Get Updates
Get notified of breaking news, exclusive insights, and must-see stories!

ಖಾಸಗಿ ಶಾಲೆಗಳ ಶುಲ್ಕ ಏರಿಕೆ, ಶಿಕ್ಷಣ ಇಲಾಖೆ ಖಡಕ್ ಸೂಚನೆ

ಬೆಂಗಳೂರು, ಮೇ 23: ಜೂನ್‌ ತಿಂಗಳು ಆರಂಭವಾಗುತ್ತಿದೆ. 2024-25ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗೆ ಚಾಲನೆ ಸಿಕ್ಕಿದೆ. ಪೋಷಕರು ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುವಾಗ ಶುಲ್ಕ ಏರಿಕೆ ನೋಡಿ ಕಂಗಾಲಾಗಿದ್ದಾರೆ.

ಕೆಲವು ಖಾಸಗಿ ಶಾಲೆಗಳಲ್ಲಿ ಶೇ 30ರ ತನಕ ಶುಲ್ಕ ಹೆಚ್ಚಳವಾಗಿದ್ದು, ದಿನನಿತ್ಯದ ಖರ್ಚುಗಳ ಜೊತೆ ಮಕ್ಕಳ ಶಾಲಾ ಶುಲ್ಕ ಪೋಷಕರ ಜೀಬಿಗೆ ಕತ್ತರಿ ಹಾಕಿದೆ. ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಇಲಾಖೆ, ಆಯುಕ್ತರ ಕಛೇರಿ ಈ ವಿಷಯದಲ್ಲಿ ಖಡಕ್ ಸೂಚನೆಯನ್ನು ನೀಡಿದೆ.

Private School Fee Collection Education Department Circular

ಆಯಕ್ತರು ಈ ಕುರಿತು ಸುತ್ತೋಲೆ ಹೊರಡಿಸಿದ್ದು, ಸುತ್ತೋಲೆ ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ನಿಗದಿಪಡಿಸಿರುವ ಶುಲ್ಕದ ವಿವರ ಪ್ರಕಟಿಸುವ ಬಗ್ಗೆ ಎಂಬ ವಿಷಯ ಒಳಗೊಂಡಿದೆ. ಅಲ್ಲದೇ ಶಿಕ್ಷಣ ಹಕ್ಕು ಕಾಯಿದೆ-2009 ಮತ್ತು ಕರ್ನಾಟಕ ಕಡ್ಡಾಯ ಮತ್ತು ಉಚಿತ ಪ್ರಾಥಮಿಕ ಶಿಕ್ಷಣ ಹಕ್ಕು ನಿಯಮಗಳು-2012 ಉಲ್ಲೇಖ ಮಾಡಲಾಗಿದೆ.

ಸುತ್ತೋಲೆಯ ವಿವರಗಳು: ಖಾಸಗಿ ಅನುದಾನರಹಿತ ಶಾಲೆಗಳಲ್ಲಿ 2024-25ನೇ ಶೈಕ್ಷಣಿಕ ಸಾಲಿಗೆ ವಿದ್ಯಾರ್ಥಿಗಳ ದಾಖಲಾತಿ ಮತ್ತು ಶುಲ್ಕ ವಸೂಲಾತಿ ಪ್ರಕ್ರಿಯೆ ಪ್ರಾರಂಭವಾಗಿರುತ್ತದೆ. ದಾಖಲಾತಿ ಪ್ರಕ್ರಿಯೆ, ದಾಖಲಾತಿ ಶುಲ್ಕ ಮತ್ತು ಇನ್ನಿತರೆ ಶುಲ್ಕವನ್ನು ಪಡೆಯುವ ಸಂಬಂಧ ಶಿಕ್ಷಣ ಹಕ್ಕು ಕಾಯಿದೆ -2009 ರಲ್ಲಿನ ಉಲ್ಲೇಖವನ್ನು ವಿವರಿಸಲಾಗಿದೆ.

capitaton fee means any kind of donation or contribution or payment other than the fee notified by the school. No capitation fee and screening procedure for admission.

No school or person shall, while admitting a child, collect any capitation fee and subject the child or his or her parents or guardian to any screening procedure.

Any school or person, if in contravention of the provisions of sub-section (1), receives capitation fee, shall be punishable with fine which may extend to ten times the capitation fee charged.

subjects a child to screening procedure, shall be punishable with fine which may extend to twenty-five thousand rupees for the first contravention and fifty thousand rupees for each subsequent contraventions.

ಶಿಕ್ಷಣ ಹಕ್ಕು ಕಾಯ್ದೆ-2009ರ ಸೆಕ್ಷನ್-2(b) ರಂತೆ ಎಲ್ಲಾ ಖಾಸಗಿ ಶಾಲೆಗಳು ತಾವು ಅಧಿಸೂಚಿಸಿದ ಶುಲ್ಕವನ್ನು ತಮ್ಮ ಶಾಲಾ ಜಾಲತಾಣದಲ್ಲಿ, ಶಾಲಾ ಸೂಚನಾ ಫಲಕದಲ್ಲಿ ಮತ್ತು ಇಲಾಖಾ ಜಾಲತಾಣದಲ್ಲಿ (SATS) ಸಾರ್ವಜನಿಕರು ಮತ್ತು ಪೋಷಕರಿಗೆ ಲಭ್ಯವಾಗುವಂತೆ ಪ್ರಕಟಪಡಿಸಲು ಹಾಗೂ ಶುಲ್ಕ ವಸೂಲಾತಿ ಮತ್ತು ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸೆಕ್ಷನ್-13ರ ಅಂಶಗಳನ್ನು ಕಡ್ಡಾಯವಾಗಿ ಪಾಲಿಸಲು ತಿಳಿಸಿದೆ.

