ಸೈಕಲ್ ರವಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಸಿಸಿಬಿಯ ತನಿಖೆಯೇ ತಪ್ಪಾ?

ಬೆಂಗಳೂರು, ಜುಲೈ 17: ಪಾತಕಿ ಸೈಕಲ್ ರವಿಗೂ ಎಂಬಿ ಪಾಟೀಲ್‌ಗೂ ನಂಟಿದೆ ಎಂಬ ಸುದ್ದಿಗೆ ಭರ್ಜರಿ ಟ್ವಿಸ್ಟ್‌ ದೊರೆತಿದ್ದು ಸೈಕಲ್ ರವಿಯದ್ದು ಎಂದು ಸಿಸಿಬಿ ಹೇಳಿದ್ದ ಮೊಬೈಲ್ ಸಂಖ್ಯೆಯೇ ತಪ್ಪಾಗಿದೆಯಾ? ಎಂಬ ಅನುಮಾನ ಮೂಡುತ್ತಿದೆ.

9741199999 ಈ ಸಂಖ್ಯೆಯು ಸೈಕಲ್ ರವಿಯದ್ದಾಗಿದ್ದು ಈ ಸಂಖ್ಯೆಗೆ ಸಚಿವ ಎಂ.ಬಿ.ಪಾಟೀಲ್ ಅವರು 54 ಬಾರಿ ಕರೆ ಮಾಡಿದ್ದಾರೆ, ಆ ಕಡೆಯಿಂದ 24 ಬಾರಿ ಕರೆ ಬಂದಿದೆ, 2 ಮೆಸೆಜ್ ವಿನಿಮಯ ಆಗಿವೆ ಎಂದು ಸಿಸಿಬಿ ತೆಗೆಸಿದ್ದ ಸಿಡಿಆರ್ ಮಾಹಿತಿಯಲ್ಲಿ ನಮೂದಾಗಿತ್ತು.

ಆದರೆ ಈಗ 9741199999 ಮೊಬೈಲ್ ಸಂಖ್ಯೆಯು ಮಂಡ್ಯದ ಕಾಂಗ್ರೆಸ್ ಮುಖಂಡ ಸಚ್ಚಿದಾನಂದ ಎಂಬುವರಿಗೆ ಸೇರಿದ್ದು ಎಂಬ ಮಾಹಿತಿ ಲಭ್ಯವಾಗಿದ್ದು, ಪೊಲೀಸರು ಸಹ ಈ ಮಾಹಿತಿಯನ್ನು ಧೃಡಪಡಿಸುತ್ತಿದ್ದಾರೆ. ಹಾಗಾದರೆ ಸಿಸಿಬಿಯು ಈ ಮೊಬೈಲ್ ಸಂಖ್ಯೆಗೆ ಸಂಬಧಿಸಿದ ಸಿಡಿಆರ್ ತೆಗೆಸಿದ್ದು ಏಕೆ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

Question about CCB investigation in cycle Ravi case

ಸಿಸಿಬಿಯೇ ತನಿಖೆಯಲ್ಲಿ ಎಡವಿತಾ ಅಥವಾ ಈ ಸಿಮ್ ಅನ್ನು ಸೈಕಲ್ ರವಿ ನಿರ್ದಿಷ್ಟ ಸಂದರ್ಭದಲ್ಲಿ ಬಳಸಿದ್ದನಾ? ಎಂಬ ಅನುಮಾನ ಪ್ರಾರಂಭವಾಗಿದೆ. ಸಿಸಿಬಿ ಹೇಳುವ ಪ್ರಕಾರ ದಾಳಿ ವೇಳೆ ಸೈಕಲ್ ರವಿ ಬಳಿ ಸಿಕ್ಕ ಸಿಮ್‌ಗಳ ಮಾಹಿತಿಯನ್ನು ತೆಗೆಯಲಾಗಿದೆ. ಸಚ್ಚಿದಾನಂದ ಅವರ ಈ ಸಿಮ್ ಸೈಕಲ್ ರವಿ ಬಳಿ ಬಂದದ್ದು ಹೇಗೆ ಎಂಬ ಅನುಮಾನ ಎದ್ದಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಮುಖಂಡ ಸಚ್ಚಿದಾನಂದ ಅವರು, 9741199999 ಸಂಖ್ಯೆಯ ಸಿಮ್ ಕಾರ್ಡ್ 2009ರಿಂದಲೂ ನನ್ನ ಬಳಿ ಇದ್ದು ಇಂದಿಗೂ ನೂರಾರು ಕರೆಗಳು ಬರುತ್ತವೆ. ಸಿಮ್ ಎಂದೂ ಕಳೆದು ಸಹ ಹೋಗಿಲ್ಲ, ಅಲ್ಲದೆ ಸಿಮ್ ನನ್ನ ಹೆಸರಿನಲ್ಲಿಯೇ ಇದೆ ಎಂದಿದ್ದಾರೆ.

ಸಚ್ಚಿದಾನಂದ ಅವರ ಸಿಮ್‌ ಅನ್ನೇ ತಂತ್ರಜ್ಞಾನ ಬಳಸಿ ಸೈಕಲ್ ರವಿ ದುರಪಯೋಗ ಪಡಿಸಿಕೊಂಡಿದ್ದಾನೊ ಅಥವಾ ಸಿಸಿಬಿಯು ತನ್ನ ತನಿಖೆಯಲ್ಲಿ ಎಡವಿದೆಯೋ ಎಂಬ ಅನುಮಾನ ಈಗ ವ್ಯಕ್ತವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+