ಪುನೀತ್ ಹುಟ್ಟುಹಬ್ಬ: ಗ್ರಾಮಗ್ರಾಮಗಳಲ್ಲೂ ಸಂಭ್ರಮ, ಟ್ವಿಟರ್‌ನಲ್ಲಿ ಟ್ರೆಂಡ್

ಬೆಂಗಳೂರು, ಮಾ.17: ನಟ ದಿವಂಗತ ಪುನೀತ್ ರಾಜ್‌ಕುಮಾರ್‌ ಹುಟ್ಟಹಬ್ಬದ ಸಂಭ್ರಮದ ಕರುನಾಡಿನಲ್ಲಿ ಮುಗಿಲು ಮುಟ್ಟಿದೆ. ಇಡೀ ಕರುನಾಡಿನ ಗ್ರಾಮ ಗ್ರಾಮಗಳಲ್ಲಿಯೂ ಅಪ್ಪು ಅಭಿಮಾನಿಗಳು, ಯುವಕರು ಕೇಕ್ ಕತ್ತರಿಸಿ ಸಂಭ್ರಮ ಆಚರಿಸಿದ್ದಾರೆ.

ಪುನೀತ್ ಹುಟ್ಟುಹಬ್ಬ ಕೇವಲ ಅವರ ಮನೆ ಅಥವಾ ಸಮಾಧಿಗೆ ಸೀಮಿತ ಆಗಿಲ್ಲ. ರಾಜ್ಯದ ಬಹುತೇಕ ಗ್ರಾಮಗಳಲ್ಲಿ ಯುವಕರು ಸಂಭ್ರಮದಿಂದ, ಅಭಿಮಾನದಿಂದ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಗ್ರಾಮ, ಪಟ್ಟಣ, ವೃತ್ತ ಹೀಗೆ ಎಲ್ಲೆಂದರಲ್ಲಿ ಪುನೀತ್ ಅವರ ಪೋಸ್ಟರ್, ಕಟೌಟ್ ಹಾಕಿ ಹಾರ ಹಾಕಿ ಮಧ್ಯರಾತ್ರಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದ್ದಾರೆ. ಈ ಮೂಲಕ ಅಪ್ಪು ಕೇವಲ ನಟನಲ್ಲ, ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಇರುವ ಅಭಿಮಾನ ಎಂಬುದನ್ನು ನಿರೂಪಿಸಿದ್ದಾರೆ.

Recommended Video

      Puneeth RajKumar ಹಳ್ಳಿಯಿಂದ ದಿಲ್ಲಿಯವರೆಗೂ ಟ್ರೆಂಡಿಂಗ್ | Oneindia Kannada

      ಸ್ಟೇಟಸ್‌ಗಳಲ್ಲಿ ಪುನೀತ್ ಮೆರಗು:

      ಪುನೀತ್‌ ರಾಜ್‌ಕುಮಾರ್ ಹುಟ್ಟುಹಬ್ಬ ಮತ್ತು ಇದೇ ದಿನ ಬಿಡುಗಡೆ ಆಗಿರುವ 'ಜೇಮ್ಸ್‌' ಚಿತ್ರ ಮೊಬೈಲ್ ಸ್ಟೇಟಸ್‌ಗಳಲ್ಲಿ ರಾರಾಜಿಸುತ್ತಿದೆ.

