ವಿಧಾನಪರಿಷತ್ ಚುನಾವಣೆ ಹಿನ್ನೆಲೆ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಮುಂದೂಡಿಕೆ
ಬೆಂಗಳೂರು, ಜೂನ್ 01: ವಿಧಾನ ಪರಿಷತ್ ಚುನಾವಣೆ ಇರುವ ಕಾರಣ ಜೂನ್ 8 ರಂದು ನಿಗದಿಯಾಗಿದ್ದ ಪಿಯುಸಿ ಪೂರಕ ಪರೀಕ್ಷೆಯನ್ನು ಮುಂದೂಡಿ ದ್ವಿತೀಯ ಪಿಯು ಪರೀಕ್ಷಾ ಮಂಡಳಿ ಆದೇಶ ಹೊರಡಿಸಿದೆ.
ಜೂನ್ 8 ಮತ್ತು 11 ರಂದು ವಿಧಾನ ಪರಿಷತ್ ಚುನಾವಣಾ ಮತದಾನ ನಡೆಯಲಿದ್ದು, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ ಅಲ್ಲದೆ ಶಾಲಾ ಕಾಲೇಜುಗಳಲ್ಲಿ ಮತದಾನದ ವ್ಯವಸ್ಥೆ ಮಾಡಲಾಗಿರುತ್ತದೆ ಹಾಗಾಗಿ ಪಿಯುಸಿ ಪರೀಕ್ಷೆ ಮುಂದೂಡಲಾಗಿದೆ.

ಜೂನ್ 8ರಂದು ನಿಗದಿಯಾಗಿದ್ದ ಪಿಯುಸಿ ಪೂರಕ ಪರೀಕ್ಷೆಯನ್ನು ಜೂನ್ 28ಕ್ಕೆ ಮುಂದೂಡಲಾಗಿದೆ. ಪಿಯುಸಿ ಪರೀಕ್ಷೆಯ ಫಲಿತಾಂಶ ಏಪ್ರಿಲ್ 30 ರಂದು ಪ್ರಕಟವಾಗಿತ್ತು.
ಜೂನ್ 8ರಿಂದ ಜೂನ್ 20ರವರೆಗೆ ಪೂರಕ ಪರೀಕ್ಷೆ ನಡೆಸುವುದಾಗಿ ದ್ವಿತೀಯ ಪಿಯು ಪರೀಕ್ಷಾ ಮಂಡಳಿ ಹೇಳಿತ್ತು.












Click it and Unblock the Notifications