ಬೆಳಿಗ್ಗೆ ಒಪ್ಪಿಸಿದ ಪಾಠವನ್ನೇ ಪುನರಾವರ್ತನೆ ಮಾಡಿದ ರಾಹುಲ್ ಗಾಂಧಿ

Posted By:
Subscribe to Oneindia Kannada
   ರಾಹುಲ್ ಗಾಂಧಿ ಮಾಡಿದ ಭಾಷಣವನ್ನೇ ಮತ್ತೆ ಪುನಾವರ್ತನೆ ಮಾಡಿದ್ರಾ | Oneindia Kannada

   ಜೇವರ್ಗಿ, ಫೆಬ್ರವರಿ 12: ಕರ್ನಾಟಕದಲ್ಲಿ ಜನಾಶೀರ್ವಾದ ಯಾತ್ರೆ ನಡೆಸುತ್ತಿರುವ ರಾಹುಲ್ ಗಾಂಧಿ ಅವರು ಇಂದು ಜೇವರ್ಗಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.

   ಮುಂಜಾನೆ ದೇವದುರ್ಗದ ಸಮಾವೇಶದಲ್ಲಿ ಆಡಿದ ಮಾತುಗಳನ್ನೇ ಕ್ರಮ ಕೂಡಾ ತಪ್ಪದೆ ಮತ್ತೆ ರಾಹುಲ್ ಗಾಂಧಿ ಪುನರ್‌ ಉಚ್ಚರಿಸಿದರು. ಅವರ ಭಾಷಣದಲ್ಲಿ ಹೊಸತೆಂದರೆ ಜೇವರ್ಗಿಯ ಹಿರಿಯ ನಾಯಕ ದಿವಂಗತ ಧರಂಸಿಂಗ್ ಅವರನ್ನು ನೆನದದ್ದು.

   3.30 ಕ್ಕೆ ಜೇವರ್ಗಿಗೆ ಆಗಮಿಸಬೇಕಾಗಿದ್ದ ರಾಹುಲ್ ಗಾಂಧಿ 2 ಗಂಟೆ ತಡವಾಗಿ ಕಾರ್ಯಕ್ರಮಕ್ಕೆ ಆಗಮಿಸಿದರು. ಆದರೂ ಕಾರ್ಯಕರ್ತರು ಸಾಕಷ್ಟು ಸಂಖ್ಯೆಯಲ್ಲಿ ಅವರಿಗಾಗಿ ಕಾಯುತ್ತಿದುದು ವಿಶೇಷ.

   ರಾಹುಲ್‌ಗೆ ಕಪ್ಪು ಬಾವುಟ ತೋರಿಸಲು ಮುಂದಾದ ಬಿಜೆಪಿಗರ ಬಂಧನ

   ಸಮಾವೇಶದ ಆಯೋಜನೆಯಲ್ಲಿ ಕೆಲವು ನ್ಯೂನತೆಗಳಿದಿದ್ದು ಸ್ಪಷ್ಟವಾಗಿ ಕಾಣುತ್ತಿತ್ತು. ವಿಶೇಷವಾಗಿ ಸಮಾವೇಶದಲ್ಲಿ ನೀರಿನ ವ್ಯವಸ್ಥೆ ಸರಿ ಇಲ್ಲದ ಕಾರಣ ಕಾರ್ಯಕರ್ತರು ನೀರಿಗಾಗಿ ಬಡಿದಾಡಬೇಕಾದ ಪರಿಸ್ಥಿತಿಯೂ ನಿರ್ಮಾಣವಾಯಿತು.

