ಪಿಯುಸಿ; ಪ್ರಾಯೋಗಿಕ ಪರೀಕ್ಷೆ ಹೊಂದಿರದ ವಿಷಯದಲ್ಲಿ 20 ಅಂಕ

ಬೆಂಗಳೂರು, ಜುಲೈ 11; ಪ್ರಥಮ ಮತ್ತು ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆ ಹೊಂದಿರದ ವಿಷಯಗಳಲ್ಲಿ 20 ಆಂತರಿಕ ಅಂಕಗಳನ್ನು ಪರೀಕ್ಷೆಗೆ ಪರಿಗಣಿಸುವ ಬಗ್ಗೆ ಆದೇಶ ಹೊರಡಿಸಲಾಗಿದೆ. 2023-24ನೇ ಸಾಲಿನ ಶೈಕ್ಷಣಿಕ ವರ್ಷದಿಂದಲೇ ಇದು ಜಾರಿಗೆ ಬರಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಪದ್ಮನಿ ಎಸ್. ಎನ್. ಸರ್ಕಾರದ ಅಧೀನ ಕಾರ್ಯದರ್ಶಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಈ ಕುರಿತು ಆದೇಶ ಹೊರಡಿಸಿದ್ದಾರೆ. 2014-15ನೇ ಸಾಲಿನಿಂದ ಪದವಿ ಪೂರ್ವ ಶಿಕ್ಷಣ ಇಲಾಖೆಯು ಪ್ರಾಯೋಗಿಕ ತರಗತಿಗಳಿರುವ ವಿಷಯಗಳಲ್ಲಿ 30 ಅಂಕಗಳನ್ನು ಪ್ರಾಯೋಗಿಕ ಪರೀಕ್ಷೆಗೆ ಹಾಗೂ 70 ಅಂಕಗಳನ್ನು ತಾತ್ವಿಕ ಪರೀಕ್ಷೆಗೆ ನಿಗದಿಪಡಿಸಲಾಗಿದೆ ಹಾಗೂ ಉಳಿದೆಲ್ಲಾ ಪ್ರಾಯೋಗಿಕ ತರಗತಿಗಳಿಲ್ಲದ ವಿಷಯಗಳಲ್ಲಿ 100 ಅಂಕಗಳ ಪ್ರಶ್ನೆ ಪತ್ರಿಕೆಯನ್ನು ಸಿದ್ದಪಡಿಸಿ ವಾರ್ಷಿಕ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.

PUC Students To Get 20 Internal Marks For Subjects Without Practicals

ಆಂತರಿಕ ಮೌಲ್ಯ ಮಾಪನವು ಸಮಗ್ರ ಮೌಲ್ಯಮಾಪನದ ಭಾಗವಾಗಿದೆ. ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಅರ್ಥೈಸಿಕೊಳ್ಳಲು ಸಹಕಾರ ನೀಡುತ್ತದೆ. ಇದು ತರಗತಿ ಕಿರುಪರೀಕ್ಷೆ ಹಾಗೂ ಮಧ್ಯವಾರ್ಷಿಕ ಪರೀಕ್ಷೆಗಳ ಬಗ್ಗೆ ಗಂಭೀರತೆಯನ್ನು ಹೆಚ್ಚಿಸುತ್ತದೆ. ಆಂತರಿಕ ಮೌಲ್ಯಮಾಪನದಿಂದ ಪರೀಕ್ಷಾ ಭಯ ಹಾಗೂ ಒತ್ತಡ ಕಡಿಮೆಯಾಗುತ್ತದೆ. ವಿದ್ಯಾರ್ಥಿಗಳ ಕ್ರಿಯಾಶೀಲತೆಯನ್ನು ಹೆಚ್ಚಿಸಿ ಅವರಲ್ಲಿ ಕಂಡುಬರುವ ವೃತ್ತಿಪರ ಕೌಶಲಗಳು ಅವರನ್ನು ಮುಂದಿನ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸಲು ಅವಕಾಶ ನೀಡುತ್ತದೆ.

