Gruha Jyoti: ಸರ್ಕಾರಕ್ಕೆ ಬೇಸಿಗೆಯಲ್ಲಿ ವಿದ್ಯುತ್ ಪೂರೈಕೆಯ ಸವಾಲು: ಏನಂದ್ರು ಕೆಜೆ ಜಾರ್ಜ್

ಬೆಂಗಳೂರು, ನವೆಂಬರ್ 22: ರಾಜ್ಯದಲ್ಲಿ ವಿದ್ಯುತ್ ಲೋಡ್ ಶೆಡ್ಡಿಂಗ್ ಗೆ ಆಕ್ರೋಶ ವ್ಯಕ್ತವಾದ ಬಳಿಕ ತ್ರಿಫೇಸ್ ವಿದ್ಯುತ್ ಪೂರೈಕೆಗೆ ಬೇಡಿಕೆ ಕೇಳಿ ಬಂದಿತ್ತು. ಗೃಹ ಜ್ಯೋತಿ ಯೋಜನೆ ಜಾರಿಗೆ ತಂದಿರುವ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಬೆನ್ನಲ್ಲೆ ಮುಂದಿನ ಬೇಸಿಗೆಯಲ್ಲಿ ವಿದ್ಯುತ್‌ ಇನ್ನಷ್ಟು ಬೇಡಿಕೆ ಹೆಚ್ಚಾಗಲಿದೆ ಎಂದು ಸ್ವತಃ ಸಚಿವರೇ ತಿಳಿಸಿದ್ದಾರೆ. ಹಾಗಾದರೆ ಈ ಸವಾಲನ್ನು ಎದುರಿಸಲು ಸರ್ಕಾರ ಹೇಗೆ ಸಜ್ಜಾಗಿದೆ, ಎಷ್ಟು ವಿದ್ಯುತ್‌ಗೆ ಬೇಡಿಕೆ ಇದೆ ಎಂಬೆಲ್ಲ ಮಾಹಿತಿ ಇಲ್ಲಿ ತಿಳಿಯೋಣ.

ಕರ್ನಾಟಕದಲ್ಲಿ ಹಾಲಿ ನಿತ್ಯ ಸುಮಾರು 14,000 ಮೆಗಾ ವ್ಯಾಟ್‌ಗೆ (MW) ಮತ್ತು ನೀರಾವರಿ ಪಂಪ್‌ಸೆಟ್‌ ಸೆಟ್‌ಗಳಿಗೆ ಸುಮಾರು 4,500MW ವಿದ್ಯುತ್ ಬೇಡಿಕೆ ಇದೆ. ಇದು ಎದುರಾಗಲಿರುವ ಬೇಸಿಗೆ ಕಾಲದಲ್ಲಿ ಇನ್ನಷ್ಟು ಹೆಚ್ಚಾಗಲಿದೆ. ಅಂದರೆ, 16,500MW ಏರಿಕೆಯಾಗುವ ನಿರೀಕ್ಷೆಗಳು ಇವೆ ಎಂದು ಮಂಗಳವಾರ ಇಂಧನ ಸಚಿವ ಕೆಜೆ ಜಾರ್ಜ್‌ ಮಾಹಿತಿ ನೀಡಿದ್ದಾರೆ.

power-demand-expect-up-to-16500-mw

ಮುಂದಿನ 2024ರ ಬೇಸಿಗೆ ಅವಧಿಯಾದ ಫೆಬ್ರವರಿ, ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಹಾಲಿ ವಿದ್ಯುತ್ ಬೇಡಿಕೆಯ ಪ್ರಮಾಣ ಮತ್ತಷ್ಟು ಹೆಚ್ಚಾಗಲಿದೆ. ಆಗ ಸುಮಾರು 16,500 MW ವರೆಗೆ ವಿದ್ಯುತ್ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಅಗತ್ಯದಷ್ಟು ವಿದ್ಯುತ್ ಪೂರೈಕೆಗೆ ನಾವು ಸಜ್ಜಾಗಿದ್ದೇವೆ ಎಂದರು.

