ಬೆಂಗಳೂರಿನಲ್ಲೂ ಪಿಎಸ್ಐ ಪರೀಕ್ಷೆ ಗೋಲ್ಮಾಲ್: 22 ಅಭ್ಯರ್ಥಿಗಳ ವಿರುದ್ಧ FIR

ಬೆಂಗಳೂರು, ಮೇ. 02: ಪಿಎಸ್ಐ ನೇಮಕಾತಿ ಅಕ್ರಮ ಕೇವಲ ಕಲಬುರಗಿಗೆ ಸೀಮಿತವಾಗಿಲ್ಲ. ರಾಜಧಾನಿ ಬೆಂಗಳೂರಿನಲ್ಲಿ ಸಹ ಭಾರಿ ಅಕ್ರಮ ನಡೆದಿರುವುದು ಸಿಐಡಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಬೆಂಗಳೂರಿನ ಏಳು ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಎಸಗಿದ 22 ಅಭ್ಯರ್ಥಿಗಳು ಸಿಐಡಿ ಕೈಗೆ ಸಿಕ್ಕಿಬಿದ್ದಿದ್ದಾರೆ.

ಎಫ್ಎಸ್ಎಲ್ ವರದಿಯಲ್ಲಿ ಅಕ್ರಮ ಪತ್ತೆ:

ಬೆಂಗಳೂರಿನ ಏಳು ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಪಿಎಸ್ಐ ಪರೀಕ್ಷೆ ಸಂಬಂಧ ಓಎಂಆರ್ ಶೀಟ್ ಮತ್ತು ಹಾಲ್ ಟಿಕೆಟ್ ಹಾಜರು ಪಡಿಸುವಂತೆ 172 ಅಭ್ಯರ್ಥಿಗಳಿಗೆ ನೋಟಿಸ್ ನೀಡಲಾಗಿತ್ತು. ಎಲ್ಲರ ಓಎಂಆರ್ ಶೀಟ್ ಮತ್ತು ಉತ್ತರ ಹಾಳೆಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿತ್ತು. ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ನೀಡಿದ ವರದಿಯಲ್ಲಿ 22 ಪಿಎಸ್ಐ ಅಭ್ಯರ್ಥಿಗಳು ಅಕ್ರಮದಲ್ಲಿ ಶಾಮೀಲಾಗಿರುವುದು ಕಂಡು ಬಂದಿದೆ.

22 ಮಂದಿ ಅಕ್ರಮದಲ್ಲಿ ಭಾಗಿ :

ಈ ಕುರಿತು ಸಹಾಯಕ ತನಿಖಾಧಿಕಾರಿ ನರಸಿಂಹಮೂರ್ತಿ ನೀಡಿದ ದೂರಿನ ಮೇರೆಗೆ 22 ಅಭ್ಯರ್ಥಿಗಳ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಕೇಸು ದಾಖಲಾಗಿದೆ.

PSI recruitment scam: FIR Registered against 22 Candidates Written exam in Bengaluru

ಕಲಬುರಗಿಗೆ ಸೀಮಿತವಾಗಿದ್ದ ಪಿಎಸ್ಐ ನೇಮಕಾತಿ ಅಕ್ರಮ ಇದೀಗ ರಾಜಧಾನಿಯಲ್ಲಿ ನಡೆದಿರುವುದು ಸಿಐಡಿ ತನಿಖೆಯಲ್ಲಿ ಬಯಲಾಗಿದೆ. 22 ಅಭ್ಯರ್ಥಿಗಳ ಪೈಕಿ ಹನ್ನೆರಡು ಅರೋಪಿಗಳನ್ನು ಬಂಧಿಸಲಾಗಿದೆ. ಉಳಿದ ಹತ್ತು ಮಂದಿಗಾಗಿ ಹೈಗ್ರೌಂಡ್ಸ್ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಕೇಂಬ್ರಿಡ್ಜ್ ವಿದ್ಯಾಲಯದಲ್ಲಿ ಅಕ್ರಮ:

ಇನ್ನು ಬೆಂಗಳೂರಿನ ಕೇಂಬ್ರಿಡ್ಜ್ ವಿಶ್ವ ವಿದ್ಯಾಲಯದಲ್ಲಿ ನಡೆದಿರುವ ಪರೀಕ್ಷೆಯಲ್ಲಿ ಭಾರಿ ಅಕ್ರಮ ನಡೆದಿದೆ. ರೆಡ್‌ಸ್ಯಾಂಡಲ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಪೇದೆ ಮಮತೇಶ್ ಗೌಡ ಸೇರಿದಂತೆ ಮೂವರು ಪೊಲೀಸ್ ಇಲಾಖೆಗೆ ಸೇರಿದವರೇ ಅಕ್ರಮದಲ್ಲಿ ಸಿಕ್ಕಿಬಿದ್ದಿದ್ದಾರೆ. ಹೊಸಕೋಟೆಯಲ್ಲಿ ದಾಖಲಾಗಿದ್ದ ರಕ್ತ ಚಂದನ ಸ್ಮಗ್ಲಿಂಗ್ ಪ್ರಕರಣದಲ್ಲಿ ಮಮತೇಶ್ ಗೌಡ ಬಂಧನಕ್ಕೆ ಒಳಗಾಗಿದ್ದ.