ತಮ್ಮ ವ್ಯಾಪ್ತಿಯ ಯಾವುದೇ ಶಾಲೆಗಳು ಸನ್-2(b) ಮತ್ತು ಸೆಕ್ಷನ್ 13(1) ಅನ್ನು ಉಲ್ಲಂಘಿಸಿರುವ ಬಗ್ಗೆ ದೂರುಗಳು ದಾಖಲಾದಲ್ಲಿ, ಸೆಕ್ಷನ್ 13(2)a ಮತ್ತು ಸೆಕ್ಷನ್ 13(2)b ರಂತೆ ಹಾಗೂ ಕರ್ನಾಟಕ ಕಡ್ಡಾಯ ಮತ್ತು ಉಚಿತ ಪ್ರಾಥಮಿಕ ಶಿಕ್ಷಣ ಹಕ್ಕು ನಿಯಮಗಳು-2012 ರ ನಿಯಮ-23ರಲ್ಲಿ ತಿಳಿಸಿದಂತೆ ಅಗತ್ಯ ಕ್ರಮವಹಿಸಲು ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಉಪನಿರ್ದೇಶಕರಿಗೆ ಸೂಚಿಸಿದೆ ಎಂದು ಸುತ್ತೋಲೆ ಹೇಳಿದೆ.

ಈಗಾಗಲೇ 2024-25ನೇ ಸಾಲಿಗೆ ಪ್ರವೇಶಾತಿ ಮುಗಿಸಿರುವ, ನಡೆಸುತ್ತಿರುವ ಖಾಸಗಿ ಶಾಲೆಗಳು ಶೇ 20 ರಿಂದ 30ರ ತನಕ ಶುಲ್ಕವನ್ನು ಹೆಚ್ಚಿಸಿವೆ. ಈ ಬಗ್ಗೆ ಪೋಷಕರು ಕೇಳಿದರೆ ಟಿಸಿ ನೀಡುತ್ತೇವೆ ಎಂದು ಬೆದರಿಕೆ ಹಾಕಿದ ಪ್ರಕರಣಗಳು ನಡೆದಿವೆ ಎಂದು ಆರೋಪಿಸಲಾಗುತ್ತಿದೆ.

ಸಿಬಿಎಸ್‌ಇ, ಐಸಿಎಸ್‌ಇ ಮಾತ್ರವಲ್ಲ ರಾಜ್ಯಪಠ್ಯಕ್ರಮದ ಶಾಲೆಗಳಲ್ಲಿಯೂ ಸಹ ಶುಲ್ಕ ಏರಿಕೆಯಾಗಿದೆ. ಮೊದಲು ಶುಲ್ಕ ಪಾವತಿ ಮಾಡಲು ಎರಡು, ಮೂರು ಕಂತುಗಳನ್ನು ಶಾಲೆಗಳು ನೀಡುತ್ತಿದ್ದವು. ಆದರೆ ಈಗ ಒಂದೇ ಕಂತಿನಲ್ಲಿ ಶುಲ್ಕ ಪಾವತಿ ಮಾಡಬೇಕು ಎಂದು ಶಾಲೆಗಳು ಷರತ್ತು ಹಾಕುತ್ತಿವೆ ಎಂಬ ದೂರು ಪೋಷಕರದ್ದು.

ಬೆಂಗಳೂರು ನಗರದ ಮಾತ್ರವಲ್ಲ ರಾಜ್ಯದ ಇತರ ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿರುವ ಶಾಲೆಗಳು ಸಹ ಶುಲ್ಕ ಏರಿಕೆ ಮಾಡಿವೆ ಎಂಬುದು ಪೋಷಕರ ಆರೋಪ. ಶಾಲೆಗಳಲ್ಲಿ ಸೀಟುಗಳಿಗೆ ಭಾರೀ ಬೇಡಿಕೆ ಇದೆ ಎಂದು ಪ್ರಚಾರ ಮಾಡುವ ಶಾಲೆಗಳು ಶುಲ್ಕ ಏರಿಕೆ ಮಾಡಿವೆ ಎಂದು ಪೋಷಕರು ಹೇಳುತ್ತಿದ್ದಾರೆ.

ಈಗಾಗಲೇ ಹಲವು ರಾಜ್ಯಗಳಲ್ಲಿ ಇರುವಂತೆ ಶುಲ್ಕ ನಿಯಂತ್ರಣ ಕಾನೂನು ಜಾರಿಗೆ ತರಲು ಸರ್ಕಾರ ಮುಂದಾಗಬೇಕು. ಶಿಕ್ಷಕರ ವೇತನ ಸೇರಿದಂತೆ ಖರ್ಚು, ವೆಚ್ಚಗಳು ಮಾಸಿಕ ಕಂತಿನಲ್ಲಿ ಬರುವುದರಿಂದ ಶಾಲೆಗಳು ಒಂದು ಅಥವ ಎರಡು ಕಂತಿನಲ್ಲಿ ಶುಲ್ಕ ವಸೂಲಿ ಮಾಡುವುದು ಅವೈಜ್ಞಾನಿಕ ಕ್ರಮ ಎಂದು ಖಾಸಗಿ ಶಾಲಾ ಪೋಷಕರ ಸಂಘಟನೆಗಳ ಸಮನ್ವಯ ಸಮಿತಿ ಅಧ್ಯಕ್ಷ ಬಿ. ಎನ್. ಯೋಗಾನಂದ ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+