ಪ್ರಜ್ವಲ್ ರೇವಣ್ಣ ಕೇಸ್; ಡಿಎನ್‌ಎ ಟೆಸ್ಟ್, ಬಿಗ್ ಟ್ವಿಸ್ಟ್!
ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಕೇಸ್‌ನಲ್ಲಿ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಈ ಬೆಳವಣಿಗೆಯಿಂದ ಮುಂದಿನ ದಿನಗಳಲ್ಲಿ ಪ್ರಜ್ವಲ್ ರೇವಣ್ಣ ಕೇಸ್ ಇನ್ನಷ್ಟು ಜಟಿಲವಾಗುವ ಸಾಧ್ಯತೆ ಇದೆ. ಇತ್ತೀಚಿನ ದಿನಗಳಲ್ಲಿ ಪ್ರಜ್ವಲ್ ರೇವಣ್ಣ ಕೇಸ್ ಹೆಚ್ಚು ಸುದ್ದಿಯಾಗಿರಲಿಲ್ಲ. ರಾಜ್ಯದಲ್ಲಿ ವಿವಿಧ ಪ್ರಕರಣಗಳು ವರದಿಯಾದ ಮೇಲೆ ಈ ಪ್ರಕರಣದ ಸುದ್ದಿ ಇರಲಿಲ್ಲ. ಆದರೆ, ಪೊಲೀಸರು ಈ ಪ್ರಕರಣದ ತನಿಖೆಯಲ್ಲಿ ಸಾಕಷ್ಟು ದಾಖಲೆ ಸಂಗ್ರಹಿಸಿದ್ದಾರೆ.
ಲೈಂಗಿಕ ಕಿರುಕುಳ (ದೌರ್ಜನ್ಯದ) ಆರೋಪದ ಮೇಲೆ ಜೈಲು ಸೇರಿರುವ ಪ್ರಜ್ವಲ್ ರೇವಣ್ಣ ಕೇಸ್‌ನಲ್ಲಿ ಮಹತ್ವದ ಬೆಳವಣಿಗೆ ಆಗಿದೆ. ಇದರಿಂದ ಪ್ರಜ್ವಲ್ ಕೇಸ್ ಜಟಿಲ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ. ರಾಜ್ಯದಲ್ಲಿ ಪ್ರಜ್ವಲ್ ರೇವಣ್ಣ ಕೇಸ್ ಭಾರೀ ಸಂಚಲವನ್ನೇ ಸೃಷ್ಟಿ ಮಾಡಿತ್ತು. ಪ್ರಕರಣ ವರದಿಯಾದ ಹಲವು ದಿನಗಳ ನಂತರ ಪ್ರಜ್ವಲ್ ರೇವಣ್ಣನ ಬಂಧನವಾಗಿತ್ತು.

ಪ್ರಜ್ವಲ್ ರೇವಣ್ಣನದ್ದು ಎಂದು ಹೇಳಲಾಗಿದ್ದ ವಿಡಿಯೋಗಳು ಪೆನ್‌ಡ್ರೈವ್‌ಗಳಲ್ಲಿ ಹರಿದಾಡಿದ್ದವು. ನೂರಾರು ಜನ ಸಂತ್ರಸ್ತೆಯರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದರು. ಹಾಸನ ಜಿಲ್ಲೆಯಲ್ಲಿ ನಡೆದಿದೆ ಎನ್ನಲಾಗಿದ್ದ ಈ ಘಟನೆ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿತ್ತು. ಇದರಿಂದ ಹಾಸನ ಜಿಲ್ಲೆಯ ಹಾಗೂ ಕನ್ನಡಿಗರು ದೇಶದ ಮುಂದೆ ತಲೆತಗ್ಗಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಇದೀಗ ಈ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್ ಸಿಕ್ಕಿದೆ. ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣನಿಗೆ ಡಿಎನ್‌ಎ ಪರೀಕ್ಷೆ ಮಾಡಲಾಗಿದ್ದು, ಈ ವರದಿ ಪಾಸಿಟಿವ್ ಬಂದಿದೆ ಎನ್ನಲಾಗಿದೆ. ಈ ಡಿಎನ್‌ಎ ವರದಿಯಿಂದ ಕೇಸ್ ಹೊಸ ತಿರುವು ಪಡೆದುಕೊಳ್ಳುವ ಸಾಧ್ಯತೆ ಇದೆ. ಡಿಎನ್‌ಎ ವರದಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯದ (FSL) ತಜ್ಞರು ಸಲ್ಲಿಸಿದ್ದಾರೆ. ಪ್ರಜ್ವಲ್ ರೇವಣ್ಣ ಕೇಸ್ ತನಿಖೆ ನಡೆಸುವುದಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ರಚಿಸಿದ್ದ ವಿಶೇಷ ತನಿಖಾ ತಂಡಕ್ಕೆ (SIT)ಗೆ ಈ ವರದಿ ಸಲ್ಲಿಸಲಾಗಿದೆ. ಇದರಲ್ಲಿ ಮನೆಕೆಲಸದವರು ಹಾಗೂ ಮತ್ತೊಬ್ಬ ಮಹಿಳೆಯ ಮನೆಯಲ್ಲಿ ಪತ್ತೆಯಾಗಿರುವ ಬಟ್ಟೆಗಳಲ್ಲಿ (ಸೀರೆ ಹಾಗೂ ಒಳ ಉಡುಪು) ಪತ್ತೆಯಾಗಿರುವ ಕಲೆಗಳಿಗೂ (ವೀರ್ಯಕ್ಕೂ) ಪ್ರಜ್ವಲ್ ಅವರ ವೀರ್ಯಕ್ಕೂ ಹೋಲಿಕೆ ಇದೆ ಎನ್ನುವಂತಹ ಅಂಶ ಈ ವರದಿಯಲ್ಲಿ ಹೇಳಿದೆ ಎಂದು ವರದಿಯಾಗಿದೆ.
ಎಲ್ಲೆಲ್ಲಿ ಪರೀಕ್ಷೆ
ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಕೇಸ್‌ಗೆ ಸಂಬಂಧಿಸಿದಂತೆ ಹಲವು ಭಾಗದಲ್ಲಿ ಪರಿಶೀಲನೆ ನಡೆಸಲಾಗಿತ್ತು. ಹಾಸನ ಸಂಸದರ ಅತಿಥಿ ಗೃಹದಲ್ಲೂ ಪರಿಶೀಲನೆ ನಡೆಸಲಾಗಿತ್ತು. ಅಲ್ಲದೇ ಹೊಳೆನರಸೀಪುರ, ಬೆಂಗಳೂರಿನ ಬಸವನಗುಡಿ ಮನೆ ಸೇರಿದಂತೆ ತೋಟದ ಮನೆಗಳಲ್ಲೂ ಪರಿಶೀಲನೆ ನಡೆಸಲಾಗಿತ್ತು. ಅಲ್ಲಿದ್ದ ಕೆಲವು ಬಟ್ಟೆಗಳು, ಬೆಡ್‌ಶೀಟ್‌ಗಳನ್ನು ವಶಕ್ಕೆ ಪಡೆಯಲಾಗಿತ್ತು. ಅಲ್ಲದೇ ಪ್ರಕರಣದಲ್ಲಿ ಸಂತ್ರಸ್ತೆಯರಾಗಿದ್ದವರಿಂದ ಸೀರೆ ಹಾಗೂ ಕೆಲವು ಬಟ್ಟೆಗಳನ್ನು ವಶಕ್ಕೆ ಪಡೆಯಲಾಗಿತ್ತು. ಈ ಬಟ್ಟೆಗಳಲ್ಲಿ ಪತ್ತೆಯಾಗಿರುವಂತ ಕೂದಲು ಹಾಗೂ ವೀರ್ಯದ ಹೋಲಿಕೆ ಮಾಡುವ ಉದ್ದೇಶದಿಂದ ಎಸ್‌ಐಟಿ ಅಧಿಕಾರಿಗಳು ಪ್ರಜ್ವಲ್ ರೇವಣ್ಣನನ್ನು ಡಿಎನ್‌ಎ ಪರೀಕ್ಷೆಗೊಳಪಡಿಸಲಾಗಿತ್ತು.












Click it and Unblock the Notifications