ಈಗಿನಿಂದಲೇ ವಿದ್ಯುತ್ ಸಂಗ್ರಹಕ್ಕೆ ಸಜ್ಜು

ಬೇಸಿಗೆ ವೇಳೆ ರಾಜ್ಯದ ರೈತರ ನೀರಾವರಿ ಪಂಪ್ ಸೆಟ್‌ಗಳಿಗೆ (ಐಪಿ) 07 ಗಂಟೆಗಳ ನಿರಂತರ ವಿದ್ಯುತ್ ಸರಬರಾಜು ಮಾಡಲು ಸೂಚನೆ ಇದೆ. ಹೀಗಾಗಿ ರಾಜ್ಯವು ವಿದ್ಯುತ್ ಸಂಗ್ರಹಣೆಗೆ ಮುಂದಾಗಿದೆ. ಪಂಜಾಬ್ ನಿಂದ 300 MW ಉತ್ತರ ಪ್ರದೇಶದಿಂದ 100-600 MW ವಿದ್ಯುತ್ ವಿನಿಮಯ ಮಾಡಿಕೊಳ್ಳಲು ಮುಂದಾಗಿದೆ. ಈ ಮೂಲಕ ಬೇಸಿಗೆಯಲ್ಲಿ ಲೋಡ್‌ ಶೆಡ್ಡಿಂಗ್, ಕಡಿತಕ್ಕೆ ಅವಕಾಶ ಮಾಡಿಕೊಡದಿರಲು ತೀರ್ಮಾನಿಸಿದೆ.

ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ವಿದ್ಯುತ್ ಬೇಡಿಕೆ ಹೆಚ್ಚಳವಾಗುತ್ತಿದ್ದರೂ ಸಹಿತ ಪೂರೈಕೆಗೆ ಕೊರತೆ ಆಗಿಲ್ಲ. ಸದ್ಯ ಮುಂದಿನ ದಿನಗಳಲ್ಲಿ ವಿದ್ಯುತ್ ಬೇಡಿಕೆಯು 300 ಮಿಲಿಯನ್ ಯೂನಿಟ್‌ಗೆ ಏರುವ ಸಾಧ್ಯತೆ ಇದ್ದು, ಅದರ ಪೂರೈಕೆಗೆ ಇಂಧನ ಇಲಾಖೆ ಅಧಿಕಾರಿಗಳು ಗಮನವಹಿಸಿದ್ದಾರೆ ಎಂದು ಇಲಾಖೆ ಕಾರ್ಯದ ಕುರಿತು ಅವರು ವಿವರಿಸಿದರು.

power-demand-expect-up-to-16500-mw

ಹಾಲಿ ವಿದ್ಯುತ್ ಸಂಗ್ರಹದ ವಿವರ

ಕರ್ನಾಟಕವು ಹಾಲಿ ನಿಯಮಗಳಡಿಯಲ್ಲಿ 2,200MW ವಿದ್ಯುತ್ ಪಡೆಯುತ್ತಿದೆ. ಖಾಸಗಿ ವಿದ್ಯುತ್ ಉತ್ಪಾದಕರಿಂದ 1,200MW ವಿದ್ಯುತ್, ಉತ್ತರ ಪ್ರದೇಶದಿಂದ 600, ಪಂಜಾಬ್‌ ರಾಜ್ಯದಿಂದ 300 ಮತ್ತು ವಿಜಯಪುರದ ಕುಡ್ಗಿ ವಿದ್ಯುತ್ ಸ್ಥಾವರದಿಂದ 150MW ವಿದ್ಯುತ್ ಸಂಗ್ರಹಿಸಿದೆ.

ಸ್ಥಳೀಯವಾಗಿ ವಿದ್ಯುತ್ ಉತ್ಪಾದನೆ ಹೆಚ್ಚಿಸುವ ಚಿಂತನೆಯ ಭಾಗವಾಗಿ 2.5 ಲಕ್ಷ ಟನ್‌ ಕಲ್ಲಿದ್ದಲು ಆಮದು ಮಾಡಿಕೊಳ್ಳುವ ಯತ್ನವು ಮುಂದುವರಿದಿದೆ. ಥರ್ಮಲ್ ಜನರೇಟರ್‌ಗಳ ಕಾರ್ಯಕ್ಷಮತೆಯನ್ನು ಸುಧಾರಿಸಲು ದೇಶೀಯ ಕಲ್ಲಿದ್ದಲಿನೊಂದಿಗೆ ಆಮದು ಕಲ್ಲಿದ್ದಲನ್ನು ಸರಾಸರಿ ಶೇ.10ರಷ್ಟು ಮಿಶ್ರಣ ಮಾಡಲಾಗುವುದು. ಸದ್ಯ ಯಲಹಂಕದ ಅನಿಲ ಸ್ಥಾವರದಿಂದ ಶೀಘ್ರವೇ 370MW ಸಾಮರ್ಥ್ಯದ ವಿದ್ಯುತ್ ಪೂರೈಕೆ ಆಗಲಿದೆ ಎಂದು ಇಂಧನ ಇಲಾಖೆಯ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಅವರು ಸಚಿವರಿಗೆ ಮಾಹಿತಿ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+