ವಿದ್ಯಾರ್ಥಿಗಳ ಅವಲೋಕನ ನಿರಂತರವಾಗಿದ್ದು ಕಲಿಕೆಯನ್ನು ಉತ್ತಮಗೊಳಿಸಲು ಅವಕಾಶ ನೀಡುತ್ತದೆ. ಎಲ್ಲಾ ವಿಷಯಗಳಿಗೆ ಆಂತರಿಕ ಅಂಕಗಳನ್ನು ನೀಡುವ ಮಾದರಿಯನ್ನು ಅನುಸರಿಸಿದ್ದಲ್ಲಿ ಏಕರೂಪತೆಯನ್ನು ತರಬಹುದಾಗಿದೆ. ಈ ಹಿನ್ನೆಲೆಯಲ್ಲಿ 2023-24ನೇ ಶೈಕ್ಷಣಿಕ ಸಾಲಿನಿಂದ ಪ್ರಥಮ ಮತ್ತು ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆ ಹೊಂದಿರದ ವಿಷಯಗಳಲ್ಲಿ 20 ಆಂತರಿಕ ಅಂಕಗಳನ್ನು ಪರೀಕ್ಷೆಗೆ ಪರಿಗಣಿಸುವ ಬಗ್ಗೆ ಸೂಕ್ತ ಆದೇಶ ಹೊರಡಿಸುವಂತೆ ನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆರವರು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ.

ನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆರವರ ಏಕ ಕಡತದ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರ, ಸರ್ಕಾರವು ಈ ಆದೇಶ ನೀಡಿದೆ. 2023-24ನೇ ಶೈಕ್ಷಣಿಕ ಸಾಲಿನಿಂದ ಪ್ರಥಮ ಮತ್ತು ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆ ಹೊಂದಿರದ ವಿಷಯಗಳಲ್ಲಿ 20 ಆಂತರಿಕ ಅಂಕಗಳನ್ನು ಪರೀಕ್ಷೆಗೆ ನಿಗದಿಪಡಿಸಿ ಆದೇಶಿಸಿದೆ. ಸದರಿ ಅಂಕಗಳನ್ನು ಆಯಾ ಉಪನ್ಯಾಸಕರು ವಿದ್ಯಾರ್ಥಿಗಳ ಮೌಲ್ಯಮಾಪನ ಮಾಡಿ ದಾಖಲಿಸಬೇಕಾಗುತ್ತದೆ ಹಾಗೂ 20 ಅಂಕಗಳನ್ನು ನೀಡುವ ವಿಧಾನವನ್ನು ಕೆಳಕಂಡಂತೆ ನಿರ್ಧರಿಸಲಾಗಿದೆ.

* ಒಂದನೇ ಕಿರುಪರೀಕ್ಷೆ 2ನೇ ಕಿರುಪರೀಕ್ಷೆ ಹಾಗೂ ಮಧ್ಯವಾರ್ಷಿಕ ಪರೀಕ್ಷೆಗಳಲ್ಲಿ 10 ಅಂಕಗಳು ಗಳಿಸಿದ ಅಂಕಗಳಲ್ಲಿ ಉತ್ತಮವಾದ ಎರಡನ್ನು 10 ಅಂಕಗಳಿಗೆ ಪರಿವರ್ತಿಸಿ ಅವುಗಳ ಸರಾಸರಿ ಅಂಕಗಳನ್ನು ನೀಡುವುದು. 10 ಅಂಕಗಳು

ಕಾಲೇಜು ಹಂತದಲ್ಲಿ ಪ್ರಾಜೆಕ್ಟ್ ಹಾಗೂ ಅಸೈನ್‌ಮೆಂಟ್‌ ಅಂಕಗಳು. (ಪ್ರಾಜೆಕ್ಟ್ ಹಾಗೂ ಅಸೈನ್‌ಮೆಂಟ್‌ಗಳಿಗೆ ಬರವಣಿಗೆ ವಿಭಾಗಕ್ಕೆ (writing)5 ಅಂಕಗಳು, ಪ್ರಸ್ತುತಪಡಿಸುವಿಕೆಗೆ (Presentation) 3 ಅಂಕಗಳು ಮತ್ತು ಸಂದರ್ಶನಕ್ಕೆ (Viva-voce) 2 ಅಂಕಗಳು). 10 ಅಂಕಗಳು.

