯು ಈ ನಿಯಮವನ್ನು ಜಾರಿಗೆ ತಂದಿದ್ದು, ಅದು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಎಲ್ಲಾ ಫಲಾನುಭವಿಗಳಿಗೆ ಹಾಗೂ ಅಂತ್ಯೋದಯ ಅನ್ನ ಯೋಜನೆ ಕಾರ್ಡ್‌ದಾರರಿಗೆ ಅನಿವಾರ್ಯವಾಗಿದೆ.
ಇ-ಕೆವೈಸಿ ಪ್ರಕ್ರಿಯೆಯು ಸುಲಭವಾಗಿದ್ದು, ನೀವು ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಹೋಗಿ, ಬೆರಳಚ್ಚು ಅಥವಾ ಕಣ್ಣು ಸ್ಕ್ಯಾನ್ ಮೂಲಕ ಬಯೋಮೆಟ್ರಿಕ್ ದೃಢೀಕರಣ ಮಾಡಿಸಬೇಕು. ಅಥವಾ ಆಹಾರ ಇಲಾಖೆಯ ಅಧಿಕೃತ ವೆಬ್‌ಸೈಟ್ https://ahara.kar.nic.inಗೆ ಭೇಟಿ ನೀಡಿ ಆನ್ಲೈನ್‌ಲೂ ಈ ಪ್ರಕ್ರಿಯೆ ಪೂರ್ಣಗೊಳಿಸಬಹುದು. ಒಟಿಪಿ ದೃಢೀಕರಣ ಮೂಲಕ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
ಇ-ಕೆವೈಸಿ ಇಲ್ಲದಿದ್ರೆ, ನಿಮ್ಮ ಕುಟುಂಬದ ಯಾವುದೇ ಸದಸ್ಯರ ಹೆಸರು ರೇಷನ್ ಕಾರ್ಡ್‌ನಿಂದ ತೆಗೆದು ಹಾಕಲಾಗುತ್ತದೆ. ಅಥವಾ ಸಂಪೂರ್ಣ ಪಡಿತರ ಚೀಟಿ ರದ್ದು ಆಗುವ ಸಾಧ್ಯತೆಯೂ ಇದೆ. ಇದರ ಉದ್ದೇಶ ನಕಲಿ ಪಡಿತರ ಚೀಟಿಗಳನ್ನು ತಡೆಗಟ್ಟುವುದಾಗಿದೆ. ಈ ರೀತಿಯ ಕ್ರಮಗಳು ಅರ್ಜರಿಗೆ ಸರಿಯಾದ ಸಮಯಕ್ಕೆ ಪಡಿತರ ಪಡೆಯಲು ತುಂಬಾ ಸಹಾಯಕವಾದಂತಾಗಲಿದೆ. ಆದರೆ, ಕೆಲ ಕುಟುಂಬಗಳಿಗೆ ತೊಂದರೆಯೂ ಆಗಬಹುದು.
ಈ ಪ್ರಿಕ್ರಿಯೆಯ ಸೇವೆಯು ಉಚಿತವಾಗಿದ್ದು, ಯಾರಾದರೂ ಹಣ ಕೇಳಿದರೆ ತಕ್ಷಣವೇ 1967 ಟೋಲ್-ಫ್ರಿ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಬಹುದು. ಈಗಲೂ ಸಹ ಗ್ರಾಮೀಣ ಪ್ರದೇಶಗಳಲ್ಲಿ ತುಂಬಾ ಜನರು ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸದಿರುವುದು ತಿಳಿದುಬಂದಿದೆ. ಆದ್ದರಿಂದ ಈ ಕ್ರಮವನ್ನು ಪಾಲಿಸುವ ಮೂಲಕ ಸೌಲಭ್ಯಗಳನ್ನು ಪಡೆದುಕೊಳ್ಳಿ ಕಳೆದುಕೊಳ್ಳಬೇಡಿ ಎಂದು ತಿಳಿಸಿದೆ. ಈಗಲೂ ಕೂಡ ಬಹುತೇಕ ಗ್ರಾಮಗಳಲ್ಲಿ ಈ ಪ್ರಕ್ರಿಯೆ ದಿನಾಂಕ ಮುಂದೂಡಿಕೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.












Click it and Unblock the Notifications