Karnataka Rains: ಮಳೆ... ಮಳೆ... ಮುಂದಿನ 48 ಗಂಟೆಗಳ ಕಾಲ ಭಾರಿ ಅಬ್ಬರಿಸಲಿದೆ ಮಳೆ!

ಮಳೆರಾಯ ಅಬ್ಬರಿಸುತ್ತಿದ್ದಾನೆ, ಅಕಾಲಿಕ ಮಳೆಯ ಕಾರಣಕ್ಕೆ ಕನ್ನಡಿಗರು ಕೂಡ ಬೆಚ್ಚಿಬಿದ್ದು ಕೂರುವಂತೆ ಆಗಿದೆ. ಅದರಲ್ಲೂ, ನವೆಂಬರ್ ತಿಂಗಳಲ್ಲಿ ಸುರಿದ ಮಳೆಯನ್ನೇ ಕನ್ನಡಿಗರು ಇನ್ನೂ ಸುಧಾರಿಸಿಕೊಂಡಿಲ್ಲ. ಹೀಗಿದ್ದಾಗಲೇ ಡಿಸೆಂಬರ್ ತಿಂಗಳಲ್ಲಿ ಕೂಡ ಭಾರಿ ಮಳೆಯ ಕಾರಣಕ್ಕೆ ಕನ್ನಡಿಗರು ನರಳುವಂತೆ ಆಗಿದೆ. ಇದೀಗ ಮತ್ತೆ ಮಳೆಯ ಎಚ್ಚರಿಕೆಯನ್ನ ನೀಡಿ ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ, ಮುಂದಿನ 48 ಗಂಟೆಗಳ ಕಾಲ ನಮ್ಮ ರಾಜ್ಯದ ಈ ಜಿಲ್ಲೆಗಳಲ್ಲಿ ಭಾರಿ ಮಳೆ ಅಬ್ಬರಿಸಲಿದೆ!

ಮಳೆ ಗ್ಯಾಪ್ ಕೊಡದೆ ತನ್ನ ಅಬ್ಬರ ತೋರಿಸುತ್ತಿದ್ದು, ಜನರು ಕೂಡ ಹೀಗೆ ಭಾರಿ ಮಳೆ ಕಾಟಕ್ಕೆ ಬೆಚ್ಚಿ ಬಿದ್ದಿದ್ದಾರೆ. ಹವಾಮಾನ ವೈಪರಿತ್ಯದ ಹಿನ್ನೆಲೆ ಭಾರಿ ಘೋರವಾಗಿ ಮಳೆ ಅಬ್ಬರಿಸುತ್ತಿದ್ದು ಈ ಬಾರಿ ಡಿಸೆಂಬರ್ ತಿಂಗಳಲ್ಲಿ ಕೂಡ ಭಾರಿ ಮಳೆಯು ಬೀಳ್ತಿದ್ದು, ಜನ ಕೂಡ ಈ ಬಗ್ಗೆ ಚಿಂತೆ ಮಾಡುವಂತೆ ಆಗಿದೆ. ಇದು ಮಾತ್ರವಲ್ಲ, ಮತ್ತಷ್ಟು ಜೋರಾಗಿ ಮಳೆ ಸುರಿಯುವ ಕುರಿತು ಇದೀಗ ಮತ್ತೆ ಮುನ್ನೆಚ್ಚರಿಕೆ ನೀಡಲಾಗಿದೆ. ಮುಂದಿನ 48 ಗಂಟೆಗಳ ಕಾಲ ಮಳೆ ಅಬ್ಬರಿಸುವ ಮುನ್ಸೂಚನೆ ಸಿಕ್ಕಿದ್ದು, ಯಾವೆಲ್ಲಾ ಜಿಲ್ಲೆಗಳಲ್ಲಿ ಮಳೆ ಬೀಳಲಿದೆ? ಮುಂದೆ ಓದಿ.

Rain Alert Given To Karnataka From December 8th Of 2024

ಮಳೆ.. ಮಳೆ.. ಈ ಜಿಲ್ಲೆಗಳಲ್ಲಿ...

