Heavy Rain: ಮಳೆ.. ಮಳೆ.. ಮುಂದಿನ 7 ದಿನ ಭಾರಿ ಮಳೆ ಎಚ್ಚರಿಕೆ!

ಮಳೆ ಅಬ್ಬರಿಸುತ್ತಿದ್ದು, ಎಲ್ಲೆಲ್ಲೂ ಮಳೆರಾಯ ತನ್ನ ರೌದ್ರಾವತಾರ ತೋರಿಸುತ್ತಿದ್ದಾನೆ. ಈ ನಡುವೆ ಕರ್ನಾಟಕದ ಒಳನಾಡು ಪ್ರದೇಶದಲ್ಲಿ ಮಳೆ ಅಬ್ಬರ ಸ್ವಲ್ಪ ಕಡಿಮೆ ಆಗಿದೆ ಅಂತಾ ಕೊರಗುವ ಸಮಯದಲ್ಲೇ ಮತ್ತೊಮ್ಮೆ ಭರ್ಜರಿ ಮಳೆಯ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಹಾಗಾದ್ರೆ ಯಾವೆಲ್ಲಾ ಜಿಲ್ಲೆಗಳಿಗೆ ಭರ್ಜರಿ ಮಳೆ ಬೀಳಲಿದೆ? ಮುಂದಿನ 7 ದಿನಗಳ ಕಾಲ ಮಳೆ ಅಬ್ಬರಿಸುವ ಕರ್ನಾಟಕದ ಜಿಲ್ಲೆಗಳು ಯಾವುವು? ಬನ್ನಿ ಸಂಪೂರ್ಣ ಮಾಹಿತಿ ತಿಳಿಯೋಣ.

ಕರ್ನಾಟಕ ರಾಜ್ಯದಲ್ಲಿ ತುಂತುರು ಮಳೆ, ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಮಳೆ ಬೀಳಲಿದೆ. ಈ ಮೂಲಕ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಇದೀಗ ಹವಾಮಾನ ಇಲಾಖೆ ವರದಿ ಮಾಹಿತಿ ನೀಡಿದೆ. ಜೂನ್ 21 ರಿಂದ 7 ದಿನಗಳ ಕಾಲ ಕರ್ನಾಟಕದ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಮಳೆ ಅಬ್ಬರಿಸಲಿದೆ ಜೂನ್ 21 ರಿಂದ 28 ರವರೆಗೆ ಕರಾವಳಿ ಜಿಲ್ಲೆಗಳಲ್ಲಿ & ಮಲೆನಾಡು ಪ್ರದೇಶಗಳಲ್ಲಿ ಕೂಡ ಮಳೆ ಅಬ್ಬರ ತೋರಿಸಲಿದೆ. ಹೀಗಾಗಿ ಅಲರ್ಟ್ ಘೋಷಿಸಿ ಹವಾಮಾನ ಇಲಾಖೆ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಲು ತಿಳಿಸಿದ್ದಾರೆ. ಮಳೆ ಅಬ್ಬರಿಸುವ ಕರ್ನಾಟಕದ ಜಿಲ್ಲೆಗಳು ಯಾವುವು? ಮುಂದೆ ಓದಿ.

Rain Alert Has Been Given For The Karnataka For Next 7 Days From 21st Of June 2024

ತುಂಬಿ ಹರಿದ ನದಿ & ಹಳ್ಳಗಳು!

ಕರ್ನಾಟಕದಲ್ಲಿ ಮುಂಗಾರು ಮಳೆ ಅಬ್ಬರ ಜೋರಾಗಿದ್ದು ಮಳೆ ಅಬ್ಬರಕ್ಕೆ ನದಿ & ತೊರೆಗಳು & ಹಳ್ಳಗಳು ತುಂಬಿ ಹರಿಯುತ್ತಿವೆ. ಭಾರಿ ಮಳೆ ಕಾರಣ ಈಗಾಗಲೇ ಅಗತ್ಯವಾದ ಕ್ರಮವನ್ನ ಕೂಡ ಕೈಗೊಳ್ಳಲಾಗಿದೆ. ಇದೀಗ ಮುಂದಿನ 7 ದಿನಗಳ ಕಾಲ ಭಾರಿ ಮಳೆ ಬೀಳುವ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಜೂನ್ 21 ರಿಂದ ಕರ್ನಾಟಕದ ಕರಾವಳಿ ಜಿಲ್ಲೆಗಳು ಸೇರಿ ಮಲೆನಾಡು ಭಾಗದಲ್ಲಿ ಭರ್ಜರಿ ಮಳೆ ಬೀಳಲಿದೆ ಎಂದು ಮುನ್ಸೂಚನೆ ಸಿಕ್ಕಿದೆ.

ರಾಜಧಾನಿ ಬೆಂಗಳೂರು ಸೇರಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲೂ ಭರ್ಜರಿ ಮಳೆ ಪಕ್ಕಾ ಎನ್ನಲಾಗಿದೆ. ಜೂನ್ 21 ರಿಂದ ಕರ್ನಾಟಕದ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿಯು ಮಳೆ ಆರಂಭ ಆಗಲಿದ್ದು, ಜುಲೈ ಮೊದಲ ವಾರದವರೆಗೂ ಭಾರಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ತಿಳಿಸಿದ್ದು, ಶಿವಮೊಗ್ಗ, ಚಿಕ್ಕಮಗಳೂರು, ಮೈಸೂರು, ಕೊಡಗು, ಉಡುಪಿ, ಚಾಮರಾಜನಗರ ಜಿಲ್ಲೆ, ಮಂಡ್ಯ, ಮಂಗಳೂರು & ಉತ್ತರ ಕನ್ನಡ, ತುಮಕೂರು, ಹಾಸನ, ಚಿತ್ರದುರ್ಗ, ಬೆಳಗಾವಿ, ದಾವಣಗೆರೆಯ ಹಲವು ಪ್ರದೇಶದಲ್ಲಿ ಮಳೆ ಅಬ್ಬರಿಸಲಿದೆ.

ಉತ್ತರ ಕರ್ನಾಟಕದಲ್ಲೂ ಮಳೆ.. ಮಳೆ..

ಮತ್ತೊಂದು ಕಡೆ ಉತ್ತರ ಕರ್ನಾಟಕದ ವಿಜಯಪುರ, ಯಾದಗಿರಿ, ಕಲಬುರಗಿ, ರಾಯಚೂರು, ಬೀದರ್, ಬಾಗಲಕೋಟೆ, ಬೆಳಗಾವಿ, ಬಳ್ಳಾರಿ & ಕೊಪ್ಪಳದಲ್ಲಿ ಕೂಡ ಮಳೆ ಅಬ್ಬರಿಸಲಿದೆ. ಈ ಮೂಲಕ ಮುಂದಿನ ಕೆಲ ದಿನಗಳ ಕಾಲ ಕರ್ನಾಟಕ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಅಬ್ಬರಿಸುವುದು ಪಕ್ಕಾ ಆಗಿದೆ. ಬೆಂಗಳೂರಿನಲ್ಲಿ ಇಂದು ಮಳೆ ಬಿದ್ದಿದ್ದು, ಮುಂದಿನ 7 ದಿನ ಇದೇ ರೀತಿ ಮಳೆ ಅಬ್ಬರಿಸುವ ಸೂಚನೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+