ಮಂಡ್ಯದ ವೆರೈಟಿ ಜನಕ್ಕೆ ಐಟಿನೂ ಬೇಕು: ಅಂಬಿಗೆ ರಮ್ಯಾ
ಮಂಡ್ಯ,
ಏ.13: ಮಂಡ್ಯ ಜಿಲ್ಲಾ ಕಾಂಗ್ರೆಸ್ಸಿನಲ್ಲಿ ಕಿರಿಕಿರಿಯಿಂದ ಬಸವಳಿದಿದ್ದ ಕ್ಷೇತ್ರದ ಅಭ್ಯರ್ಥಿ, ನಟಿ ರಮ್ಯಾ ಅತ್ತ ಅಂಬಿ ಅಂಕಲ್ ತಾಯ್ನಾಡಿಗೆ ಮರಳುತ್ತಿದ್ದಂತೆ ಮತ್ತೆ ಜೀವನೋತ್ಸಾಹದಿಂದ ಪುಟಿಯುತ್ತಿದ್ದಾರೆ. ಕಾಂಗ್ರೆಸ್ ಮಂದಿ ಒಂದೇ ಸಮನೆ ಕಾಲೆಳೆಯುವುದನ್ನು ಕಂಡು ಸಾಕಪ್ಪಾ ಸಾಕು ಎಂದು ಪೆಚ್ಚುಮೋರೆ ಹಾಕಿಕೊಂಡಿದ್ದ ರಮ್ಯಾಗೆ ಮತದಾನದ ಹೊಸ್ತಿಲಲ್ಲಿ ಅಂಬಿ ಅಂಕಲ್ ಟಾನಿಕ್ ನೀಡಿದ್ದಾರೆ. id="toptextpromo"> id='are-slot-1' class='oiad oi-axt oiadv'>ಆದರೆ
ಎಲ್ಲೋ ಒಂದು ಕಡೆ ಸ್ವತಃ ಅಂಬರೀಷ್ ಸಹ ರಮ್ಯಾರ ಕಾಲೆಳೆದಿದ್ದರು. ಅದಕ್ಕೆ ರಮ್ಯಾ ಹಾಗಲ್ಲಾ ಹೀಗೆ ಅಂಕಲ್ ಎಂದಿದ್ದಾರೆ. ಏನಪ್ಪಾ ಅಂದರೆ 'ನಮ್ಮ ಮಂಡ್ಯ ಹೈಕುಳಗಳಿಗೆ ಟ್ವಿಟ್ಟರ್ರು, ವಾಟ್ಸಪ್ಪು, ಅಂತೆಲ್ಲಾ ಗೊತ್ತಾಗಾಕಿಲ್ಲ ಕಣಮ್ಮಿ ವಸಿ ಜನ್ರ ಮಧ್ಯಕ್ಕೆ ನೇರವಾಗಿ ಹೋಗು' ಎಂದು ಅಂಬರೀಷ್ ಮೊನ್ನೆ ರಮ್ಯಾರ ತಲೆಮೊಟಿಕಿದ್ದರು. [ಇನ್ನಷ್ಟು ಚಿತ್ರಗಳಿಗೆ ಗ್ಯಾಲರಿ ನೋಡಿ]id='are-slot-2' class='oiad oi-axt oiadv'>
|
ಐಟಿ ಬೇಡ ಕಣಮ್ಮೀ ಅಂದಿದ್ದ ಅಂಬರೀಷ್
ಹಾಗಂತ ಅವರೇನೂ ಆಧುನಿಕ ಜಗತ್ತಿಗೆ ಅದ್ಭುತ ಕೊಡುಗೆಯಾದ ಮಾಹಿತಿ ತಂತ್ರಜ್ಞಾನ ಬೇಡವೇ ಬೇಡ ಎಂದೇನೂ ಹೇಳಿರಲಿಲ್ಲ. ಆದ್ರೂ ನಮ್ ಮಂಡ್ಯದವರ ನಾಡಿಮಿಡಿತ ಬಲ್ಲವರಾಗಿ ಅವರಿಗೆಲ್ಲ ಐಟಿ ಬೇಡ ಕಣಮ್ಮೀ ಎಂದಿದ್ದರು.
