ರಾಹುಲ್ ಗಾಂಧಿ ಭಾನುವಾರದ ಕಾರ್ಯಕ್ರಮಗಳು
ಬೆಂಗಳೂರು, ಫೆ.16 : ಎರಡು ದಿನಗಳ ಕರ್ನಾಟಕ ಪ್ರವಾಸ ಕೈಗೊಂಡಿರುವ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಶನಿವಾರ ಬೆಳಗಾವಿಯಲ್ಲಿ ಭಾರತ್ ನಿರ್ಮಾಣ ಸಮಾವೇಶ ಉದ್ದೇಶಿಸಿ ಮಾತನಾಡಿದ್ದಾರೆ. ನಂತರ ಬೆಂಗಳೂರಿನಲ್ಲಿ ಮಾಧ್ಯಮ ಸಂಪಾದಕರು ಮತ್ತು ವಿದ್ಯಾರ್ಥಿಗಳೊಂದಿಗಿನ ಸಂವಾದ ನಡೆಸಿದ್ದಾರೆ. ಫೆ.16ರ ಭಾನುವಾರ ಸಹ ಹಲವಾರು ಕಾರ್ಯಕ್ರಮಗಳಲ್ಲಿ ರಾಹುಲ್ ಭಾಗವಹಿಸಲಿದ್ದಾರೆ.
ಭಾನುವಾರ ಬೆಳಗ್ಗೆ 12 ಗಂಟೆಗೆ ರಾಹುಲ್ ಗಾಂಧಿ, ತುಮಕೂರಿನಲ್ಲಿ ಮಹಿಳಾ ಸಮಾವೇಶ ಉದ್ಘಾಟಿಸಿ ಮಾತನಾಡಲಿದ್ದಾರೆ. ಇದೇ ಮೊದಲ ಬಾರಿಗೆ ಮಹಿಳಾ ಸಮಾವೇಶವೊಂದರಲ್ಲಿ ಕಾಂಗ್ರೆಸ್‌ನ ಯುವರಾಜ ಪಾಲ್ಗೊಳ್ಳುತ್ತಿದ್ದಾರೆ ಎಂಬುದು ವಿಶೇಷ. ರಾಹುಲ್ ಗಾಂಧಿ ಭಾನುವಾರದ ಕಾರ್ಯಕ್ರಮಗಳ ವಿವರಗಳು ಹೀಗಿವೆ. [ಕುಂದಾನಗರಿಯಲ್ಲಿ ಯುವರಾಜನ ಘರ್ಜನೆ]

* 10.30ಕ್ಕೆ ಹೆಲಿಕಾಪ್ಟರ್ ಮೂಲಕ ಬೆಂಗಳೂರಿನಿಂದ ತುಮಕೂರು ವಿವಿ ಆವರಣಕ್ಕೆ ಆಗಮನ.
* 10.45ಕ್ಕೆ ಸಿದ್ಧಗಂಗಾಮಠಕ್ಕೆ ಭೇಟಿ.
* 11.20ಕ್ಕೆ ಊರುಕೆರೆ ಬಳಿ ನಿರ್ಮಾಣಗೊಂಡಿರುವ 6 ಪಥದ ತುಮಕೂರು-ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ ಉದ್ಘಾಟನೆ.
* 11.40ಕ್ಕೆ ಜೈನ್ ಪಬ್ಲಿಕ್ ಸ್ಕೂಲ್‌ನಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ.
* 12.10ಕ್ಕೆ ಮಹಾತ್ಮಗಾಂಧಿ ಸ್ಟೇಡಿಯಂನಲ್ಲಿ ಮಹಿಳಾ ಸಮಾವೇಶದಲ್ಲಿ ಭಾಗಿ.
* ಮಧ್ಯಾಹ್ನ 1.15ಕ್ಕೆ ಸಿದ್ದಾರ್ಥ ಅತಿಥಿ ಗೃಹದಲ್ಲಿ ವಿಶ್ರಾಂತಿ.
* ಮಧ್ಯಾಹ್ನ 2ಕ್ಕೆ ಗೂಳೂರು, ನಾಗವಲ್ಲಿ, ಹೆಬ್ಬೂರು, ಕುಣಿಗಲ್‌ನಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಭಾಷಣ.
* ಹುಲಿಯೂರು ದುರ್ಗದಲ್ಲಿ ಕುಡಿಯುವ ನೀರಿನ ಶುದ್ಧೀಕರಣ ಘಟಕ ಉದ್ಘಾಟನೆ.
* ಸಂಜೆ 4.30ಕ್ಕೆ ಮದ್ದೂರು ಮೂಲಕ ಮೈಸೂರುವರೆಗೆ ರೋಡ್ ಷೋ.












Click it and Unblock the Notifications