   ಜನರು ಸಾಕಷ್ಟು ಹೊತ್ತು ಕಾದಿದ್ದನ್ನು ಮನಗಂಡ ರಾಹುಲ್ ಗಾಂಧಿ ಅವರು ಆದಷ್ಟು ತ್ವರಿತವಾಗಿಯೇ ತಮ್ಮ ಮಾತು ಮುಗಿಸಿ ಹೊರಟರು. ರಾಹುಲ್ ಹೊರತಾಗಿ ಮತ್ಯಾವ ನಾಯಕರೂ ಸಮಾವೇಶ ಉದ್ದೇಶಿಸಿ ಮಾತನಾಡಲಿಲ್ಲ. ಕಾರ್ಯಕ್ರಮದ ಮೊದಲಲ್ಲಿ ಧರಂ ಸಿಂಗ್ ಅವರ ಮಗ ಸ್ಥಳೀಯ ಶಾಸಕ ಡಾ.ಅಜಯ್‌ ಸಿಂಗ್ ಪ್ರಾಸ್ತಾವಿಕ ಭಾಷಣ ಮಾಡಿದರು.

   ಯಡಿಯೂರಪ್ಪ ನಾಟಕ, ಶೋಭಾ ಕರಂದ್ಲಾಜೆ ನಾಟಕ ಎಂದ ಸಿದ್ದರಾಮಯ್ಯ

   ರಾಹುಲ್ ಗಾಂಧಿ ಜೇವರ್ಗಿಯಲ್ಲಿ ಏನು ಮಾತನಾಡಿದರು ತಿಳಿಯಲು ಮುಂದೆ ಓದಿರಿ...

   ಹೈ-ಕರ್ನಾಟಕ್ಕೆ ಧರಂ ಸಿಂಗ್ ಕೊಡುಗೆ ಅಪಾರ

   ಹೈ-ಕರ್ನಾಟಕ್ಕೆ ಧರಂ ಸಿಂಗ್ ಕೊಡುಗೆ ಅಪಾರ

   ಭಾಷಣ ಆರಂಭಿಸುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ದಿವಂಗತ ಧರಂಸಿಂಗ್ ಅವರನ್ನು ನೆನೆದ ರಾಹುಲ್ ಗಾಂಧಿ, ಹೈ-ಕರ್ನಾಟಕಕ್ಕೆ ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಅವರ ಕೊಡುಗೆ ಅಪಾರವಾದುದು. ಕಲಂ 371 (ಜೆ) ಜಾರಿಯಾಗಲು ಅವರು ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಪಟ್ಟ ಶ್ರಮ ನೆನಯತಕ್ಕದ್ದು. ಇಂದು ಧರಂಸಿಂಗ್ ಅವರಿಲ್ಲ ಆದರೆ ಅವರ ಕನಸನ್ನು ನಾವು ಈಡೇರಿಸಬೇಕಿದೆ ಎಂದರು.

   ಕೆಲವರು ಕ್ಯಾಕಿ ಹೊಡೆಯಬಹುದು, ಕ್ಯಾಕರಿಸಿ ಉಗಿಯಲೂಬಹುದು!

   ಬಿಜೆಪಿ ಸಾಧ್ಯವಿಲ್ಲ ಎಂಬುದನ್ನು ನಾವು ಮಾಡಿದ್ದೇವೆ

   ಬಿಜೆಪಿ ಸಾಧ್ಯವಿಲ್ಲ ಎಂಬುದನ್ನು ನಾವು ಮಾಡಿದ್ದೇವೆ

   ಎಲ್‌.ಕೆ.ಅಡ್ವಾಣಿ ಅವರು ಮಂತ್ರಿ ಆಗಿದ್ದಾಗ ಹೈ-ಕರ್ನಾಟಕ ಭಾಗಕ್ಕೆ 371 (ಜೆ) ಬೇಕೆಂದು ಮನವಿ ಮಾಡಿದ್ದೆವು ಆದರೆ ಅವರು ಸಾಧ್ಯವಿಲ್ಲ ಎಂದಿದ್ದರು ಆ ನಂತರ ನಾವು ಅಧಿಕಾರಕ್ಕೆ ಬಂದಾಗ ಅದನ್ನು ಮಾಡಿ ತೋರಿಸಿದೆವು. ಆ ನಂತರ ಮೋದಿ ಅವರನ್ನು ರೈತರ ಸಾಲ ಮನ್ನಾ ಮಾಡಿ ಎಂದು ಕೋರಿಕೊಂಡೆವು ಅವರು ಮಾಡಲಿಲ್ಲ. ಆದರೆ ಕರ್ನಾಟಕದಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರ ರೈತರ ಸಾಲ ಮನ್ನಾ ಮಾಡಿದೆ ಎಂದರು.

