Property News: ಮನೆ ಬಾಡಿಗೆ ನೀಡುವ ಮಾಲೀಕರು ಗಮನಿಸಲೇಬೇಕಾದ ಪ್ರಮುಖ ಅಂಶಗಳು

Property News: ಆಸ್ತಿ, ಮನೆ ಬಾಡಿಗೆ ವಿಚಾರವಾಗಿ ಆಗಾಗ ಅಪ್ಡೇಟ್‌ ಮಾಹಿತಿಗಳು ಲಭ್ಯ ಆಗುತ್ತಲಿರುತ್ತವೆ. ಹಾಗೆಯೇ ಇದೀಗ ಬಾಡಿಗೆ ಕೊಡುವ ಮಾಲೀಕರಿಗೆ ಶಾಕಿಂಗ್‌ ಸಂಗತಿಯೊಂದು ಎದುರಾಗಿದೆ. ಹಾಗಾದ್ರೆ ಅದೇನು ಎನ್ನುವ ಸಂಪೂರ್ಣ ವಿವರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಬೆಂಗಳೂರಿನಂತಹ ಮಹಾನಗರಗಳಲ್ಲಿಯೇ ಹೆಚ್ಚಾಗಿ ಮನೆಗಳನ್ನು ಬಾಡಿಗೆ ನೀಡಲಾಗುತ್ತದೆ. ಕೆಲವೊಬ್ಬರು ಅಗ್ರಿಮೆಂಟ್‌ ತೆಗೆದುಕೊಂಡ ನೀಡಿರುತ್ತಾರೆ. ಇನ್ನೂ ಕೆಲವರು ಯಾವುದೇ ಅಗ್ರಮೆಂಟ್‌ ಇಲ್ಲದೆ, ಮನೆಗಳನ್ನು ಬಾಡಿಗೆ ನೀಡುವವರಿದ್ದು, ಇಂತಹ ಮನೆ ಮಾಲೀಕರಿಗೆ ಇದೀಗ ಶಾಕಿಂಗ್ ಎದುರಾಗಿದೆ.

Property Important Information for house owners on rent

ಬೇರೊಬ್ಬರಿಗೆ ಬಾಡಿಗೆ ಕೊಟ್ಟಿದ್ದವರ ಮನೆಯಲ್ಲಿ, 12 ವರ್ಷಗಳೂ ಬಾಡಿಗೆದಾರರು ಇದ್ದರೆ, ಆ ಮನೆ ಅವರಿಗೆ ಸ್ವಂತ ಆಗಬಹುದಾ ಎಂಬ ಪ್ರಶ್ನೆ ಬಹುತೇಕರ ತಲೆಯಲ್ಲಿ ಬಂದೇ ಬರುತ್ತದೆ. ಆದರೆ ಇದು ಸತ್ಯ. ಈ ನಿಯಮ ಭಾರತೀಯ ಕಾನೂನಿನಲ್ಲಿದ್ದ, ಪ್ರತಿಕೂಲ ಸ್ವಾಧೀನ ನಿಯಮವೇ ಇದಕ್ಕೆ ಕಾರಣ ಆಗಿದೆ.

ನಿಮ್ಮ ಅನುಮತಿ ಇಲ್ಲದೇ ಯಾರಾದರೂ ನಿಮ್ಮ ಆಸ್ತಿಯನ್ನು 12 ವರ್ಷ ನಿರಂತರವಾಗಿ, ಬಾಹ್ಯವಾಗಿ ಇಟ್ಟುಕೊಂಡರೆ, ಅವರು ಆ ಆಸ್ತಿಗೆ ಕಾನೂನುಬದ್ಧ ಹಕ್ಕು ಪಡೆಯುವ ಸಾಧ್ಯತೆಯಿದೆ. ನೀವು ಮಧ್ಯದಲ್ಲಿ ಪ್ರತಿರೋಧ ತೋರಿಸದೇ ಇದ್ದರೆ ಇದು ಇನ್ನೂ ಬೇರೆ ಸ್ವರೂಪ ತಾಳುವ ಸಾಧ್ಯತೆಯೂ ಇರುತ್ತದೆ.

