Video: ಸರ್ಕಾರಿ ಆಸ್ಪತ್ರೆಯ ಐಸಿಯುನಲ್ಲೇ ಇಂಥಾ ಸ್ಥಿತಿಯೇ? ರೋಗಿಯ ಬೆಡ್ ಮೇಲೆ ಹುಳುಗಳ ಓಡಾಟ! JDS ಗರಂ
ಬೆಂಗಳೂರು: ರಾಜ್ಯ ಸರ್ಕಾರ, ಆರೋಗ್ಯ ಇಲಾಖೆ ಸಚಿವರು ಅದೆಷ್ಟೇ ಎಚ್ಚರಿಕೆ ಕೊಟ್ಟರೂ ಸಹಿತ ಕೆಲವು ಸರ್ಕಾರಿ ಆಸ್ಪತ್ರೆಗಳಲ್ಲಿ ಆಗಾಗ ಚಿಕಿತ್ಸೆ, ನೈರ್ಮಲ್ಯ ವಿಚಾರವಾಗಿ, ವೈದ್ಯರ ನಿರ್ಲಕ್ಷ್ಯಕ್ಕೆ ಸಂಬಂಧಿಸಿದಂತೆ ಅಹಿಕತರ ಘಟನೆಗಳು ಸಂಭವಿಸುತ್ತಲೇ ಇವೆ . ಇದೀಗ ರಾಯಚೂರಿನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಐಸಿಯುನಲ್ಲಿ ಅಪಘಾತಕ್ಕೀಡಾದ ರೋಗಿಗೇ ಸರಿಯಾಗಿ ಚಿಕಿತ್ಸೆ ಕೊಡದೇ ಅವರ ಮೈಮೇಲೆ ಹುಳುಗಳ ಓಡಾಡಿದ ಘಟನೆ ನಡೆದಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಆರೋಗ್ಯ ಇಲಾಖೆ, ವೈದ್ಯರ ನಿರ್ಲಕ್ಷ್ಯ ವಿರುದ್ಧ ಜೆಡಿಎಸ್ ಕಿಡಿ ಕಾರಿದೆ.
ರಾಯಚೂರಿನ ಒಪೆಕ್ (OPEC) ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಈ ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕವಾಗಿ ವ್ಯಾಪಕ ಆಕ್ರೋಶ ಸಹ ವ್ಯಕ್ತವಾಗಿದೆ. ಈ ಕುರಿತು ಟ್ವಿಟ್ ಮಾಡಿರುವ ಜೆಡಿಎಸ್, ಒಪೆಕ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಐಸಿಯುನಲ್ಲಿ ಅಪಘಾತಕ್ಕೀಡಾದ ಮಹಿಳೆಗೆ ಸೂಕ್ತ ಚಿಕಿತ್ಸೆ ನೀಡದೇ ನಿರ್ಲಕ್ಷ್ಯ ವಹಿಸಲಾಗಿದೆ. ರೋಗಿ ಮಲಗಿದ್ದ ಬೆಡ್‌ನ ಹೊದಿಕೆಯ ಮೇಲೆ ಹುಳುಗಳು ಹರಿದಾಡುತ್ತಿರುವುದು ರಾಜ್ಯದ ಆರೋಗ್ಯ ವ್ಯವಸ್ಥೆಯ ಜೀವಂತ ಶವಪೆಟ್ಟಿಗೆಯಂತಿದೆ! ಎಂದು ಜೆಡಿಎಸ್ ತೀವ್ರ ಬೇಸರ ಹೊರ ಹಾಕಿದೆ.

ಸರಿಯಾದ ಡ್ರೆಸ್ಸಿಂಗ್, ಸಕಾಲಿಕ ಚಿಕಿತ್ಸೆ ನೀಡದ ವೈದ್ಯರು
ರೋಗಿಗೆ ಸರಿಯಾದ ಡ್ರೆಸ್ಸಿಂಗ್ ಮತ್ತು ಸಕಾಲಿಕ ಚಿಕಿತ್ಸೆ ನೀಡದ ವೈದ್ಯರು ಹಾಗೂ ಸಿಬ್ಬಂದಿಯ ಅಮಾನವೀಯ ನಿರ್ಲಕ್ಷ್ಯವೇ ಇದಕ್ಕೆ ನೇರ ಕಾರಣ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲೇ ಇಂತಹ ಘೋರ ಪರಿಸ್ಥಿತಿ ಇರುವುದನ್ನು ನೋಡಿದರೆ ಕಾಂಗ್ರೆಸ್ ಸರ್ಕಾರದ ಆಡಳಿತದ ಬಗ್ಗೆ ಅಸಹ್ಯ ಹುಟ್ಟಿಸುತ್ತದೆ ಎಂದು ತಿಳಿಸಿದೆ.