   ಮಿರ್ಚಿ ಬಜ್ಜಿ, ಗಿರ್ಮಿಟ್ ರುಚಿಗೆ ಮಾರುಹೋದ ರಾಹುಲ್ ಗಾಂಧಿ

   ರಾಜ್ಯ ಶಾಂತಿಯುತವಾಗಿದೆ

   ರಾಜ್ಯ ಶಾಂತಿಯುತವಾಗಿದೆ

   ಬಿಜೆಪಿಯದ್ದು ಕೇವಲ ಜಗಳ ಹಚ್ಚುವ ಕೆಲಸ, ಹರಿಯಾಣದಲ್ಲಿ ಜಾಟರು ಮತ್ತು ಇತರ ಕೋಮಿನ ನಡುವೆ ಜಗಳ ಹಚ್ಚಿದ್ದಾರೆ. ಇಲ್ಲಿಯೂ ಎರಡು ಧರ್ಮಗಳ ನಡುವೆ ಜಗಳ ಹಚ್ಚಿದ್ದಾರೆ ಎಂದ ಅವರು ಮೋದಿ ಅವರು ಕರ್ನಾಟಕದ ಶಾಂತಿಯ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ ಅವರು ಬಿಜೆಪಿ ಅಧಿಕಾರಲ್ಲಿರುವ ಉತ್ತರ ಪ್ರದೇಶ, ಹರಿಯಾಣ, ಗುಜರಾತ್, ರಾಜಸ್ಥಾನಗಳ ಕಡೆ ನೋಡಲಿ ಎಂದು ಟಾಂಗ್ ನೀಡಿದರು.

   ಚಿತ್ರಗಳು : ಮಿರ್ಚಿ ಬಜ್ಜಿ ಗಿರ್ ಮಿಟ್ ತಿಂದ ಕಾಂಗ್ರೆಸ್ ಅಧ್ಯಕ್ಷ ರಾಹುಲ್

   ಮೋದಿಗಿಂತಲೂ ಹೆಚ್ಚು ಕೊಡುಗೆ ಸಿದ್ದರಾಮಯ್ಯ ನೀಡಿದ್ದಾರೆ

   ಮೋದಿಗಿಂತಲೂ ಹೆಚ್ಚು ಕೊಡುಗೆ ಸಿದ್ದರಾಮಯ್ಯ ನೀಡಿದ್ದಾರೆ

   ಕೇಂದ್ರ ಸರ್ಕಾರಕ್ಕೆ ದಲಿತರ ಬಗ್ಗೆ ಅಸಡ್ಡೆ ಇದೆ ಮೋದಿ ಅವರು ಇಡೀಯ ದೇಶದಲ್ಲಿ ಎಸ್‌ಸಿ, ಎಸ್‌ಟಿ ಕಲ್ಯಾಣಕ್ಕೆ ಬಿಡುಗಡೆ ಮಾಡಿರುವ ಒಟ್ಟು ಮೊತ್ತ 56 ಸಾವಿರ ಕೋಟಿ. ಆದರೆ ಸಿದ್ದರಾಮಯ್ಯ ಅವರು ಕರ್ನಾಟಕದಲ್ಲಿ 27 ಸಾವಿರ ಕೋಟಿ ಬಿಡುಗಡೆ ಮಾಡಿದ್ದಾರೆ. ಇಡೀ ದೇಶ ಖರ್ಚು ಮಾಡುತ್ತಿರುವ ಹಣದ ಅರ್ಧದಷ್ಟು ಹಣವನ್ನು ಸಿದ್ದರಾಮಯ್ಯ ಅವರು ಕರ್ನಾಟಕಕ್ಕೆ ಮಾತ್ರವೇ ನೀಡಿದ್ದಾರೆ ಎಂದು ಶಹಭಾಸ್ ಗಿರಿ ಕೊಟ್ಟರು.