ಅಂಗಳನ್ನು ನೀಡಲು ಸೂಚನೆಗಳು

* ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ (ಎಲೆಕ್ಟ್ರಾನಿಕ್ಸ್), ಗಣಕ ವಿಜ್ಞಾನ, ಗೃಹ ವಿಜ್ಞಾನ, ಕರ್ನಾಟಕ ಸಂಗೀತ ಮತ್ತು ಹಿಂದುಸ್ತಾನಿ ಸಂಗೀತ ಮತ್ತು NSQF ವಿಷಯಗಳಾದ IT, Automobile, Retail, Beauty & wellness ಈ ವಿಷಯಗಳಿಗೆ ಆಂತರಿಕ ಮೌಲ್ಯಮಾಪನ ಇರುವುದಿಲ್ಲ. ಈ ಎಲ್ಲಾ ವಿಷಯಗಳಲ್ಲಿ ಯಥಾ ಸ್ಥಿತಿಯನ್ನು ಮುಂದುವರಿಸಲಾಗುತ್ತದೆ ಯಾವುದೇ ವ್ಯತ್ಯಾಸ ಇರುವುದಿಲ್ಲ.

* ಉಳಿದೆಲ್ಲ ಭಾಷಾ ಹಾಗೂ ಕೋರ್ ವಿಷಯಗಳಲ್ಲಿ 20 ಅಂಕಗಳನ್ನು ಆಂತರಿಕ ಮೌಲ್ಯಮಾಪನಕ್ಕೆ ನಿಗದಿಪಡಿಸಲಾಗಿದೆ.

* ಪ್ರಸ್ತುತ ಅನುಸರಿಸುತ್ತಿರುವ ಕಿರು ಪರೀಕ್ಷೆಗಳನ್ನು 40 ಅಂಕಗಳಿಗೆ ಹಾಗೂ ಮಧ್ಯವಾರ್ಷಿಕ ಪರೀಕ್ಷೆಯನ್ನು 80 ಅಂಕಗಳಿಗೆ ನಡೆಸುವುದು.

* 80 ಅಂಕಗಳ ವಾರ್ಷಿಕ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಉತ್ತರಿಸುವಲ್ಲಿ ವಿದ್ಯಾರ್ಥಿಗಳು ಕನಿಷ್ಠ 24 ಅಂಕಗಳನ್ನು ಉತ್ತೀರ್ಣತೆಗೆ ಗಳಿಸಲೇಬೇಕು.

* ಒಂದು ವೇಳೆ ವಿದ್ಯಾರ್ಥಿಯು ಒಂದು ಮತ್ತು ಎರಡನೇ ಕಿರು ಪರೀಕ್ಷೆ ಹಾಗೂ ಮಧ್ಯವಾರ್ಷಿಕ ಪರೀಕ್ಷೆಯಲ್ಲಿ ಯಾವುದಾದರೂ ಒಂದರಲ್ಲಿ ಗೈರು ಹಾಜರಾಗಿದ್ದರೆ ಉಳಿದ ಎರಡು ಪರೀಕ್ಷೆಗಳಲ್ಲಿ ಗಳಿಸಿರುವ ಅಂಕಗಳನ್ನು 10 ಅಂಕಗಳಿಗೆ ಪರಿವರ್ತಿಸಿ ಸರಾಸರಿ ತೆಗೆದುಕೊಳ್ಳುವುದು.

* ವಿದ್ಯಾರ್ಥಿಯು ಕೇವಲ ಒಂದೇ ಒಂದು ಕಿರು ಪರೀಕ್ಷೆ ಅಥವಾ ಮಧ್ಯವಾರ್ಷಿಕ ಪರೀಕ್ಷೆಗೆ ಹಾಜರಾಗಿದ್ದರೆ ಆ ಅಂಕಗಳನ್ನು ಹತ್ತಕ್ಕೆ ಪರಿವರ್ತಿಸಿ ಅರ್ಧದಷ್ಟು ಅಂಕಗಳನ್ನು ನೀಡುವುದು.

* ವಿದ್ಯಾರ್ಥಿಯು ಯಾವುದೇ ಕಿರು ಪರೀಕ್ಷೆ ಅಥವಾ ಮಧ್ಯ ವಾರ್ಷಿಕ ಪರೀಕ್ಷೆಗೆ ಹಾಜರಾಗದೆ ಹಾಗೂ ಯಾವುದೇ ಪ್ರಾಜೆಕ್ಟ್ ಮತ್ತು ಅಸೈನ್‌ಮೆಂಟ್‌ಗಳನ್ನು ಸಲ್ಲಿಸದೇ ಇದ್ದರೆ ಅವರು ವಾರ್ಷಿಕ ಪರೀಕ್ಷೆಯಲ್ಲಿ ಉತ್ತೀರ್ಣತೆಗೆ ಅಗತ್ಯವಾಗಿ ಬೇಕಾದ 35 ಅಂಕಗಳನ್ನು 80 ಅಂಕಗಳಲ್ಲಿ ಪಡೆಯಬೇಕಾಗುತ್ತದೆ.

