ಜುಲೈ 25 ತನಕ ಮಳೆ.. ಮಳೆ.. ಭಾರಿ ಭರ್ಜರಿ ಮಳೆ... Rain Alert
ಕರ್ನಾಟಕದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಇದೀಗ ಮಳೆರಾಯ ತನ್ನ ಅಬ್ಬರವನ್ನು ತೋರಿಸುತ್ತಿದ್ದಾನೆ. ಭಾರಿ ಪ್ರಮಾಣದಲ್ಲಿ ಮಳೆ ಬೀಳುತ್ತಿದ್ದು, ಮಳೆಯ ಆರ್ಭಟ ಕಂಡು ಕರ್ನಾಟಕದ ಜನರು ಚಿಂತೆ ಮಾಡುವ ಸ್ಥಿತಿ ಎದುರಾಗಿದೆ. ಮಳೆ ಬೀಳುತ್ತಿರುವ ರೀತಿ ನೋಡಿದರೆ ಇನ್ನೇನು ಕೆಲವೇ ದಿನಗಳಲ್ಲಿ ಅತಿಯಾದ ಮಳೆ ಕಾರಣ ದೊಡ್ಡ ಸಮಸ್ಯೆ ಸೃಷ್ಟಿಯಾಗುವ ಭಯ ಕಾಡುತ್ತಿದೆ. ಇದೇ ಸಮಯದಲ್ಲಿ, ಜುಲೈ 25 ತನಕ ಮಳೆ.. ಮಳೆ.. ಭಾರಿ ಭರ್ಜರಿ ಮಳೆ ಗ್ಯಾರಂಟಿ ಆಗಿದೆ.
ಮಳೆ.. ಮಳೆ.. ಮಳೆ.. ಎಲ್ಲೆಲ್ಲೂ ಬರೀ ಮಳೆಯ ಸದ್ದೇ ಕೇಳಿ ಬರುತ್ತಿದ್ದು, ಜನರಿಗೂ ಬೇಸರವಾಗಿದೆ. ಹೌದು, ಕರ್ನಾಟಕ ರಾಜ್ಯದಲ್ಲಿ ಭಾರಿ ಭರ್ಜರಿ ಮಳೆ ಸುರಿಯುತ್ತಿರುವ ಕಾರಣಕ್ಕೆ ಜೂನ್ ತಿಂಗಳಲ್ಲೇ ಈ ಬಾರಿ ಜಲಾಶಯಗಳು ಅಂದ್ರೆ ಡ್ಯಾಂಗಳು ತುಂಬಿ ತುಳುಕಲು ಶುರು ಮಾಡಿವೆ. ಈ ಕಾರಣಕ್ಕೆ ರೈತರು ಹಾಗೂ ಕನ್ನಡ ನಾಡಿನ ಕನ್ನಡಿಗರು ಕೂಡ ಈ ವಿಚಾರದಲ್ಲಿ ಸಖತ್ ಖುಷಿ ಖುಷಿಯಾಗಿದ್ದಾರೆ. ಅದರಲ್ಲೂ, ಬೆಂಗಳೂರಿಗೆ ಕುಡಿಯುವ ನೀರು ನೀಡುವ ಕೃಷ್ಣರಾಜ ಸಾಗರ ಅಂದ್ರೆ ನಮ್ಮ ಕೆಆರ್‌ಎಸ್ ಈಗ ಫುಲ್ ತುಂಬಿ ತುಳುಕುತ್ತಿದ್ದು ತಮಿಳುನಾಡಿಗೆ ಈಗಾಗಲೇ ಸುಮಾರು 100 ಟಿಎಂಸಿ ನೀರು ಜುಲೈ ತಿಂಗಳಲ್ಲಿ ಹರಿದು ಹೋಗಿದೆ. ಇನ್ನು ಗರಿಷ್ಠ 124.80 ಅಡಿ ಇರುವ ಕೆಆರ್‌ಎಸ್ ಜಲಾಶಯ ಪೂರ್ಣವಾಗಿದೆ.

