ರಾಜ್ಯದಲ್ಲಿ 4 ಕ್ಷೇತ್ರದ ಮೇಲೆ ರಾಹುಲ್ ಗಾಂಧಿ ಕಣ್ಣು

ನವದೆಹಲಿ, ಮಾರ್ಚ್ 19-ಹೌದು, ಕಾಂಗ್ರೆಸ್‌ ಪಕ್ಷದ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರು ಈ ಬಾರಿ ಎಲ್ಲಿಂದ ಸ್ಪರ್ಧಿಸುತ್ತಾರೆ? ಅವರು ಎಲ್ಲಿಯಾದರೂ ಸ್ಪರ್ಧಿಸಲಿ ಆದರೆ ಅವರ ಪಕ್ಷದ ಅಭ್ಯರ್ಥಿಗಳು ನಿಂತಕಡೆಯಲ್ಲಿ ರಾಹುಲ್ ವಿಶೇಷ ಕಾಳಜಿ ವಹಿಸಿ, ಪ್ರಚಾರದಲ್ಲಿ ನಡೆಸುತ್ತಿದ್ದಾರೆ. ಅದರಲ್ಲೂ ಕೆಲವು ಆಯ್ದ ಕ್ಷೇತ್ರಗಳ ಬಗ್ಗೆ ಹೆಚ್ಚು ಮುತುವರ್ಜಿ ವಹಿಸಿದ್ದಾರೆ. ಮತದಾರರನ್ನು ಭದ್ರಪಡಿಸಿಕೊಳ್ಳಲು ಅಂತಹ ಕ್ಷೇತ್ರಗಳ ಮೇಲೆ ಕಣ್ಗಾವಲಿಟ್ಟಿದ್ದಾರೆ.

ಕರ್ನಾಟಕದ 4 ಕ್ಷೇತ್ರಗಳು AICC ಉಸ್ತುವಾರಿಯಲ್ಲಿ:

rahul-gandhi-aicc-team-to-keep-eye-on-ramya-mandya-ls-constituency

ಆ ಕ್ಷೇತ್ರಗಳ ಪೈಕಿ ಮಾಜಿ ನಟಿ, ಹಾಲಿ ಸಂಸದೆ ರಮ್ಯಾ ಅವರು ಸ್ಪರ್ಧಿಸುತ್ತಿರುವ ಮಂಡ್ಯ ಲೋಕಸಭಾ ಕ್ಷೇತ್ರವೂ ಒಂದು. ಹೌದು, ರಮ್ಯಾ ಅವರ ಚುನಾವಣಾ ಜವಾಬ್ದಾರಿಯನ್ನು ಎಐಸಿಸಿ ವಹಿಸಿಕೊಂಡಿದ್ದು, ಚುನಾವಣಾ ಕಾರ್ಯದ ಮೇಲೆ ನಿಗಾ ವಹಿಸಲು ಜಿಲ್ಲಾ ಚುನಾವಣಾ ಸಂಯೋಜಕರನ್ನಾಗಿ ಕೇರಳ ಮೂಲದ ಸತ್ಯನ್‌ ಅವರನ್ನು ನಿಯೋಜಿಸಲಾಗಿದೆ. ಮಹಿಳಾ ಸಶಕ್ತೀಕರಣಕ್ಕೆ ಆದ್ಯತೆ ನೀಡಿರುವ ರಾಹುಲ್ ಮಂಡ್ಯ ಕ್ಷೇತ್ರವನ್ನು ಆರಿಸಿಕೊಂಡಿರುವುದು ಗಮಮನಾರ್ಹವಾಗಿದೆ. [ಬಿರುಸಿನ ಮತಯಾಚನೆ ಚಿತ್ರಗಳು]