ಇದನ್ನು ಕೆಲವರು 12 ವರ್ಷದ ಕಾನೂನು ಎಂದು ಕರೆಯುತ್ತಾರೆ. 1963ರ ಲಿಮಿಟ್‌ ಆಕ್ಟ್‌ ಪ್ರಕಾರ, ಖಾಸಗಿ ಆಸ್ತಿಗೆ ಮಾತ್ರ ಈ ನಿಯಮ ಅನ್ವಯ ಆಗುತ್ತದೆ. ಸರ್ಕಾರಿ ಜಮೀನಿಗೆ ಬೇರೆ ರೀತಿಯಲ್ಲಿ ಇದು ಅನ್ವಯ ಆಗಲಿದ್ದು, ಅಲ್ಲಿ 30 ವರ್ಷಗಳ ಕಾಲ ಇದ್ದರೂ ಕಾನೂನು ದೃಷ್ಟಿಯಿಂದ ಹಕ್ಕು ಸಿಗುವುದಿಲ್ಲ.

ಇದು ಕೇಳಲು ಆಶ್ಚರ್ಯಕರ ಆಗಬಹುದು. ಆದರೆ, ಭಾರತದಲ್ಲಿ ಪ್ರತಿಕೂಲ ಸ್ವಾಧೀನ ಎನ್ನುವ ಕಾನೂನು ಪ್ರಕಾರ, ನೀವು ನೋಡಿಕೊಳ್ಳದೆ ಇದ್ದ ನಿಮ್ಮದೇ ಆಸ್ತಿ ಮತ್ತೊಬ್ಬರ ಹೆಸರಿಗೆ ಹೋಗಬಹುದು. 12 ವರ್ಷಗಳ ಕಾಲ ನಿರಂತರವಾಗಿ, ಬಾಹ್ಯವಾಗಿ, ನಿಮ್ಮ ಅನುಮತಿಯಿಲ್ಲದೇ ಯಾರಾದರೂ ಆಸ್ತಿಯನ್ನು ಹಿಡಿದಿಟ್ಟುಕೊಂಡರೆ, ಆ ಆಸ್ತಿ ಅವರಿಗೆ ಹೋಗುವ ಸಾಧ್ಯತೆ ಇರುತ್ತದೆ.

ಈ ಕಾನೂನಿನಲ್ಲೇ ಕೆಲವೊಮ್ಮೆ ಬಾಡಿಗೆದಾರರು ಕೂಡ ಈ ನಿಯಮದ ಅಡಿಯಲ್ಲಿ ಮಾಲೀಕತ್ವದ ಹಕ್ಕಿಗೆ ಪ್ರಯತ್ನಿಸಬಹುದು. ನೀವು 11 ತಿಂಗಳ ಬಾಡಿಗೆ ಒಪ್ಪಂದ ಇಲ್ಲದೇ ಮನೆ ಕೊಟ್ಟಿದ್ದರೆ ಹಾಗೂ ಅವರು 12 ವರ್ಷಗಳಿಂದ ನಿಮ್ಮ ಪ್ರತಿರೋಧ ಇಲ್ಲದೇ ವಾಸವಿದ್ದರೆ, ಅವರೇ ಮಾಲೀಕರಂತೆ ಕಾನೂನು ಮೂಲಕ ದಾಖಲೆ ಮಾಡಿಕೊಳ್ಳಬಹುದು.

