ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಎಂಬಿಬಿಎಸ್ ಸೀಟು ಶುಲ್ಕ ಇಳಿಕೆ
ಬೆಂಗಳೂರು, ಡಿಸೆಂಬರ್ 28: ಪ್ರಸಕ್ತ ಶೈಕ್ಷಣಿಕ ವರ್ಷ 2022-23ನೇ ವರ್ಷದಲ್ಲಿ ಬ್ಯಾಚುಲರ್ ಆಫ್ ಮೆಡಿಸಿನ್, ಬ್ಯಾಚುಲರ್ ಆಫ್ ಸರ್ಜರಿ (ಎಂಬಿಬಿಎಸ್) ಸೀಟುಗಳ ಪ್ರವೇಶಾತಿ ಡಿಸೆಂಬರ್ 28ಕ್ಕೆ ಮುಕ್ತಾಯವಾಗಲಿದೆ. ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಈ ಹಿಂದಿನ ಸುತ್ತಿನ ಕೌನ್ಸೆಲಿಂಗ್‌ನಲ್ಲಿ ಭರ್ತಿಯಾಗದ ಮತ್ತು ಸೀಟು ಭರ್ತಿಗಾಗಿ ಕಾಲೇಜುಗಳಿಗೆ ಹಿಂತಿರುಗಿದ ಸೀಟುಗಳ ಸಂಖ್ಯೆ ಕಡಿಮೆಯಾಗಿದೆ.
ಈ ಬಗ್ಗೆ ಮಾತನಾಡಿದ ಕರ್ನಾಟಕ ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರ ವೃತ್ತಿಪರ ಕಾಲೇಜುಗಳ ಸಂಘದ ಕಾರ್ಯದರ್ಶಿ ನರಸಿಂಹರಾಜು ಅವರು, ಎಲ್ಲಾ ಸೀಟುಗಳನ್ನು ಭರ್ತಿಯಾಗುವ ಮುನ್ನ ಅನೇಕ ಕಾಲೇಜುಗಳು ಸೀಟುಗಳ ಶುಲ್ಕ ಕಡಿತಗೊಳಸಬೇಕಿತ್ತು ಎಂದು ಅವರು ಅಭಿಪ್ರಾಯಪಟ್ಟರು. ಮೊದಲು ಸರಾಸರಿ ಸೀಟುಗಳು ಸುಮಾರು 1ರಿಂದ 1.3 ಕೋಟಿ ರೂ.ಗೆ ಭರ್ತಿಯಾಗುತ್ತಿದ್ದವು. ಈ ವರ್ಷ ಆ ಶುಲ್ಕ 80 ಲಕ್ಷ ರೂ. 1 ಕೋಟಿ ರೂ.ಇಳಿಕೆ ಕಂಡಿದೆ ಎಂದರು.
ಈಗ, ಮುಂದಿನ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (NEET) ಗೆ 3ರಿಂದ 4 ತಿಂಗಳು ಸಮಯ ಇದೆ. ಸೀಟು ಸಿಗದ ವಿದ್ಯಾರ್ಥಿಗಳು ಮತ್ತೆ ನೀಟ್ ಬರೆಯಲು ಆಸಕ್ತಿ ತೋರಿದ್ದಾರೆ. ಇನ್ನೂ ಕಾಲೇಜುಗಳು 1.5 ಕೋಟಿ ರೂ. ಶುಲ್ಕಕ್ಕೆ ನೀಡುತ್ತಿದ್ದ ವೈದ್ಯಕೀಯ ಸೀಟುಗಳನ್ನು ಸದ್ಯ 1.2 ಕೋಟಿ ರೂ.ನಷ್ಟಕ್ಕೆ ಕಡಿಮೆ ಹಣಕ್ಕೆ ನೀಡುತ್ತಿವೆ. ಒಟ್ಟು ವೈದ್ಯಕೀಯ ಕೋರ್ಸ್‌ಗೆ 76.5 ಲಕ್ಷಕ್ಕೆ ವೆಚ್ಚ ಬರಲಿದೆ ಎಂದು ಕಾಲೇಜು ಅಧ್ಯಾಪಕರೊಬ್ಬರು ತಿಳಿಸಿದ್ದಾರೆ.

ಎಂಜಿನಿಯರ್ ಸೀಟುಗಳಿಗೆ ಹೆಚ್ಚಾದ ಬೇಡಿಕೆ
ಕಾಲೇಜುಗಳು ಶುಲ್ಕ ಕಡಿಮೆಗೊಳಿಸಲು ಕಾರಣ ಏನು ಎಂದು ಹುಡುಕಿದರೆ, ಪ್ರವೇಶ ವೇಳಾಪಟ್ಟಿಯನ್ನು ರಾಜ್ಯ ಅನುಸರಿಸದಿರುವ ಪರಿಣಾಮ ರಾಜ್ಯದ್ಲಲಿ ಗೊಂದಲ ಉಂಟಾಗಿತ್ತು. ವೈದ್ಯಕೀಯ ಸೀಟುಗಳ ಸಂಖ್ಯೆ ಹೆಚ್ಚಾಗಿದ್ದ ನಡುವೆ, ಎಂಜಿನಿಯರಿಂಗ್‌ಗೆ ಸೀಟುಗಳಿಗೆ ಬೇಡಿಕೆ ಹೆಚ್ಚುತ್ತಿರುವುದನ್ನು ನೋಡಬಹುದು. ಕಾರಣ ಸೀಟು ಸಿಗದವರು ಮುಂದಿನ ಪರೀಕ್ಷೆವರೆಗೆ ಕಾಯುತ್ತಾರೆ. ಈ ವೇಳೆ ಅವರ ಮನಸ್ಸು ವೈದ್ಯಕೀಯ ಕ್ಷೇತ್ರ ಆಯ್ಕೆಯಿಂದ ಎಂಜಿನಿಯರಿಂಗ್ ಕ್ಷೇತ್ರದತ್ತ ಬದಲಾಗುವ ಸಾಧ್ಯತೆ ಇದೆ ಎಂದು ವೈದ್ಯಕೀಯ ಕಾಲೇಜು ಪ್ರಾಂಶುಪಾಲರೊಬ್ಬರು ತಿಳಿಸಿದರು.

2023ರ ಮೇ ತಿಂಗಳ ಮೊದಲ ವಾರದಲ್ಲಿ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (NEET) ಪರೀಕ್ಷೆ ನಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಅಲ್ಲಿಯವರೆಗೆ ಕಾಯಲಿರುವ ವೈದ್ಯಕೀಯ ಸೀಟು ಸಿಗದ ಅಭ್ಯರ್ಥಿಗಳು ಪುನಃ ಪರೀಕ್ಷೆ ಎದುರಿಸಲಿದ್ದಾರೆ ಎಂದು ತಿಳಿದು ಬಂದಿದೆ.












Click it and Unblock the Notifications