ಆರೋಗ್ಯ ಸಚಿವ ಯುಟಿ ಖಾದರ್ ಅವರೇ, ಕೇವಲ ಪ್ರಚಾರದಲ್ಲಿ ಮುಳುಗಿರುವ ನೀವು ಬಡವರ ಜೀವದ ಜೊತೆ ಚೆಲ್ಲಾಟವಾಡುವುದನ್ನು ನಿಲ್ಲಿಸಿ. ಕೂಡಲೇ ಈ ಘಟನೆಗೆ ಕಾರಣರಾದ ವೈದ್ಯರು ಹಾಗೂ ಸಿಬ್ಬಂದಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್ ಆಗ್ರಹಿಸಿದೆ.
ಆಸ್ಪತ್ರೆಯಲ್ಲಿ ಆಗಿದ್ದೇನು?
ಕಳೆದ ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು (ರೋಗಿ) ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಮೈಮೇಲಿನ ಕೆಂಪು ಹೊದಿಕೆ ಮೇಲೆ ಹುಳುಗಳ ಸತ್ತು ಬಿದ್ದಿರುವ ದೃಶ್ಯ ಕಂಡು ಬಂದಿವೆ. ತಲೆಗೆ ಗಾಯವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ. ಸರಿಯಾಗಿ ಡ್ರೆಸ್ಸಿಂಗ್ ಮಾಡದ ಕಾರಣ ಗಾಯದಲ್ಲಿ ಹುಳುಗಳು ಪತ್ತೆಯಾಗಿವೆ ಎಂಬ ಆರೋಪ ಕೇಳಿ ಬಂದಿದೆ.
ಮೂರು ದಿನಗಳಿಂದ ರೋಗಿಯ ಗಾಯಕ್ಕೆ ಡ್ರೆಸ್ಸಿಂಗ್ ಮಾಡಿಲ್ಲ. ಮಂಗಳವಾರ ಡ್ರೆಸ್ಸಿಂಗ್ ಮಾಡಲು ಬ್ಯಾಂಡೇಜ್ ತೆಗೆದಾಗ ಗಾಯದಲ್ಲಿ ಹುಳಗಳು ಕಂಡು ಬಂದಿವೆ. ಇದನ್ನು ನೋಡಿ ಕುಟುಂಬಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ವಿಡಿಯೋ ಮಾಡಿರುವ ಕುಟುಂಬಸ್ಥರ ಪೈಕಿ ಒಬ್ಬರು, ಸೂಕ್ತ ಚಿಕಿತ್ಸೆ ನೀಡಬೇಕು. ನಿರ್ಲಕ್ಷ್ಯ ವಹಿಸಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ. ವೈದ್ಯರ ಈ ಅಮಾನವೀಯ ನಡೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.
ರಾಯಚೂರಿನ ಒಪೆಕ್ (OPEC) ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಐಸಿಯುನಲ್ಲಿ ಅಪಘಾತಕ್ಕೀಡಾದ ಮಹಿಳೆಗೆ ಸೂಕ್ತ ಚಿಕಿತ್ಸೆ ನೀಡದೆ, ಹೊದಿಕೆಯ ಮೇಲೆ ಹುಳುಗಳು ಹರಿದಾಡುತ್ತಿರುವುದು ರಾಜ್ಯದ ಆರೋಗ್ಯ ವ್ಯವಸ್ಥೆಯ ಜೀವಂತ ಶವಪೆಟ್ಟಿಗೆಯಂತಿದೆ!ರೋಗಿಗೆ ಸರಿಯಾದ ಡ್ರೆಸ್ಸಿಂಗ್ ಮತ್ತು ಸಕಾಲಿಕ ಚಿಕಿತ್ಸೆ ನೀಡದ ವೈದ್ಯರು ಹಾಗೂ ಸಿಬ್ಬಂದಿಯ ಅಮಾನವೀಯ ನಿರ್ಲಕ್ಷ್ಯವೇ ಇದಕ್ಕೆ ನೇರ ಕಾರಣ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲೇ ಇಂತಹ ಘೋರ ಪರಿಸ್ಥಿತಿ ಇರುವುದನ್ನು ನೋಡಿದರೆ ಕಾಂಗ್ರೆಸ್ ಸರ್ಕಾರದ ಆಡಳಿತದ ಬಗ್ಗೆ ಅಸಹ್ಯ ಹುಟ್ಟಿಸುತ್ತದೆ.ಆರೋಗ್ಯ ಸಚಿವ @utkhader ಅವರೇ, ಕೇವಲ ಪ್ರಚಾರದಲ್ಲಿ ಮುಳುಗಿರುವ ನೀವು ಬಡವರ ಜೀವದ ಜೊತೆ ಚೆಲ್ಲಾಟವಾಡುವುದನ್ನು ನಿಲ್ಲಿಸಿ. ಕೂಡಲೇ ಈ ಘಟನೆಗೆ ಕಾರಣರಾದ ವೈದ್ಯರು ಹಾಗೂ ಸಿಬ್ಬಂದಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು @JanataDal_S ಆಗ್ರಹಿಸುತ್ತದೆ.#Raichur #OPECHospital #MedicalNegligence #CongressFailsKarnataka
— Janata Dal Secular (@JanataDal_S) October 16, 2026


Click it and Unblock the Notifications
