ಡಿಕೆಶಿಗೆ ಕೇಕ್ ತಿನ್ನಿಸುವಷ್ಟು ಸೌಜನ್ಯ ಪ್ರಿಯಾಂಕಾ ಗಾಂಧಿಗೆ ಇಲ್ಲವೇ? ಕಾಲೆಳೆದ ಬಿಜೆಪಿ

ಬೆಂಗಳೂರು, ಮೇ 17: ಹೈಕಮಾಂಡ್‌ ಮಟ್ಟದಲ್ಲಿ ಟ್ರಬಲ್‌ ಶೂಟರ್‌ ಎನಿಸಿಕೊಂಡಿರುವ ಡಿ.ಕೆ. ಶಿವಕುಮಾರ್ ಅವರ ಹುಟ್ಟುಹಬ್ಬದ ಕೇಕ್ ತಿನ್ನಿಸುವಷ್ಟೂ ಪ್ರಿಯಾಂಕ ಗಾಂಧಿಗೆ ಸೌಜನ್ಯವಿಲ್ಲವೇ ಎಂದು ರಾಜ್ಯ ಬಿಜೆಪಿ ಕಾಂಗ್ರೆಸ್ಸಿಗರ ಕಾಲೆಳೆದಿದೆ.

ರಾಜಸ್ಥಾನದ ಉದಯಪುರದಲ್ಲಿ ನಡೆದ ಚಿಂತನ ಶಿಬಿರದಲ್ಲಿ ಕರ್ನಾಟಕದ ನಾಯಕರೆಲ್ಲರೂ ಪಾಲ್ಗೊಂಡಿದ್ದರು. ಮೇ 15ರಂದು ಡಿ.ಕೆ. ಶಿವಕುಮಾರ್‌ ಹುಟ್ಟುಹಬ್ಬವಾಗಿತ್ತು. 60ನೇ ವಸಂತಕ್ಕೆ ಕಾಲಿಟ್ಟಿದ್ದ ಶಿವಕುಮಾರ್ ಅವರಿಗೆ ಅಲ್ಲಿ ನೆರೆದಿದ್ದವರೆಲ್ಲರೂ ಶುಭ ಹಾರೈಸಿದ್ದರು. ಅದೇ ದಿನ ಸಂಜೆ ಕೇಕ್ ಕತ್ತರಿಸುವ ಸಣ್ಣ ಸಮಾರಂಭವನ್ನೂ ಆಯೋಜಿಸಲಾಗಿತ್ತು. ಅದರಲ್ಲಿ ಪ್ರಿಯಾಂಕಾ ಗಾಂಧಿ ಸಹ ಭಾಗಿಯಾಗಿದ್ದರು. ಅಲ್ಲಿ ನಡೆದ ಪ್ರಸಂಗವನ್ನು ರಾಜ್ಯ ಬಿಜೆಪಿ ಟೀಕಿಸಿದೆ.

ನೀವೆಷ್ಟೇ ಗುಲಾಮಗಿರಿ, ಚಮಚಾಗಿರಿ ಮಾಡಿದರೂ ನಕಲಿ ಗಾಂಧಿಗಳು ನಿಮ್ಮನ್ನು ಇಡುವಲ್ಲಿಯೇ ಇಡುತ್ತಾರೆ. ಹೈಕಮಾಂಡ್‌ ಮಟ್ಟದಲ್ಲಿ ಟ್ರಬಲ್‌ ಶೂಟರ್‌ ಎನಿಸಿಕೊಂಡಿರುವ ಶಿವಕುಮಾರ್ ಅವರ ಹುಟ್ಟುಹಬ್ಬದ ಕೇಕ್ ತಿನ್ನಿಸುವಷ್ಟೂ ಪ್ರಿಯಾಂಕ ಗಾಂಧಿಗೆ ಸೌಜನ್ಯವಿಲ್ಲ. ಮತ್ತೊಬ್ಬರ‌ ಕೈಯಲ್ಲಿ ಕೇಕ್‌ ತಿನ್ನಿಸುವ ಪ್ರಮೇಯವೇನಿತ್ತು? ಎಂದು ಬಿಜೆಪಿ ಪ್ರಶ್ನಿಸಿದೆ.

ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುವ ಈ ಹೊತ್ತಿನಲ್ಲಿ, ನಕಲಿ ಗಾಂಧಿ ವಂಶದವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಮೂರನೇ ದರ್ಜೆಯವರಂತೆ ನಡೆಸಿಕೊಳ್ಳುತ್ತಿದ್ದಾರೆ. ಕನಕಪುರದ ಬಂಡೆ ಹೀಗೆ ಬಗ್ಗಿದ್ದು, ಕುಗಿದ್ದು ಅಸಹಾಯಕತನದ ಪರಮಾವಧಿಯಲ್ಲದೆ ಮತ್ತೇನು? ಎಂದು ಕಾಲೆಳೆದಿದೆ.

Priyanka Gandhi not have enough courtesy to eat cake for DK Shivakumar?

ಕೇಕ್‌ ತಿನ್ನಿಸಲು ನಿರಾಕರಣೆ, ರಮ್ಯಾ ಟ್ವೀಟ್‌ ದಾಳಿ, ಎಂಬಿ ಪಾಟೀಲ್ ಸಿಡಿದೆದ್ದಿದ್ದು, ಸಿದ್ದರಾಮಯ್ಯ & ಬಣದ ಇತ್ತೀಚೆಗಿನ ನಡೆ, ಕೆಪಿಸಿಸಿ ಕಚೇರಿಯಲ್ಲಿ ಭ್ರಷ್ಟಾಚಾರದ ಆರೋಪ ಇದೆಲ್ಲವೂ ಅವರನ್ನು ಹರಕೆಯ ಕುರಿ ಮಾಡುವ ತಂತ್ರ. ಈ ಎಲ್ಲ ಘಟನೆಗಳು ಏನೋ ಮುನ್ಸೂಚನೆ ನೀಡುತ್ತಿರುವುದು ನಿಜವಲ್ಲವೇ? ಎಂದು ಬಿಜೆಪಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಿದೆ.

Priyanka Gandhi not have enough courtesy to eat cake for DK Shivakumar?

ಶಿವಕುಮಾರ್ ಮಾರ್ ಅವರೇ, ಕೈಗೆ ಬಂದ ತುತ್ತು, ನಿಮ್ಮ ಬಾಯಿಗೆ ಬರುವುದಿಲ್ಲ. ಈ ಸತ್ಯವನ್ನು ಈಗಲಾದರೂ ಅರಿತುಕೊಳ್ಳಿ. ಕಾಣದ ಕೈಗಳು ನಿಮ್ಮ ಅಧಿಕಾರವನ್ನು ನಿಮ್ಮ ಮುಂದೆಯೇ ಹೀಗೆಯೇ ಕಿತ್ತುಕೊಳ್ಳುತ್ತಾರೆ. ನಿಮ್ಮ ಧನ ಬಲ ಮಾತ್ರ ಬಳಸಿಕೊಳ್ಳುತ್ತಾರೆ, ಅಧಿಕಾರದ ಸಮಯದಲ್ಲಿ ದೂರ ಇಡುತ್ತಾರೆ. #ಅಸಹಾಯಕಡಿಕೆಶಿ ಇಷ್ಟೊಂದು ದುರ್ಬಲವೇ? ಎಂದು ಕೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+