   ಕಾಂಗ್ರೆಸ್‌ಗೆ ಯಾವುದೇ ಕಳಂಕ ಇಲ್ಲ

   ಕಾಂಗ್ರೆಸ್‌ಗೆ ಯಾವುದೇ ಕಳಂಕ ಇಲ್ಲ

   ಮೋದಿಯವರು ಯಡಿಯೂರಪ್ಪ ಮತ್ತು ಇತರ ಭ್ರಷ್ಟ ನಾಯಕರನ್ನು ಪಕ್ಕದಲ್ಲಿ ಕೂರಿಸಿಕೊಂಡು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ ಇದಕ್ಕಿಂತಲೂ ವ್ಯಂಗ್ಯ ಬೇರೆ ಇದೆಯೇ ಎಂದು ಪ್ರಶ್ನೆ ಮಾಡಿದ ರಾಹುಲ್ ಗಾಂಧಿ, ಕರ್ನಾಟಕದ ಕಾಂಗ್ರೆಸ್‌ನ ಯಾವ ಸಚಿವರ ಮೇಲೂ ಭ್ರಷ್ಟಾಚಾರದ ಆರೋಪ ಇಲ್ಲ ಎಂದರು.

   ಕೆಲವರ ಜೇಬು ಮಾತ್ರ ತುಂಬಿಸುವ ಸರ್ಕಾರ

   ಕೆಲವರ ಜೇಬು ಮಾತ್ರ ತುಂಬಿಸುವ ಸರ್ಕಾರ

   ಮೋದಿ ಅವರು ಅಧಿಕಾರಕ್ಕೆ ಬರುವ ಮುಂಚೆ ಎಲ್ಲರ ಖಾತೆಗೆ 15 ಲಕ್ಷ ಹಾಕುತ್ತೇನೆ ಎಂದಿದ್ದರು ಆದರೆ ಯಾರ ಖಾತೆಗಾದರೂ 10 ರೂಪಾಯಿಯನ್ನಾದರೂ ಹಾಕಿದ್ದಾರಾ ಎಂದು ಪ್ರಶ್ನೆ ಮಾಡಿದರು. ಎರಡು ರೀತಿಯ ಸರ್ಕಾರ ಇರುತ್ತವೆ ಒಂದು ಈಗಿರುವ ಕೇಂದ್ರ ಸರ್ಕಾರದ ರೀತಿ ಕೆಲವರನ್ನಷ್ಟೆ ಅಭಿವೃದ್ಧಿ ಮಾಡುತ್ತದೆ. ಆದರೆ ನಾವು ಎಲ್ಲರ ಅಭಿವೃದ್ಧಿ ಮಾಡುತ್ತೇವೆ ಎಂದರು.

   ಧಮನಿತರ ಪರ ನಾವಿದ್ದೇವೆ

   ಧಮನಿತರ ಪರ ನಾವಿದ್ದೇವೆ

   ಕಾಂಗ್ರೆಸ್‌ ಪಕ್ಷದ ಪ್ರಮುಖ ಗುಣ ನಾವು ಸುಳ್ಳು ಹೇಳುವುದಿಲ್ಲ. ನಾವು ಇದ್ದ ವಿಷಯವನ್ನು ನೇರವಾಗಿಯೇ ಹೇಳುತ್ತೇವೆ, ಸುಳ್ಳು ಹೇಳಿ ಮತ ಹಾಕಿಸಿಕೊಳ್ಳುವುದಿಲ್ಲ ಎಂರು. ಕಾಂಗ್ರೆಸ್ ಪಕ್ಷ ಸದಾ ಧಮನಿತರ ಪರವಾಗಿ ಇರುತ್ತದೆ ಎಂದು ಆಶ್ವಾಸನೆ ನೀಡಿದರು.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   AICC president Rahul Gandhi addresses congress party workers rally in Kalburagi district Jevargi. Rahul lambasted on BJP central government and said Modi is a liar.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