ಆಸ್ತಿ ನೋಂದಣಿ & ಶುಲ್ಕ, ಪ್ರಾಪರ್ಟಿ ಮಾಲೀಕರ ಹೆಸರು ಸೇರ್ಪಡೆ ಮಹತ್ವದ ಆದೇಶ!

ಕರ್ನಾಟಕ ಸರ್ಕಾರವು ಆಸ್ತಿ ವಿವರ ಹಾಗೂ ಆಸ್ತಿ ಮಾಲೀಕರು ಹೆಸರು ಸೇರ್ಪಡೆ & ಶುಲ್ಕ ನಿಗದಿಗೆ ಸಂಬಂಧಿಸಿದಂತೆ ಮತ್ತೊಂದು ಮಹತ್ವದ ಸುತ್ತೋಲೆಯನ್ನು ಹೊರಡಿಸಿದೆ. ಕರ್ನಾಟಕದಲ್ಲಿ ಆಸ್ತಿದಾರರು ಆಸ್ತಿ ಹೆಸರು ನೋಂದಣಿಗೆ ಸಂಬಂಧಿಸಿದಂತೆ ಹೊಸ ಆದೇಶವನ್ನು ಹೊರಡಿಸಲಾಗಿದೆ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ಇ-ಸ್ವತ್ತು ತಂತ್ರಾಂಶದ ಮೂಲಕ ನಮೂನೆ-9 ಮತ್ತು 11-ಎ ನೀಡಲು ಕೈಗೊಳ್ಳಬೇಕಾದ ಪ್ರಕ್ರಿಯೆಗಳ ಬಗ್ಗೆ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ.

ಕರ್ನಾಟಕ ಭೂ ಕಂದಾಯ ಕಾಯ್ದೆ 1964 ರ ಪ್ರಕರಣ 94(ಸಿ), 94(ಸಿ.ಸಿ) ಹಾಗೂ 94 (ಡಿ)ಅಡಿಯಲ್ಲಿ ನಿವೇಶನ ಮತ್ತು ಮನೆ ನೀಡುವ ಆಸ್ತಿಗಳಿಗೆ ಆಸ್ತಿ ವಿವರಗಳ ವಹಿಯಲ್ಲಿ ಮಾಲೀಕನ ಹೆಸರು ಸೇರ್ಪಡೆ, ಬದಲಾವಣೆ ಶುಲ್ಕದ ಬಗ್ಗೆ ರಾಜ್ಯ ಸರ್ಕಾರವು ಮಹತ್ವದ ಅಪ್ಡೇಟ್ಸ್‌ ನೀಡಿದೆ. ಕಂದಾಯ ಇಲಾಖೆಯಿಂದ ವಿತರಣೆ ಮಾಡಲಾದ ಹಕ್ಕುಪತ್ರಗಳಿಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿಗಳಲ್ಲಿ ಉಂಟಾದ ಗೊಂದಲಗಳಿಗೆ ಸಂಬಂಧಿಸಿದಂತೆ ಸೂಚನೆಗಳನ್ನು ನೀಡಲಾಗಿದೆ.‌

Property registration and fees addition of property owner s name is an important order