ಮಂಡ್ಯ ನಂತರ ಕರ್ನಾಟಕದಲ್ಲಿ ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ ಹಾಗೂ ಬೆಂಗಳೂರು ಸೆಂಟ್ರಲ್‌ ಕ್ಷೇತ್ರಗಳ ಕಾಂಗ್ರೆಸ್‌ ಅಭ್ಯರ್ಥಿಗಳೂ ಕೂಡ ಎಐಸಿಸಿ ಉಸ್ತುವಾರಿಯಲ್ಲಿಯೇ ಚುನಾವಣೆ ಎದುರಿಸಲಿದ್ದಾರೆ. ದೇಶದ ಒಟ್ಟು 70 ಲೋಕಸಭಾ ಕ್ಷೇತ್ರಗಳಿಗೆ ಜಿಲ್ಲಾ ಸಂಯೋಜಕರನ್ನು ನೇಮಕ ಮಾಡಿರುವ ಎಐಸಿಸಿ, ಈ ಕ್ಷೇತ್ರಗಳಲ್ಲಿನ ಪಕ್ಷದ ಚುನಾವಣಾ ಪ್ರಚಾರದ ಮೇಲೆ ತೀವ್ರ ನಿಗಾ ವಹಿಸಲಿದೆ.

ಏನಿದು AICC ನಿಗಾ?
ಅಂದರೆ ಈ ಆಯ್ದ 70 ಕ್ಷೇತ್ರಗಳಲ್ಲಿ ಚುನಾವಣೆಯಲ್ಲಿ ಮತದಾರರನ್ನು ಯಾವ ರೀತಿ ಪಕ್ಷದ ಕಡೆಗೆ ಸೆಳೆಯಲು ತರಬೇತಿ ಪಡೆದ ಬೂತ್‌ ಮಟ್ಟದ ಕಾರ್ಯಕರ್ತರು ನಿಯೋಜನೆಗೊಳ್ಳಲಿದ್ದಾರೆ. ಇದಕ್ಕಾಗಿ ಎಐಸಿಸಿ ವಿಶೇಷ ತಂಡ ಈ ಕ್ಷೇತ್ರಗಳಿಗೆ ಭೇಟಿ ನೀಡಲಿದೆ. AICC ತಂಡ ನೀಡುವ ಸೂಚನೆಯಂತೆ ಬೂತ್‌ ಮಟ್ಟದ ಕಾರ್ಯಕರ್ತರು ಚುನಾವಣಾ ಕಾರ್ಯ ಚಟುವಟಿಕೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಒಟ್ಟಿನಲ್ಲಿ, ಎಐಸಿಸಿ ನಿಯಂತ್ರಣದಲ್ಲಿ, ಅದರ ನೇರ ಉಸ್ತುವಾರಿಯಲ್ಲಿರುವ ಬೂತ್‌ ಮಟ್ಟದ ಕಾರ್ಯಕರ್ತತ ತಂಡಗಳ ನಿರ್ದೇಶನದಂತೆ ಪಕ್ಷದ ಸ್ಥಳೀಯ ಮುಖಂಡರು ಕೆಲಸ ನಿರ್ವಹಿಸಬೇಕಾಗುತ್ತದೆ.

ಚುನಾವಣಾ ಪ್ರಚಾರ ಕಾರ್ಯ ಕುರಿತಂತೆ ದೈನಂದಿನ ಮಾಹಿತಿಯನ್ನು ರಾಹುಲ್‌ ಗಾಂಧಿ ಅವರ ಕಚೇರಿಗೆ ಈ-ಮೇಲ್‌ ಮೂಲಕ ಎಐಸಿಸಿ ಸಂಯೋಜಕರು ರವಾನಿಸುತ್ತಾರೆ. ಮುಂದೆ ಅದು ರಾಹುಲ್ ಗಾಂಧಿ ಪರಾಮರ್ಶೆಗೆ ಒಳಪಟ್ಟು ಅವರು ಅಗತ್ಯ ಕ್ರಮಗಳನ್ನು ಕೈಗೊಂಡು, ಅಗತ್ಯ ಸಲಹೆ ಸೂಚನೆಗಳನ್ನು ನೀಡುತ್ತಿರುತ್ತಾರೆ ಎಂದು ಪಕ್ಷದ ಮೂಲಗಳು ಹೇಳಿವೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+