Heavy Rain Alert: ರಾಜ್ಯಕ್ಕೆ ತಂಪೆರೆಯಲಿದೆ ಭರಣಿ ಮಳೆ; ಬೆಂಗಳೂರಿಗೂ ಭಾರಿ ಮಳೆ ಮುನ್ಸೂಚನೆ

ತಾಪಮಾನ ಹೆಚ್ಚಳ, ಭಾರಿ ಬಿಸಿಲಿನಿಂದ ಕಂಗೆಟ್ಟಿರುವ ರಾಜ್ಯಕ್ಕೆ ಭರಣಿ ಮಳೆ ತಂಪೆರುವ ಮುನ್ಸೂಚನೆ ಕೊಟ್ಟಿದೆ. ಮೇ ತಿಂಗಳ ಎರಡನೇ ವಾರದಿಂದ ರಾಜ್ಯದಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಏಪ್ರಿಲ್ ತಿಂಗಳಿನಲ್ಲಿ ಶೂನ್ಯ ಮಳೆಯನ್ನು ದಾಖಲಿಸಿರುವ ಬೆಂಗಳೂರು ಕೂಡ ಮಳೆಯನ್ನು ಪಡೆಯಲು ಸಜ್ಜಾಗಿದೆ. ಮೇ 4 ರ ಬಳಿಕ ಬೆಂಗಳೂರಿನಲ್ಲಿ ಮಳೆಯಾಗಲಿದ್ದು, ವಾತಾವರಣ ತಂಪಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯಲ್ಲಿ ತಿಳಿಸಿದೆ.

Rain Alert Many Districts of Karnataka Expect Heavy Rain From May 7th to May 15th

ಮೇ 15ರವರೆಗೆ ರಾಜ್ಯದಲ್ಲಿ ಮಳೆಯ ಮುನ್ಸೂಚನೆ ನೀಡಲಾಗಿದ್ದು ಮೇ ಮೊದಲ ವಾರ ಕೆಲವು ಜಿಲ್ಲೆಗಳಲ್ಲಿ ಮಳೆಯಾದರೆ, ಎರಡನೇ ವಾರದಲ್ಲಿ ಮಳೆ ಮತ್ತಷ್ಟು ಹೆಚ್ಚಾಗಲಿದೆ.

ಯಾವ ಜಿಲ್ಲೆಗಳಲ್ಲಿ ಮಳೆ

ಮೇ 1 ರಿಂದ ಮೇ 7 ರವರೆಗೆ ಕೊಡಗು, ಚಿಕ್ಕಮಗಳೂರು, ದ.ಕ-ಉಡುಪಿ ಘಾಟ್‌ಗಳು, ಬೆಳಗಾವಿ, ಧಾರವಾಡ, ಹಾವೇರಿ, ಶಿವಮೊಗ್ಗ ಮತ್ತು ಚಾಮರಾಜನಗರದಲ್ಲಿ ಚದುರಿದಂತೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿಯಲ್ಲಿ ತಿಳಿಸಿದೆ.

ಮೇ 7 ರಿಂದ ಮೇ 15 ರವರೆಗೆ ಮೈಸೂರು, ಹಾಸನ, ಬೆಂಗಳೂರು, ರಾಮನಗರ, ಮಂಡ್ಯ, ಚಾಮರಾಜಮಗರ, ತುಮಕೂರು, ಕೋಲಾರ, ಸಿ.ಬಿ.ಪುರ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ದಕ್ಷಿಣ ಕನ್ನಡ, ಉಡುಪಿ ಘಾಟ್‌ಗಳಲ್ಲಿ ವ್ಯಾಪಕ ಮಳೆಯಾಗಲಿದೆ.

ಬೆಳಗಾವಿ, ಧಾರವಾಡ, ದಾವಣಗೆರೆ, ಹಾವೇರಿ ಮತ್ತು ಗದಗದಲ್ಲಿ ಅಲ್ಲಲ್ಲಿ ತುಂತುರು ಮಳೆಯಾಗುವ ಸಾಧ್ಯತೆ ಇದೆ. ಏಪ್ರಿಲ್ ತಿಂಗಳಿಗಿಂತ ಮೇ ತಿಂಗಳಿನಲ್ಲಿ ರಾಜ್ಯದಲ್ಲಿ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಮುಂದಿನ 2 ದಿನಗಳಲ್ಲಿ ಕೊಡಗು ಮತ್ತು ಚಾಮರಾಜನಗರ ಮತ್ತು ನೀಲಗಿರಿಯಲ್ಲಿ ತುಂತುರು ಮಳೆ ಆರಂಭವಾಗಲಿದೆ. ಮೇ 5 ರ ನಂತರ ಬೆಂಗಳೂರಿನಲ್ಲಿ ಮಳೆಯಾಗುವುದು ಬಹುತೇಕ ಖಚಿತವಾಗಿದೆ.

ತಂಪಾಗಲಿದೆ ಬೆಂಗಳೂರು!

ತಾಪಮಾನ ಹೆಚ್ಚಳದಿಂದ ಬೆಂಗಳೂರು ಕಂಗೆಟ್ಟಿದೆ. ಮಳೆ ಬಂದ್ರೆ ಸಾಕಪ್ಪಾ ಎಂದು ಜನ ಕಾಯುತ್ತಿದ್ದಾರೆ. ಈಗ ಬೆಂಗಳೂರಿಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ಕೊಟ್ಟಿರುವುದು ನೆಮ್ಮದಿ ತರಿಸಿದೆ.

ಮೇ 5ರಂದು ಬೆಂಗಳೂರಿನಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದ್ದು, ಮೇ 6ರಂದು ಉತ್ತಮ ಮಳೆಯಾಗಲಿದೆ ಎಂದು ಹೇಳಿದೆ.

ಕೊಡಗಿನಲ್ಲಿ ಮಳೆ

ಬುಧವಾರ ಕೊಡಗಿನ ಗಡಿ ಭಾಗ ಮೈಸೂರು ಜಿಲ್ಲೆಯ ಕೊಪ್ಪ, ರಾಣಿಗೇಟ್ ಇನ್ನಿತರ ಕಡೆಗಳಲ್ಲಿ ಮಳೆಯಾಗಿದೆ. ಮಂಗಳವಾರ ಹಾವೇರಿಯಲ್ಲಿ ಆಲಿಕಲ್ಲು ಸಹಿತ ವ್ಯಾಪಕ ಮಳೆಯಾಗಿತ್ತು. ಬೆಳಗಾವಿ ಜಿಲ್ಲೆಗಳಲ್ಲಿ ಕೂಡ ಉತ್ತಮ ಮಳೆಯಾಗುತ್ತಿದ್ದು, ಇಂದು ಕೂಡ ಮಳೆ ಮುಂದುವರೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+