      Puneeth Rajkumar Birthday: Celebration in Villages, Trend on Twitter

      ಅಭಿಮಾನದ ನಾಯಕನಿಗೆ ಪ್ರತಿಯೊಬ್ಬರೂ ಶುಭಾಶಯಗಳನ್ನು ಕೋರುತ್ತಿದ್ದಾರೆ. ಅಪ್ಪುವಿನ ನಗುಮುಖದ ಫೋಟೋಗಳು, ರಾಜನಂತಹ ಕಳೆ ಇರುವ ಭಾವಚಿತ್ರಗಳು, ಕನ್ನಡ ಧ್ವಜದೊಂದಿಗೆ ಜೋಡಿಸಲಾದಂತಹ ಚಿತ್ರಗಳು, 'ನೀನೆ ರಾಜಕಕುಮಾರ' ಎಂಬಂತಹ ಗೀತೆ ಸಂಯೋಜನೆ ಮಾಡಲಾದ ಭಾವಚಿತ್ರಗಳು ಹೀಗೆ ಅವರ ಅಭಿಮಾನಕ್ಕೆ ತೋಚಿದಂತಹ ಚಿತ್ರಗಳನ್ನು ತಮ್ಮ ಸ್ಟೇಟಸ್ ಮಾಡಿಕೊಂಡು ಶುಭಾಶಯ ಮತ್ತು ನಮನ ಸಲ್ಲಿಸುತ್ತಿದ್ದಾರೆ.

      Puneeth Rajkumar Birthday: Celebration in Villages, Trend on Twitter

      ಇದರ ಜೊತೆಗೆ 'ಜೇಮ್ಸ್' ಚಿತ್ರ ಸಹ ಬಿಡುಗಡೆ ಆಗಿದ್ದು, ಮೊದಲ ಶೋ ನೀಡಿದ ಚಿತ್ರ, ಟಿಕೆಟ್‌ಗಳ ಸ್ಕ್ರೀನ್ ಶಾಟ್, ಅಪ್ಪು ಸಮಾಧಿಯಲ್ಲಿ ನಿಂತಿರುವ ಚಿತ್ರ, ಅಪ್ಪುವಿಗೆ ಹಾಲಿನ ಅಭಿಷೇಕ ಮಾಡುತ್ತಿರುವಂತಹ ದೃಶ್ಯಗಳು ಹೀಗೆ ನಾನಾ ರೀತಿಯ ಫೋಟೊಗಳನ್ನು ಹಾಕಿ ಸಂಭ್ರಮಿಸುತ್ತಿದ್ದಾರೆ.

      Puneeth Rajkumar Birthday: Celebration in Villages, Trend on Twitter

      ಟ್ವಿಟರ್‌ನಲ್ಲಿ ಟ್ರೆಂಡ್:

      ಟ್ವಿಟರ್‌ನಲ್ಲಿ ಸಹ #PuneethRajKumar, #CelebratePuneethRajkumar, #James ಹೀಗೆ ಹಲವು ಹ್ಯಾಷ್‌ಟ್ಯಾಗ್‌ಗಳು ಟ್ರೆಂಡ್ ಆಗಿವೆ. ಬುಧವಾರದಿಂದಲೇ ಈ ಹ್ಯಾಷ್‌ಟ್ಯಾಗ್‌ನಡಿ ಜನ ಟ್ವೀಟ್ ಮೂಲಕ ಅಭಿಮಾನ ವ್ಯಕ್ತಪಡಿಸುತ್ತಿದ್ದಾರೆ.

      ಜೇಮ್ಸ್‌ ಸಿನಿಮಾದ ಪೋಸ್ಟರ್‌ಗಳು ಟ್ವಿಟರ್‌ನಲ್ಲಿ ರಾರಾಜಿಸುತ್ತಿವೆ. ತೆಲುಗು ನಟ ಚಿರಂಜೀವಿ ಸಹಿತ ಹಲವು ಗಣ್ಯರು ಅಪ್ಪು ಕುರಿತು ಆಡಿರುವ ಮಾತುಗಳನ್ನು, ವಿಡಿಯೋಗಳನ್ನು ಹಂಚಿಕೊಳ್ಳಲಾಗುತ್ತದೆ. ಗುರುವಾರ ಬೆಳಗ್ಗೆ 7 ಗಂಟೆ ವೇಳೆಗೆ ಸುಮಾರು 20 ಸಾವಿರಕ್ಕೂ ಅಧಿಕ ಜನರು ಟ್ವೀಟ್‌ಗಳನ್ನು ಮಾಡಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+