ಮೇಲೆ ಓದಲಾದ ಕ್ರಮ ಸಂಖ್ಯೆ(3) ಮತ್ತು (4) ರಂತೆ ದಿನಾಂಕ: 17.05.2025 ರಂದು ಮಾನ್ಯ ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆ ಹಾಗೂ ದಿನಾಂಕ:17.05.2025 ರಂದು ಆಯುಕ್ತರು, ಕಂದಾಯ ಇಲಾಖೆ ರವರ ಪತ್ರದಲ್ಲಿ ಕೋರಿರುವಂತೆ, ಕರ್ನಾಟಕ ಭೂ ಕಂದಾಯ ಅಧಿನಿಯಮ, 1964 ರ ಪ್ರಕರಣ 94-(ಸಿ), 94(ಸಿಸಿ), 94-(ಡಿ) ಹಾಗೂ ಭೂಸುಧಾರಣಾ ಕಾಯ್ದೆ 1961 ಕಲಂ 38 ಅ ಅಡಿಯಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡಿರುವ ವಾಸದ ಮನೆಯ ಅಧಿಕೃತ ಹಕ್ಕುದಾಖಲೆಯನ್ನು ನೀಡಲಾಗುತ್ತಿದೆ. ಇತ್ತೀಚಿಗೆ ಕಂದಾಯ, ನೋಂದಣಿ ಹಾಗೂ ಪಂಚಾಯತ್ ರಾಜ್ ಇಲಾಖೆಗಳು ಸೇರಿ ಹಕ್ಕುಪತ್ರವನ್ನು ನೋಂದಾಯಸಿ ಇ-ಸ್ವತ್ತು ದಾಖಲೆಯನ್ನು ಫಲಾನುಭವಿಗೆ ನೀಡಲು ಕ್ರಮವಹಿಸಲಾಗುತ್ತಿದೆ.

ಅದರಂತೆ, ಮೇಲೆ ಓದಲಾದ ಕ್ರಮ ಸಂಖ್ಯೆ (1) ರಲ್ಲಿ ತಹಶೀಲ್ದಾರರ ಹೆಸರಿಗೆ ದಾಖಲೆ ನಮೂದಿಸುವಾಗ ಶುಲ್ಕ ವಿನಾಯಿತಿ ನೀಡಿದ ಆದರೆ ತಹಶೀಲ್ದಾರರು ಫಲಾನುಭವಿಗೆ ಆಸ್ತಿಯನ್ನು ನೋಂದಾಯಿಸಿ ನೀಡುವ ಸಂದರ್ಭದಲ್ಲಿ 1000 ಶುಲ್ಕವನ್ನು ಪಾವತಿಸಬೇಕಾಗಿದೆ. ಈ ಯೋಜನೆಯ ಫಲಾನುಭವಿಗಳಿಗೆ ಪ್ರಕರಣ 94-(ಸಿ), 94-(ಸಿಸಿ), 94-(ಡಿ) ಹಾಗೂ ಭೂಸುಧಾರಣಾ ಕಾಯ್ದೆ 1961 ಕಲಂ 38 ಅ ಅಡಿಯಲ್ಲಿ ನೀಡುವ ಹಕ್ಕುಪತ್ರಗಳಿಗೆ ಮ್ಯಟೇಶನ್ ಶುಲ್ಕದಲ್ಲಿ ರಿಯಾಯತಿ ನೀಡುವ ಬಗ್ಗೆ ಪರಿಶೀಲಿಸಲು ತಿಳಿಸಿರುತ್ತಾರೆ.

