PSI Recruitment Exam: 402 ಹುದ್ದೆಯ ಪಿಎಸ್‌ಐ ನೇಮಕಾತಿ ಪರೀಕ್ಷೆ, ವೇಳಾಪಟ್ಟಿ ಪ್ರಕಟ
ಬೆಂಗಳೂರು, ಸೆಪ್ಟೆಂಬರ್ 17: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಐಎ) ಬುಧವಾರ ವಿವಿಧ ನೇಮಕಾತಿ ಪರೀಕ್ಷೆಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. 402 ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ) ನೇಮಕಾತಿ ಲಿಖಿತ ಪರೀಕ್ಷೆಯನ್ನು ಅಕ್ಟೋಬರ್ 3ರಂದು ನಡೆಸುವುದಾಗಿ ಹೇಳಿದ್ದು, ವೇಳಾಪಟ್ಟಿ ಬಿಡುಗಡೆಯಾಗಿದೆ. ವಿವಿಧ ಕಾರಣಕ್ಕೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ ಲಿಖಿತ ಪರೀಕ್ಷೆ ಮುಂದೂಡಲಾಗಿತ್ತು.
ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಕೆಇಎ ಪಿಎಸ್‌ಐ ನೇಮಕಾತಿ ಸೇರಿದಂತೆ ವಿವಿಧ ಪರೀಕ್ಷೆಗಳ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಹೇಳಿದೆ. ಪಿಎಸ್‌ಐ ನೇಮಕಾತಿ ಲಿಖಿತ ಪರೀಕ್ಷೆಗಳು ಅಕ್ಟೋಬರ್ 3ರ ಗುರುವಾರ ನಡೆಯಲಿದೆ ಎಂದು ತಿಳಿಸಿದೆ. ಪಿಎಸ್‌ಐ ನೇಮಕಾತಿ ಲಿಖಿತ ಪರೀಕ್ಷೆ ಸೆಪ್ಟೆಂಬರ್ 22ರಂದು ನಡೆಸಬೇಕಿತ್ತು. ಅದನ್ನು ಸೆಪ್ಟೆಂಬರ್ 28ಕ್ಕೆ ಮುಂದೂಡಿಕೆ ಮಾಡಲಾಗಿತ್ತು. ಬಳಿಕ ಮತ್ತೆ ಮುಂದೂಡಿಕೆ ಮಾಡಿ ಅಕ್ಟೋಬರ್ 3ಕ್ಕೆ ನಡೆಸುವುದಾಗಿ ಘೋಷಣೆ ಮಾಡಲಾಗಿದೆ.

ಬುಧವಾರ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರು ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಕಂದಾಯ ಇಲಾಖೆ ಗ್ರಾಮ ಆಡಳಿತಾಧಿಕಾರಿ, ಕಾಲೇಜು ಶಿಕ್ಷಣ ಇಲಾಖೆ, ರಾಯಚೂರು ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ನೇಮಕಾತಿ ಪರೀಕ್ಷೆಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಅಲ್ಲದೇ ಈಗಾಗಲೇ ಗ್ರಾಮಾಡಳಿತಾಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಿರುವವರು ದಿನಾಂಕ 29.09.2024ರಂದು ನಡೆಯುವ ಕಡ್ಡಾಯ ಕನ್ನಡ ಪರೀಕ್ಷೆಗೆ ಹಾಜರಾಗಿ, ಅರ್ಹತಾ ಅಂಕಗಳಿಸದವರಿಗೆ ಮಾತ್ರ ದಿನಾಂಕ 27.10.2024ರಂದು ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಲಾಗುವುದು ಎಂದು ಸ್ಪಷ್ಟಪಡಿಸಿದೆ.
#PSI ಸೇರಿದಂತೆ ವಿವಿಧ ಪರೀಕ್ಷೆಗಳ ಪರಿಷ್ಕೃತ ವೇಳಾಪಟ್ಟಿಯನ್ನು #KEA ಪ್ರಕಟಿಸಿದೆ.
— ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) (@KEA_karnataka) September 17, 2024
PSI ಪರೀಕ್ಷೆ OCT 3ಕ್ಕೆ ನಡೆಯಲಿದೆ.
ವಯೋಮಿತಿ ಸಡಿಲ ಮಾಡಿರುವ ಕಾರಣ #VAO ಮತ್ತು #GTTC ಹುದ್ದೆಗಳಿಗೆ ಸೆ.19ರಿಂದ 9 ದಿನ ಅರ್ಜಿ ಸಲ್ಲಿಸಲು ಮತ್ತೊಮ್ಮೆ ಅವಕಾಶ ನೀಡಲಾಗಿದೆ.@CMofKarnataka @drmcsudhakar pic.twitter.com/92wmxAwTht
ಪಿಎಸ್‌ಐ ನೇಮಕಾತಿ ಪರೀಕ್ಷೆ: ಪೊಲೀಸ್ ಇಲಾಖೆಯ 402 ಪಿಎಸ್‌ಐ ಹುದ್ದೆಗಳ ನೇಮಕಾತಿ ಪರೀಕ್ಷೆ 3/10/2024ರಂದು ನಡೆಯಲಿದೆ. ಬೆಳಗ್ಗೆ 10.30 ರಿಂದ 12 ಗಂಟೆಯ ತನಕ ಪತ್ರಿಕೆ-1, ಮಧ್ಯಾಹ್ನ 12.30 ರಿಂದ 2 ಗಂಟೆಯ ತನಕ ಪತ್ರಿಕೆ-2 ಪರೀಕ್ಷೆಗಳು ನಡೆಯಲಿದೆ.
ಕಂದಾಯ ಇಲಾಖೆ. ಗ್ರಾಮ ಆಡಳಿತಾಧಿಕಾರಿ & ಜಿಟಿಟಿಸಿಯ ವಿವಿಧ ಹುದ್ದೆಗಳು. 29/9/2024 ಭಾನುವಾರ ಮಧ್ಯಾಹ್ನ 10.30 ರಿಂದ 12.30 ಕಡ್ಡಾಯ ಕನ್ನಡ (ಈ ಪರೀಕ್ಷೆಗೆ ಹಾಜರಾಗಿ ಅರ್ಹತೆಗಳಿಸಿದ್ದಲ್ಲಿ ಮಾತ್ರ ಮುಖ್ಯ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು). 26/10/2024ರ ಶನಿವಾರ. 2.30 ರಿಂದ 4.30. ಕಡ್ಡಾಯ ಕನ್ನಡ. (ವಯೋಮಿತಿ ಸಡಿಲಿಕೆಯಿಂದ ಹೊಸದಾಗಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮಾತ್ರ).
ಕಂದಾಯ ಇಲಾಖೆ. ಗ್ರಾಮ ಆಡಳಿತಾಧಿಕಾರಿ. 27/10/2024ರ ಭಾನುವಾರ. ಬೆಳಗ್ಗೆ 10.30 ರಿಂದ 12.30 ಪತ್ರಿಕೆ-1, 2.30 ರಿಂದ 4.30 ಪತ್ರಿಕೆ-2.
ಕಾಲೇಜು ಶಿಕ್ಷಣ ಇಲಾಖೆ. ಕೆ-ಸೆಟ್. 24/11/2024ರ ಭಾನುವಾರ. 10 ರಿಂದ 1 ಗಂಟೆ. ಪತ್ರಿಕೆ-1 & ಪತ್ರಿಕೆ-2.
ರಾಯಚೂರು ವಿಶ್ವವಿದ್ಯಾಲಯ. ಸಹಾಯಕ ಪ್ರಾಧ್ಯಾಪಕರು. 24/11/2024ರ ಭಾನುವಾರ. 11 ರಿಂದ 1 ಗಂಟೆ. ಪತ್ರಿಕೆ-2, 3 ರಿಂದ 4 ಗಂಟೆ ಪತ್ರಿಕೆ-2.












Click it and Unblock the Notifications