ಕರ್ನಾಟಕದ 16 ಜಿಲ್ಲೆಗಳಲ್ಲಿ ಫೆಬ್ರವರಿ 18 ರಿಂದ 20ರವರೆಗೆ ಮಳೆ
ಬೆಂಗಳೂರು,ಫೆಬ್ರವರಿ 16: ಕರ್ನಾಟಕದ 16 ಜಿಲ್ಲೆಗಳಲ್ಲಿ ಫೆಬ್ರವರು 18 ರಿಂದ 20ರವರೆಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ದಕ್ಷಿಣ ಕನ್ನಡ,ಉಡುಪಿ,ಉತ್ತರ ಕನ್ನಡ, ಬೆಳಗಾವಿ,ಬೀದರ್,ಧಾರವಾಡ,ಹಾವೇರಿ,ಕಲಬುರಗಿ,ಚಿಕ್ಕಮಗಳೂರು,ಹಾಸನ,ಕೊಡಗು,ಶಿವಮೊಗ್ಗದಲ್ಲಿ ಫೆಬ್ರವರಿ 20ರವೆರೆಗ ಮಳೆಯಾಗಲಿದೆ.
ದಾವಣಗೆರೆಯಲ್ಲಿ 12. ಡಿಗ್ರಿ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಉಳಿದಂತೆ ಫೆಬ್ರವರಿ 18ರವರೆಗೆ ರಾಜ್ಯದ ವಿವಿಧೆಡೆ ಒಣಹವೆ ಮುಂದುವರೆಯಲಿದೆ.ಬೆಂಗಳೂರಿನಲ್ಲಿ ಬೆಳಗ್ಗೆ ಮಂಜುಕವಿದ ವಾತಾವರಣವಿದ್ದು, ಗರಿಷ್ಠ 31 ಡಿಗ್ರಿ ಸೆಲ್ಸಿಯಸ್,ಕನಿಷ್ಠ 17 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.

ತೆಲಂಗಾಣ,ಚೆನ್ನೈ,ಕೇರಳ, ಮಧ್ಯಪ್ರದೇಶ,ವಿದರ್ಭಾ,ಛತ್ತೀಸ್‌ಗಢದಲ್ಲಿ ಮಳೆಯಾಗುವ ಮುನ್ಸೂಚನೆ ಇದೆ.ಈ ವಾರ ಚೆನ್ನೈನಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ.
ಪುಣೆಯಲ್ಲಿ ಭಾನುವಾರ 13.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿತ್ತು. ಇಡೀ ರಾಜ್ಯದಲ್ಲೇ ಪುಣೆ ಅತ್ಯಂತ ತಂಪಾದ ನಗರವಾಗಿದೆ. ಒಂದೂವರೆ ತಿಂಗಳ ಬಳಿಕ ಮತ್ತೆ ಪ್ರಕ್ಷುಬ್ಧ ಹವಾಮಾನ ನಿರ್ಮಾಣವಾಗಲಿದೆ.
ಹಿಮಾಲಯದಲ್ಲಿ ಚಂಡಮಾರುತವೇಳುತ್ತಿದ್ದು ಅದರ ಪರಿಣಾಮ ಹಲವು ರಾಜ್ಯಗಳ ಮೇಲಾಗಲಿದೆ.ಉತ್ತರಾಖಂಡದಲ್ಲೂ ಮುಂದಿನ ದಿನಗಳಲ್ಲಿ ಮಳೆಯನ್ನು ನಿರೀಕ್ಷಿಸಲಾಗಿದೆ. ಮರಾಠವಾಡ,ಕರ್ನಾಟಕದ ಉತ್ತರ ಒಳನಾಡು, ತೆಲಂಗಾಣ,ತಮಿಳುನಾಡು,ಮಧ್ಯಪ್ರದೇಶದಲ್ಲಿ ಮಳೆಯಾಗಲಿದೆ.












Click it and Unblock the Notifications