|
ಮಂಡ್ಯ ಜನಕ್ಕೆ ಏನ್ಬೇಕು ಅಂತ ರಮ್ಯಾ ಗಮನಿಸಿದ್ದಾರೆ
ಆದರೆ ಮೊದಲ ಬಾರಿ ಗೆದ್ದಾಗ ಅಂಬಿ ಅಂಕಲ್ ಹೇಳಿದ್ದಂತೆ ಕಾಲಿಗೆ ಚಕ್ರ ಕಟ್ಟಿಕೊಂಡು ಊರೂರು, ಗ್ರಾಮ ಗ್ರಾಮ ಸುತ್ತುತ್ತಿರುವ ನಟಿ ರಮ್ಯಾ ಮಂಡ್ಯ ಹೈಕುಳಗಳು ಈಗ ಹೇಗಿದ್ದಾರೆ, ಅವರು ಎಷ್ಟು ಮುಂದುವರಿದಿದ್ದಾರೆ ಎಂಬುದನ್ನು ಕಣ್ಣಳತೆಯಲ್ಲೇ ಗಮನಿಸಿದ್ದಾರೆ.
| Array |
'ಈ ಶತಮಾನದ ಮಾದರಿ ಹೆಣ್ಣು...' - ರಮ್ಯಾ
ಹಾಗಾಗಿ ಅಂಬಿ ಅಂಕಲ್ ಗೆ ಸರಿಯುತ್ತರವಾಗಿ ವಸ್ತುಸ್ಥಿತಿ ಏನು ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಎಷ್ಟೇ ಆಗಲಿ ರಮ್ಯಾ ಆಧುನಿಕ ಹೆಣ್ಣು, ಮಂಡ್ಯದಲ್ಲಿ 'ಈ ಶತಮಾನದ ಮಾದರಿ ಹೆಣ್ಣು...' ಎಂದು ಗುನುಗುತ್ತಿರುವವರು.

ಐಟಿ ಬಗ್ಗೆ ಅಂಬಿಗೆ ತಿಳಿಯ ಹೇಳಿದ ರಮ್ಯಾ
ಹಾಗಾಗಿ ಸವಿನಯವಾಗಿಯೇ ಅಂಕಲ್ ನಮ್ ಮಂಡ್ಯದ ವೆರೈಟಿ ಜನಕ್ಕೆ ಐಟಿನೂ ಬೇಕು ಅಂಕಲ್. ನೀವು ಅಂದುಕೊಂರುವ ಹಾಗೆ ನಮ್ ಮಂಡ್ಯ ಕಡೆ ಇನ್ನೂ ಐಟಿ ತಲೆ ಹಾಕಿಲ್ಲ ಅಂದ್ಕೋಬೇಡಿ, ಎಷ್ಟೇ ಆಗಲಿ ಆಗಲಿ ನಮ್ ರಾಜ್ಯಕ್ಕೆ ಐಟಿಯನ್ನು ತಂದವರೇ ನಮ್ ಎಸ್ ಎಂ ಕೃಷ್ಣ ಅಂಕಲ್. ಅವರು ಸಿಎಂ ಆಗಿದ್ದ ಕಾಲದಲ್ಲೇ ನಮ್ ಜನ ಕಂಪ್ಯೂಟರಿಗೆ ಫಿದಾ ಆಗಿದ್ದಾರೆ ಎಂಬರ್ಥದಲ್ಲಿ ಅಂಬಿಗೆ ತಿಳಿಯ ಹೇಳಿದ್ದಾರೆ. ಈ ಬಗ್ಗೆ ಮೂರು ಟ್ವೀಟ್ ಗಳನ್ನೂ ಮಾಡಿದ್ದಾರೆ. ಅವುಗಳನ್ನು ನೀವೇ ನೋಡಿ.












Click it and Unblock the Notifications