ಹುಬ್ಬಳ್ಳಿ ಕಿಮ್ಸ್ ನಲ್ಲಿ ಅತ್ಯಾಚಾರ ಯತ್ನ: ಸೆಕ್ಯೂರಿಟಿ ಗಾರ್ಡ್ ಬಂಧನ

ಹುಬ್ಬಳ್ಳಿ, ಅಕ್ಟೋಬರ್, 15 : ನಗರದ ಪ್ರತಿಷ್ಠಿತ ಕಿಮ್ಸ್ ಆಸ್ಪತ್ರೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಒಬ್ಬ ಅನಾರೋಗ್ಯ ನಿಮಿತ್ತ ಆಸ್ಪತ್ರೆಗೆ ದಾಖಲಾಗಿದ್ದ ವಾರ್ಡವೊಂದರಲ್ಲಿ ರೋಗಿಯ ಮಗಳ ಮೇಲೆ ಅತ್ಯಾಚಾರ ನಡೆಸಲು ಯತ್ನಿಸಿ ಸಿಕ್ಕಿಬಿದ್ದಿದ್ದ ಘಟನೆ ಅಕ್ಟೋಬರ್ ೧೪ರ ಬುಧವಾರ ನಡೆದಿದೆ.

ಕುಂದಗೋಳ ತಾಲೂಕು ಸಕಲಿಪುರ ಗ್ರಾಮದ ಚಂದ್ರಶೇಖರ ನಿಂಗಪ್ಪ ಹಡಪದ (24) ಅತ್ಯಾಚಾರ ಆರೋಪಿ. ಈತನನ್ನು ವಿದ್ಯಾನಗರ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.[ಅತ್ಯಾಚಾರ ತಡೆಗೆ ನಾನು ಸಹಿ ಹಾಕಾಯ್ತು, ನಿಮ್ಮದೊಂದು ಸಹಿ ಸೇರಿಸಿ]

Rape attempted at KIMS, Hubballi : arrested security guard on October 14

ಘಟನೆ ವಿವರ :

ಕೊಪ್ಪಳ ಜಿಲ್ಲೆಯ ಗಿಣಿಗೇರಾದ 30 ವರ್ಷದ ಮಹಿಳೆಯೊಬ್ಬರು ತಮ್ಮ ತಾಯಿಯನ್ನು ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಯ ವಾರ್ಡ್ ನಂಬರ್ 305ರಲ್ಲಿ ದಾಖಲಿಸಿದ್ದರು. ಆರೈಕೆಯಲ್ಲಿ ತೊಡಗಿದ್ದ ಆಕೆ ತನ್ನ ತಾಯಿ ಪಕ್ಕದಲ್ಲೇ ಮಲಗುತ್ತಿದ್ದಳು. ಬುಧವಾರ ಬೆಳಗಿನ ಹೊತ್ತಿನಲ್ಲಿ ಎಲ್ಲರೂ ಮಲಗಿರುವುದನ್ನು ಗಮನಿಸಿದ ಸೆಕ್ಯೂರಿಟಿ ಗಾರ್ಡ್ ಅತ್ಯಾಚಾರಕ್ಕೆ ಪ್ರಯತ್ನಿಸಿದ್ದಾನೆ.[ಮಣಿಪಾಲ್ ಗ್ಯಾಂಗ್ ರೇಪ್ ಕೇಸ್ : ಮೂವರಿಗೆ ಜೀವಾವಧಿ]

ಅತ್ಯಾಚಾರ ಎಸಗಲು ಮುಂದಾದ ಸೆಕ್ಯೂರಿಟಿ ಗಾರ್ಡ್ ನನ್ನು ಕಂಡ ಮಹಿಳೆ ಜೋರಾಗಿ ಕೂಗಿಕೊಂಡಿದ್ದಾಳೆ. ಆ ಸಮಯದಲ್ಲಿ ಎಚ್ಚರಗೊಂಡ ಉಳಿದ ರೋಗಿಗಳ ಸಂಬಂಧಿಕರು ಆತನಿಗೆ ಹಿಗ್ಗಾಮುಗ್ಗಾ ಬಾರಿಸಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಈತ ಮೊದಲು ನನ್ನ ಮೊಬೈಲ್ ನಂಬರ್ ಕೇಳಿದ್ದ ಎಂದು ಪೊಲೀಸರಿಗೆ ಹೇಳಿದ್ದಾಳೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+