* ಸೂಕ್ತ ಅಸೈನ್‌ಮೆಂಟ್ ಅಥವಾ ಪ್ರಾಜೆಕ್ಟ್‌ಗಳನ್ನು ವಿದ್ಯಾರ್ಥಿಗಳಿಗೆ ನೀಡಿ 10 ಅಂಕಗಳಿಗೆ ಮೌಲ್ಯಮಾಪನ ಮಾಡುವುದು. ಅಸೈನ್‌ಮೆಂಟ್ ಅಥವಾ ಪ್ರಾಜೆಕ್ಟ್‌ಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಯಾವುದೇ ಪಕ್ಷಪಾತವಿಲ್ಲದೆ ಅಂಕಗಳನ್ನು ನೀಡುವುದು ಹಾಗೂ ಸದರಿ ದಾಖಲೆಗಳನ್ನು ಪರೀಕ್ಷಾ ನಂತರದ ನಾಲ್ಕು ತಿಂಗಳ ಅವಧಿಯವರೆಗೂ ಕಾಯ್ದಿರಿಸುವುದು (ಉತ್ತರ ಪತ್ರಿಕೆಗಳನ್ನು ಕಾಯ್ದಿರಿಸುವ ಮಾದರಿಯಲ್ಲಿ).

* ಪ್ರತಿ ವಿದ್ಯಾರ್ಥಿಯೂ ಪ್ರತ್ಯೇಕವಾಗಿ ಅಸೈನ್‌ಮೆಂಟ್‌ಗಳನ್ನು ನೀಡುವುದು.

* ಆಯಾ ಜಿಲ್ಲೆಗಳ ವಿಷಯವಾರು ಉಪನ್ಯಾಸಕರ ವೇದಿಕೆಯಲ್ಲಿ ಪ್ರಾಜೆಕ್ಟ್ ಅಥವಾ ಅಸೈನ್‌ಮೆಂಟ್‌ಗಳ ಶೀರ್ಷಿಕೆಗಳನ್ನು ಸಿದ್ಧಪಡಿಸಿ ಪಟ್ಟಿಯನ್ನು ವಿದ್ಯಾರ್ಥಿಗಳಿಗೆ ನೀಡುವುದು ಹಾಗೂ ಆ ಶೀರ್ಷಿಕೆಗಳನ್ನು ಜಿಲ್ಲೆಯ ಎಲ್ಲಾ ಕಾಲೇಜುಗಳಲ್ಲಿ ಅನುಸರಿಸುವುದು.

* ಕಾಲೇಜುಗಳ ಪ್ರಾಂಶುಪಾಲರು ಯಾವುದೇ ಗೊಂದಲಗಳಿಗೆ ಅವಕಾಶ ನೀಡದೆ ಆಂತರಿಕ ಮೌಲ್ಯಮಾಪನ ಕಾರ್ಯ, ಅಂಕಗಳ ನೀಡಿಕೆ ಹಾಗೂ ಅಂಕಗಳನ್ನು ದಾಖಲಿಸುವ ಬಗ್ಗೆ ಮೇಲ್ವಿಚಾರಣೆ ನಡೆಸುವುದು.

* ಕಿರು ಪರೀಕ್ಷೆಗಳು, ಪ್ರಾಜೆಕ್ಟ್ ಮತ್ತು ಅಸೈನ್‌ಮೆಂಟ್‌ಗಳ ಅಂಕಗಳನ್ನು ಮೌಲ್ಯಮಾಪನದ ನಂತರ 2 ದಿನದ ಒಳಗೆ ಎಸ್.ಎ.ಟಿ.ಎಸ್. ಪೋರ್ಟಲ್‌ನಲ್ಲಿ ಇಂಧೀಕರಿಸುವುದು. ಯಾವುದೇ ವಿಳಂಬಕ್ಕೆ ಅವಕಾಶವಿರುವುದಿಲ್ಲ.

* 2023-24ನೇ ಸಾಲಿನಿಂದಲೇ ಪ್ರಥಮ & ದ್ವಿತೀಯ ಪಿಯುಸಿ ತರಗತಿಗಳಿಗೆ ಆಂತರಿಕ ಮೌಲ್ಯಮಾಪನದ ಅಂಕಗಳನ್ನು ನೀಡುವ ಪದ್ಧತಿಯನ್ನು ಅನುಸರಿಸುವುದು.