ಇಂದು ಹತ್ತು ಮಂದಿ ವಿಚಾರಣೆ:

ಅಕ್ರಮ ಕಂಡು ಬಂದ 12 ಪಿಎಸ್ಐ ಅಭ್ಯರ್ಥಿಗಳನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿದೆ. ಇಂದು ಹತ್ತು ಮಂದಿ ಅಭ್ಯರ್ಥಿಗಳನ್ನು ವಿಚಾರಣೆಗೆ ಕರೆದಿದ್ದು, ವಿಚಾರಣೆಯಲ್ಲಿ ಅಕ್ರಮ ಕಂಡು ಬಂದ ಕೂಡಲೇ ಆರೋಪಿಗಳನ್ನು ಬಂಧಿಸಲಾಗುತ್ತದೆ. ಬೆಂಗಳೂರಿನ ಏಳು ಕೇಂದ್ರಗಳಲ್ಲಿ ನಡೆದಿದ್ದ ಪರೀಕ್ಷೆಗೆ ಸಂಬಂಧಿಸಿದಂತೆ 172 ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಅದರಲ್ಲಿ ಪ್ರಾಥಮಿಕ ಹಂತದಲ್ಲಿಯೇ 22 ಮಂದಿ ಸಿಕ್ಕಿಬಿದ್ದಿದ್ದು, ಉಳಿದವರ ದಾಖಲೆಗಳನ್ನು ಸಿಐಡಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

PSI recruitment scam: FIR Registered against 22 Candidates Written exam in Bengaluru

ಸಿಐಡಿ ತನಿಖೆಯಲ್ಲಿ ಸಿಕ್ಕಿಬಿದ್ದ ಅಭ್ಯರ್ಥಿಗಳು ಮತ್ತು ಅವರ ದಾಖಲಾತಿ ಸಂಖ್ಯೆ:

1) ಜಾಗೃತ್ ಎಸ್. (9252135)

2) ಗಜೇಂದ್ರ ಬಿ. (9252062)

3) ಸೋಮನಾಥ್ ಮಲಿಕಾರ್ಜುನಯ್ಯ (9252119)

4) ರಘುವೀರ್ ಹೆಚ್.ಯು. (9245950)

5) ಚಿತನ್ ಕುಮಾರ್ ಎಂ.ಸಿ. (9246411)

6) ವೆಂಕಟೇಶ್ ಗೌಡ ಬಿ.ಸಿ. (9246290)

7) ಮನೋಜ್ ಎ.ಪಿ. (9245895)

8) ಮನುಕುಮಾರ್ ಜಿ.ಆರ್. (9246469)

9) ಸಿದ್ದಲಿಂಗಪ್ಪ ಪದಶವಾಗಿ (9246519)

10) ಮಮತೇಶ್ ಗೌಡ ಎಸ್. (9246311)

11) ಯಶವಂತಗೌಡ ಹೆಚ್. (9244198)

12) ನಾರಾಯಣ ಎಂ.ಸಿ. (9244622)

13) ನಾಗೇಶ್ ಗೌಡ ಸಿ.ಎಸ್. (9244728)

14) ಮಧು ಆರ್. (9245556)

15) ಯಶವಂತ್ ದೀಪ್ ಸಿ. (9245293)

16) ದೀಲಿಪ್ ಕುಮಾರ್ ಸಿ.ಕೆ. (9245508)

17) ರಚನಾ ಹನಮಂತ್ (9242741)

18) ಶಿವರಾಜ ಜಿ. (9246834)

19) ಪ್ರವೀಣ್ ಕುಮಾರ್ ಹೆಚ್.ಆರ್. (9247144)

20) ಸೂರ್ಯನಾರಾಯಣ ಕೆ. (9247225)

21) ನಾಗರಾಜ ಸಿ.ಎಂ. (9253817)

22) ರಾಘವೇಂದ್ರ ಜಿ ಸಿ.(9253524)

Recommended Video

      ಧೋನಿ ನಾಯಕತ್ವಕ್ಕೆ ಕಂಬ್ಯಾಕ್ ಮಾಡಿದ್ಮೇಲೆ ಬದಲಾಯ್ತು CSK ಅದೃಷ್ಟ | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+