ಯಾವ ಯಾವ ಜಿಲ್ಲೆಗಳಲ್ಲಿ ಮಳೆ?
ಹಾಗೇ ಆಲಮಟ್ಟಿ ಡ್ಯಾಂ ಕೂಡ ತುಂಬಿ ತುಳುಕುತ್ತಿದ್ದು ತುಂಗಭದ್ರಾ ಡ್ಯಾಂ ಸೇರಿದಂತೆ ಇದೀಗ ಕರ್ನಾಟಕದ ಬಹುತೇಕ ಎಲ್ಲಾ ದೊಡ್ಡ, ದೊಡ್ಡ ಡ್ಯಾಂಗಳು ತುಂಬಿ ಹೋಗಿವೆ. ಹೀಗಿದ್ದರೂ ಮತ್ತೆ ಇದೀಗ ಭಾರಿ ಮಳೆಯ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಅದರಲ್ಲೂ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು ಸೇರಿ ಮಂಡ್ಯ, ಮೈಸೂರು ಭಾಗದಲ್ಲಿ ಭಾರಿ ಮಳೆ ಸುರಿಯುವ ಎಚ್ಚರಿಕೆಯನ್ನ ನೀಡಲಾಗಿದೆ.
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ & ರಾಮನಗರ ಮತ್ತು ತುಮಕೂರು, ಮಂಡ್ಯ, ಮೈಸೂರು ಭಾಗದಲ್ಲಿ ಭಾರಿ ಮಳೆ ಸುರಿಯುವ ಎಚ್ಚರಿಕೆಯ ನೀಡಲಾಗಿದೆ. ಚಾಮರಾಜನಗರ, ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲೂ ಮಳೆಯು ಸುರಿಯಲಿದೆ ಅಂತಾ ಮುನ್ಸೂಚನೆ ಸಿಕ್ಕಿದೆ.
ಮುಂದಿನ 4 ದಿನಗಳ ಕಾಲ...
ಕೋಲಾರ, ಚಿಕ್ಕಬಳ್ಳಾಪುರ ಸೇರಿ ಸುತ್ತಮುತ್ತಲ ಭಾಗದಲ್ಲಿ ಭಾರಿ ಮಳೆ ಬೀಳಲಿದೆ. ಇನ್ನ ಬೆಳಗಾವಿ, ಹುಬ್ಬಳ್ಳಿ & ಧಾರವಾಡ, ಯಾದಗಿರಿ, ರಾಯಚೂರು, ಕೊಪ್ಪಳ, ಕಲಬುರಗಿ, ಗದಗ, ಬೀದರ್ ಬಳ್ಳಾರಿ ಜಿಲ್ಲೆಯಲ್ಲಿ ಕೂಡ ಮಳೆರಾಯ ಆರ್ಭಟ ತೋರಿಸಲಿದ್ದಾನೆ. ಹೀಗೆ ಕರ್ನಾಟಕದ ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಮಳೆಯು ತನ್ನ ಆರ್ಭಟ ತೋರಿಸಲಿರುವ ಕಾರಣ ಹಲವು ಜಿಲ್ಲೆಗಳಲ್ಲಿ ಮುಂದಿನ 4 ದಿನಗಳ ಕಾಲ ದೊಡ್ಡ ಅವಾಂತರ ಸೃಷ್ಟಿಯಾಗುವ ಭಯ ಕೂಡ ಕಾಡುತ್ತಿದೆ. ಹಲವು ಜಿಲ್ಲೆಗಳಲ್ಲಿ ಮುಂಜಾಗ್ರತಾ ಕ್ರಮ ಕೂಡ ಕೈಗೊಂಡು ಎಚ್ಚರಿಕೆ ವಹಿಸಲಾಗಿದೆ.












Click it and Unblock the Notifications