ಮನೆ ಮಾಲೀಕರಿಗೆ ಪ್ರಮುಖ ಸೂಚನೆ: ಈ ತೊಂದರೆಯಿಂದ ತಪ್ಪಿಸಿಕೊಳ್ಳಬೇಕೆಂದ್ರೆ ಮನೆ ಮಾಲೀಕರು ಎಲ್ಲಾ ಬಾಡಿಗೆ ಒಪ್ಪಂದಗಳನ್ನು ನೋಂದಣಿ ಮಾಡಿ. ಖಾಲಿ ಮನೆ, ಜಮೀನಿಗೆ ಪೆನ್ಸಿಂಗ್‌ ಹಾಕಿ, ಪ್ರೈವೇಟ್‌ ಪ್ರಾಪರ್ಟಿ, Trespassers will be Prosecuted ಬೋರ್ಡ್ ಹಾಕಿ. ಅಲ್ಲದೆ, ನಿಮ್ಮ ಆಸ್ತಿಯನ್ನು ಪರಿಶೀಲನೆ ಮಾಡಿ.

ಯಾರಾದರೂ ಜಮೀನನ್ನು ಅಕ್ರಮವಾಗಿ ಪ್ರವೇಶಿಸಿದರೆ, ನೋಟಿಸ್ ನೀಡಿ. ಹಗುರವಾಗಿ ನೋಡಿದರೆ, ಬೇರೆ ಹಂಗಾಮಿ ವ್ಯಕ್ತಿ ನಿಮ್ಮ ಆಸ್ತಿಯನ್ನು ದಾಖಲೆಯೊಂದಿಗೆ ದಾವೆ ಹೂಡಬಹುದು. ಸುಪ್ರೀಂ ಕೋರ್ಟ್‌ನ ಹಲವಾರು ತೀರ್ಪುಗಳಲ್ಲಿ ಈ ನಿಯಮದ ಜಟಿಲತೆ ಸಾಬೀತಾಗಿದೆ. 12 ವರ್ಷಗಳ ವಾಸ, ಮಾಲೀಕರ ವಿರೋಧ ಇಲ್ಲದಿದ್ದಾಗ ಹಕ್ಕು ಕಾನೂನಾತ್ಮಕ ಆಗಬಹುದು.

ಕೊನೆಯದಾಗಿ ನಿಮ್ಮ ಮನೆ ನಿಮ್ಮದೇ ಆಗಿರಲಿ ಎನ್ನುವುದಾದರೆ, ಕೇವಲ ಕಾಗದಗಳಲ್ಲ, ನಿಮ್ಮ ಪ್ರತಿಕ್ರಿಯೆಗಳಲ್ಲೂ ಹಕ್ಕು ತೋರಿಸಬೇಕು. ಇಲ್ಲದಿದ್ದರೆ ನಿಮ್ಮ ಸ್ವತ್ತೆ ಇನ್ನೊಬ್ಬರ ಆಸ್ತಿ ಆಗಿಬಿಡಬಹುದು ಎಂದು ಜಸ್ಟ್‌ ಕನ್ನಡ ವರದಿ ಮಾಡಿದೆ. ಒಟ್ಟಿನಲ್ಲಿ ಹೇಳುವುದಾದ್ರೆ ಮಾನೆ ಮಾಲೀಕರು ಯಾವುದೇ ದಾಖಲೆ ಹಾಗೂ ಅಗ್ರಿಮೆಂಟ್‌ ಇಲ್ಲದೆ, ಬಾಡಿಗೆ ನೀಡಿದರೆ ಆ ಮನೆಯನ್ನು ಕಳೆದುಕೊಳ್ಳುವಂತಹ ಪರಿಸ್ಥಿತಿ ಎದುರಾದ್ರೂ ಆಶ್ಚರ್ಯವಿಲ್ಲ. ಒಂದು ವೇಳೆ ಕಾನೂನು ಸಮರಕ್ಕೆ ಇಳಿದರೂ ಅದನ್ನು ಸರಿಪಡಿಸಲು ತುಂಬಾ ದಿನಗಳು ಅಥವಾ ವರ್ಷಗಳೇ ಬೇಕಾಗಬಹುದು. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಸೂಕ್ತ ದಾಖಲೆಗಳನ್ನು ಪಡೆದು ಮನೆಗಳನ್ನು ಬಾಡಿಗೆ ನೀಡಿದರೆ ಉತ್ತಮ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+