ಡಿಸೆಂಬರ್ 8 ಅಂದ್ರೆ ಇಂದು, ಬೆಂಗಳೂರಿನಲ್ಲಿ ಖಾಲಿ ಆಕಾಶ ಇದ್ದರೂ ನಾಳೆಯಿಂದ ಭಾರಿ ಮಳೆ ಸುರಿಯುವ ಸಾಧ್ಯತೆ ದಟ್ಟವಾಗಿದೆ. ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಜಿಲ್ಲೆಗಳಲ್ಲಿ ಇಂದು ಭಾರಿ ಮಳೆ ಸುರಿಯುವ ಮುನ್ನೆಚ್ಚರಿಕೆ ನೀಡಲಾಗಿದೆ. ಹಾಗೇ, ಡಿಸೆಂಬರ್ 8ಕ್ಕೆ ಕೂಡ ಭಾರಿ ಮಳೆ ಸುರಿಯುವ ಮುನ್ಸೂಚನೆ ನೀಡಲಾಗಿದ್ದು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಜಿಲ್ಲೆ ಸೇರಿ ಉತ್ತರ ಕನ್ನಡ ಜಿಲ್ಲೆಗೂ ಮಳೆ ಕಂಟಕ ಎದುರಾಗಿದೆ. ಅದರಲ್ಲೂ ಕರಾವಳಿ ಭಾಗದಲ್ಲಿ ಈ ಸಂದರ್ಭದಲ್ಲಿ ಭಾರಿ ಮಳೆಯ ಮುನ್ನೆಚ್ಚರಿಕೆ ನೀಡಲಾಗುತ್ತಿದೆ.

ನಮ್ಮ ಬೆಂಗಳೂರಿಗೂ ಕಾದಿದೆಯ ಕಂಟಕ?

ಡಿಸೆಂಬರ್ 9ರ ಸೋಮವಾರ ಬೆಂಗಳೂರಲ್ಲಿ ಕೂಡ ಭಾರಿ ಮಳೆ ಬೀಳುವ ಮುನ್ಸೂಚನೆಯ ನೀಡಲಾಗಿದ್ದು, ಹುಬ್ಬಳ್ಳಿ-ಧಾರವಾಡ, ಕುಂದಾನಗರಿ ಬೆಳಗಾವಿ ಜಿಲ್ಲೆಗಳು ಸೇರಿದಂತೆ ಉತ್ತರ ಕನ್ನಡ ಜಿಲ್ಲೆ & ಉಡುಪಿ ಹಾಗೂ ಮಂಗಳೂರು ಭಾಗದಲ್ಲಿ ಕೂಡ ಭಾರಿ ಮಳೆಯ ಕುರಿತು ಮುನ್ನೆಚ್ಚರಿಕೆ ನೀಡಲಾಗಿದೆ.

ಮತ್ತೊಂದು ಕಡೆ ಮತ್ತೆ ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶ ನಿರ್ಮಾಣ ಆಗುತ್ತಿದೆ. ಹೀಗಾಗಿ ಹವಾಮಾನ ವೈಪರೀತ್ಯ ಪರಿಣಾಮ ಡಿಸೆಂಬರ್ 12 ಬಳಿಕ ಮತ್ತಷ್ಟು ಮಳೆ ಸುರಿಯುವ ಎಚ್ಚರಿಕೆ ಸಿಕ್ಕಿದೆ. ಹೀಗಾಗಿ ಬೆಂಗಳೂರಿನ ಜನಗಳು ಕೂಡ ತಲೆ ಮೇಲೆ ಕೈಹೊತ್ತು ಕೂರುವಂತೆ ಆಗಿದ್ದು, ಮತ್ತೊಂದು ರೌಂಡ್ ಬೆಂಗಳೂರಿನಲ್ಲಿ ಮಳೆ ಅಬ್ಬರಕ್ಕೆ ವೇದಿಕೆ ಸಿದ್ಧವಾಗಿದೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+