ಖ್ಯಾತ ನಟಿ ರಮ್ಯಾ ಅವರಿಂದ ಟ್ವಿಟ್ಟರ್‌ನಲ್ಲಿ ಕನ್ನಡ ಪಾಠ!

ಬೆಂಗಳೂರು, ಫೆಬ್ರವರಿ 21 : ಮಾಜಿ ನಟಿ, ಮಾಜಿ ಸಂಸದೆ, ಕಾಂಗ್ರೆಸ್‌ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ (ದಿವ್ಯಾ ಸ್ಪಂದನಾ) ಅವರು ಇಂದು ಅಚಾನಕ್‌ ಆಗಿ ಕನ್ನಡವನ್ನು ನೆನಪಿಸಿಕೊಂಡಿದ್ದಾರೆ. ಅಷ್ಟೆ ಅಲ್ಲ ಟ್ವಿಟ್ಟರ್‌ನಲ್ಲಿ ಕನ್ನಡೇತರರಿಗೆ ಕನ್ನಡದ ಪಾಠವನ್ನೂ ಮಾಡಿದ್ದಾರೆ.

ಹೌದು, ಅಂಬರೀಶ್ ಅವರ ಅಂತಿಮ ಸಂಸ್ಕಾರ ಸೇರಿದಂತೆ ಹಲವು ಪ್ರಮುಖ ಸಮಯದಲ್ಲಿ ರಾಜ್ಯಕ್ಕೆ ಬಾರದಿರುವ ರಮ್ಯಾ ಅವರಿಗೆ ಇಂದು ಹಠಾತ್ತಾಗಿ ಕನ್ನಡ ಮೈಮೇಲೆ ಬಂದಿದೆ.

ಟ್ವಿಟ್ಟರ್‌ನಲ್ಲಿ ಕನ್ನಡದ ಬಗ್ಗೆ ಪಾಠ ಮಾಡಿರುವ ಅವರು, ಕನ್ನಡ ಹಾಗೂ ಕರ್ನಾಟಕ ಎಂಬ ಎರಡು ಪದಗಳನ್ನು ಹಾಕಿ, ಈ ಪದಗಳನ್ನು ಉಚ್ಚರಿಸುವ ಬಗೆ ಹೇಗೆ ಎಂಬುದನ್ನು ಕನ್ನಡಿಗರಲ್ಲದವರಿಗೆ ಪಾಠ ಮಾಡಿದ್ದಾರೆ.

Ramya teaches kannada in twitter for non kannadigas

ಕನ್ನಡವನ್ನು 'ಕನ್ನಡ್' ಕರ್ನಾಟಕವನ್ನು 'ಕರ್ನಾಟಕ್' ಎಂದು ಹಲವರು ಉಚ್ಚರಿಸುತ್ತಾರೆ. ಆದರೆ ಅದನ್ನು ಕೊನೆಯಲ್ಲಿ 'ಅ'ಕಾರ ಸೇರಿಸಿ ಉಚ್ಚರಿಸಬೇಕು ಎಂದು ರಮ್ಯಾ ಟ್ವಿಟ್ಟರ್‌ನಲ್ಲಿ ಪಾಠ ಮಾಡಿದ್ದಾರೆ. ಇಂದು ವಿಶ್ವ ಮಾತೃಭಾಷಾ ದಿನವಾದ್ದರಿಂದ ರಮ್ಯಾ ಅವರು ಕನ್ನಡವನ್ನು ನೆನಪಿಸಿಕೊಂಡಿದ್ದಕ್ಕೆ ನಿಜಕ್ಕೂ ಅವರನ್ನು ಶ್ಲಾಷಿಸಬೇಕು. ಹಾಗೆಯೇ ಅವರು ಕನ್ನಡದಲ್ಲಿ ಟೈಪಿಸುವುದನ್ನೂ ಕಲಿತುಕೊಳ್ಳಲಿ.

ಕನ್ನಡ, ಕರ್ನಾಟಕವನ್ನು ಹೇಗೆ ಉಚ್ಚರಿಸಬೇಕು ಎಂಬುದಕ್ಕೆ ಕೆಲವು ಉದಾಹರಣೆಗಳನ್ನು ಅವರು ನೀಡಿದ್ದು, ಆಂಧ್ರ, ತೆಲಂಗಾಣ, ಕೆನಡಾ ಉಚ್ಚರಿಸುವ ರೀತಿಯಲ್ಲಿಯೇ ಕೊನೆಯ 'ಅ'ಕಾರ ಸೇರಿಸಿ ಕರ್ನಾಟಕ, ಕನ್ನಡವನ್ನು ಉಚ್ಚರಿಸಬೇಕು ಎಂದು ರಮ್ಯಾ ಉದಾಹರಣೆ ಸಹಿತ ವಿವರಿಸಿದ್ದಾರೆ.

ರಮ್ಯಾ ಅವರು ಕನ್ನಡ ಸಿನಿಮಾದಲ್ಲಿ ನಟಿಸುವಾಗ ಅವರ ಬಹುತೇಕ ಸಿನಿಮಾಗಳ ಪಾತ್ರಗಳಿಗೆ ಡಬ್ಬಿಂಗ್ ಕಲಾವಿದರು ಧ್ವನಿ ನೀಡುತ್ತಿದ್ದರು. ರಮ್ಯಾ ಅವರ ಕನ್ನಡದ ಬಗ್ಗೆ ಜೋಕುಗಳು ಸಹ ಚಾಲ್ತಿಯಲ್ಲಿದ್ದವು. ಆದರೆ ಇದ್ದಕ್ಕಿದ್ದ ಹಾಗೆ ಇಂದು ರಮ್ಯಾ ಅವರು ಕನ್ನಡದ ಮೇಷ್ಟ್ರಾಗಿಬಿಟ್ಟಿದ್ದಾರೆ. ಕನ್ನಡ ತಾಯೇ ನೀನೇ ಧನ್ಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+