* 2023-24ನೇ ಸಾಲಿನಲ್ಲಿ ವಿದ್ಯಾರ್ಥಿಗಳನ್ನು (Regular) ಹೊರತುಪಡಿಸಿ ಹಿಂದಿನ ಸಾಲಿನ ವಿದ್ಯಾರ್ಥಿಗಳು ಅಂದರೆ ಪುನರಾವರ್ತಿತ ವಿದ್ಯಾರ್ಥಿಗಳು ಹಾಗೂ ಖಾಸಗಿ ಅಭ್ಯರ್ಥಿಯಾಗಿ ನೋಂದಾಯಿಸಿಕೊಂಡ (Private students) ದ್ವಿತೀಯ ಪಿಯುಸಿ ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೆ ಈ ಪದ್ಧತಿ ಅನ್ವಯಿಸುವುದಿಲ್ಲ. ಅಂದರೆ ಆ ವಿದ್ಯಾರ್ಥಿಗಳು 100 ಅಂಕದ ಪ್ರಶ್ನೆ ಪತ್ರಿಕೆಗೆ ಉತ್ತರಿಸಬೇಕಾಗುತ್ತದೆ.

* ವಿದ್ಯಾರ್ಥಿಯು ಅನಿವಾರ್ಯ ಕಾರಣದಿಂದ ಕಾಲೇಜು ಬದಲಾವಣೆ ಮಾಡಿಕೊಂಡ ಸಂದರ್ಭದಲ್ಲಿ, ಖಾಸಗಿಯಾಗಿ ಅಭ್ಯಾಸ ಮಾಡುವ (Private study) ವಿಷಯವನ್ನೂ ಸಹ ಆಂತರಿಕ ಮೌಲ್ಯಮಾಪನ ಪದ್ಧತಿಗೆ (20:80) ಒಳಪಡಿಸುವುದು. ಸದರಿ ಕಾಲೇಜುಗಳ ಪ್ರಾಂಶುಪಾಲರು ಮೌಲ್ಯಮಾಪನಕ್ಕೆ ಸೂಕ್ತ ವ್ಯವಸ್ಥೆ ಮಾಡುವುದು.

* ಆಂತರಿಕ ಮೌಲ್ಯಮಾಪನದಿಂದ ನೀಡುವ 20 ಅಂಕಗಳನ್ನು ಎಸ್.ಎ.ಟಿ.ಎಸ್. ನಿಂದ ನೇರವಾಗಿ ಫಲಿತಾಂಶ ಪ್ರಕಟಣೆಗೆ ಪರಿಗಣಿಸುವುದರಿಂದ ನಿಗದಿತ ಸಮಯದೊಳಗೆ ಅಂಕಗಳನ್ನು ದಾಖಲಿಸುವುದು. ಒಂದು ವೇಳೆ ನಿಗದಿತ ಸಮಯದೊಳಗೆ ಆಂತರಿಕ ಅಂಕಗಳನ್ನು ಎಸ್.ಎ.ಟಿ.ಎಸ್. ಪೋರ್ಟಲ್ ನಲ್ಲಿ ದಾಖಲಿಸದಿದ್ದಲ್ಲಿ ಸಂಬಂಧಪಟ್ಟ ಕಾಲೇಜಿನ ಪ್ರಾಂಶುಪಾಲರನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು.

* ಆಂತರಿಕ ಮೌಲ್ಯಮಾಪನ ಮಾಡುವ ವಿಧಾನಗಳ ಬಗ್ಗೆ ಮಾರ್ಗದರ್ಶಿ ಕೈಪಿಡಿ, 80 ಅಂಕಗಳಿಗೆ ಸರಿ ಹೊಂದುವ ನೀಲ ನಕ್ಷೆ ಮತ್ತು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ(ಕೆ.ಎಸ.ಇ.ಎ.ಬಿ.)ಯಿಂದ ಕ್ರಮ ತೆಗೆದುಕೊಳ್ಳುವುದು.

* ಮೇಲಿನ ಎಲ್ಲಾ ಅಂಶಗಳ ಆಧಾರದ ಮೇಲೆ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿಷಯಗಳಲ್ಲಿ ಆಂತರಿಕ ಅಂಕಗಳನ್ನು ನಿಗದಿಪಡಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+