ಇನ್ನು ಇದೊಂದು ವಿಶೇಷ ಪ್ರಕರಣವಾಗಿರುವುದರಿಂದ ಹೊಸದಾಗಿ ಪ್ರಕ್ರಿಯೆಯನ್ನು ಸೂಚಿಸುವುದು ಅಗತ್ಯವೆಂದು ಕಂಡುಬಂದಿರುವುದರಿಂದ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ಕರ್ನಾಟಕ ಭೂ ಕಂದಾಯ ಕಾಯ್ದೆ 1964 ರಪುಕರಣ94(ಸಿ), 94(ಸಿ.ಸಿ) ಹಾಗೂ 94-(ಡಿ) ಅಡಿಯಲ್ಲಿ ನಿವೇಶನ ಮತ್ತು ಮನೆ ನೀಡುವ ಆಸ್ತಿಗಳಿಗೆ ಇ-ಸ್ವತ್ತು ತಂತ್ರಾಂಶದ ಮೂಲಕ ನಮೂನೆ-9 ಮತ್ತು 11-ಎ ನೀಡುವಾಗ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯಿತಿಯ ತೆರಿಗೆ, ದರ ಮತ್ತು ಫೀಜುಗಳು) ನಿಯಮಗಳು, 2021 ರ ನಿಯಮ 24 ರಂತೆ ಆಸ್ತಿ ವಿವರಗಳ ವಹಿಯಲ್ಲಿ ಮಾಲೀಕನ ಹೆಸರು ಸೇರ್ಪಡೆ, ಬದಲಾವಣೆ ಶುಲ್ಕ ರೂ 1000/- ರಂತೆ ವಿಧಿಸತಕ್ಕದಾಗಿದ್ದು ಮೇಲೆ ವಿವರಿಸಿರುವ ಯೋಜನೆಯ ಫಲಾನುಭವಿಗಳಿಗೆ ಆಸ್ತಿ ವಿವರಗಳ ವಹಿಯಲ್ಲಿ ಮಾಲೀಕರ ಹೆಸರು ಸೇರ್ಪಡೆ, ಬದಲಾವಣೆ ಶುಲ್ಕವನ್ನು ನಮೂನೆ 9 ಮತ್ತು 11-ಎ ವಿತರಿಸಿದ ಒಂದು ವರ್ಷದಲ್ಲಿ ಗರಿಷ್ಠ ನಾಲ್ಕು ಕಂತುಗಳಲ್ಲಿ ಗ್ರಾಮ ಪಂಚಾಯತಿ ಸಂಗ್ರಹಿಸಲು ಸರ್ಕಾರ ನಿರ್ಧರಿಸಿದೆ.

ಈ ಸಂಬಂಧ ಕಂದಾಯ ಇಲಾಖೆಯು ಮಹತ್ವದ ಸುತ್ತೋಲೆಯನ್ನು ಹೊರಡಿಸಿದೆ. ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಪ್ರಕರಣ 94(ಸಿ), 94(ಸಿ.ಸಿ) ಹಾಗೂ 94-(ಡಿ) ರಡಿಯಲ್ಲಿ ನಿವೇಶನ ಮತ್ತು ಮನೆ ನೀಡುವ ಆಸ್ತಿಗಳಿಗೆ ಇ-ಸ್ವತ್ತು ತಂತ್ರಾಂಶದ ಮೂಲಕ ನಮೂನೆ-9 ಮತ್ತು 11-ಎ ವಿತರಿಸುವಾಗ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯಿತಿಯ ತೆರಿಗೆ, ದರ ಮತ್ತು ಫೀಜುಗಳು) ನಿಯಮಗಳು, 2021 ರ ನಿಯಮ 24 ರಂತೆ ಆಸ್ತಿ ವಿವರಗಳ ವಹಿಯಲ್ಲಿ ಮಾಲೀಕರ ಹೆಸರು ಸೇರ್ಪಡೆ, ಬದಲಾವಣೆ ಶುಲ್ಕ ರೂ 1000/- ರಂತೆ ವಿಧಿಸತಕ್ಕದಾಗಿದೆ. ಮೇಲೆ ವಿವರಿಸಿರುವ ಯೋಜನೆಯ ಫಲಾನುಭವಿಗಳಿಗೆ ಆಸ್ತಿ ವಿವರಗಳ ವಹಿಯಲ್ಲಿ ಮಾಲೀಕನ ಹೆಸರು, ಸೇರ್ಪಡ ಬದಲಾವಣೆ ಶುಲ್ಕವನ್ನು ನಮೂನೆ 9 ಮತ್ತು 11-ಎ ವಿತರಿಸಿದ ಒಂದು ವರ್ಷದಲ್ಲಿ ಗರಿಷ್ಠ ನಾಲ್ಕು ಕಂತುಗಳಲ್ಲಿ ಗ್ರಾಮಪಂಚಾಯತಿ ಸಂಗ್ರಹಿಸಲು ಆದೇಶಿಸಿದೆ ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+