Power Cut: ಚಿತ್ರದುರ್ಗ, ತುಮಕೂರು ಸೇರಿ ವಿವಿಧೆಡೆ ಡಿಸೆಂಬರ್ 23ಕ್ಕೆ ಪವರ್ ಕಟ್
ರಾಜ್ಯದ ವಿವಿಧ ಭಾಗದಲ್ಲಿ ಇಂದು ಡಿಸೆಂಬರ್ 23ಕ್ಕೆ ಪವರ್ ಕಟ್ ಆಗಲಿದೆ ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ಮುನ್ನೆಚ್ಚರಿಕೆ ನೀಡಿದೆ. ಕರ್ನಾಟಕದ ಪ್ರಮುಖ ಭಾಗದಲ್ಲಿ ಇಂದು ಬೆಳಗ್ಗೆ 10ಗಂಟೆಯಿಂದ ಸಂಜೆ 5 ಗಂಟೆಯ ವರೆಗೂ ಪವರ್ ಕಟ್ ಇರಲಿದೆ ಎಂದು ಹೇಳಲಾಗಿದೆ. ಹೀಗಾಗಿ, ಪವರ್ ಕಟ್ ಆಗಲಿರುವ ಪ್ರದೇಶದಲ್ಲಿರುವವರು ಪರ್ಯಾಯ ಪ್ಲಾನ್‌ಗಳನ್ನು ಮಾಡಿಕೊಳ್ಳುವುದು ಉತ್ತಮ. ವಿವಿಧ ಭಾಗದಲ್ಲಿ ನಿರ್ವಹಣೆ ಇರುವುದರಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಾಸವಾಗಲಿದೆ ಎಂದು ಮುನ್ನೆಚ್ಚರಿಕೆ ಕೊಡಲಾಗಿದೆ.
ರಾಜ್ಯದ ವಿವಿಧ ಭಾಗದಲ್ಲಿ ವಿದ್ಯುತ್ ಪೂರೈಕೆಗೆ ಸಂಬಂಧಿಸಿದಂತೆ ನಿರ್ವಹಣಾ ಕೆಲಸ, ಹೈ - ಟೆನ್ಷನ್‌ಗಳ ಬದಲಾವಣೆ ಅಥವಾ ದುರಸ್ತಿ ಹಾಗೂ ಲೈನ್ ಕೆಲಸಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಸುದೀರ್ಘ ಅವಧಿಗೆ ಪವರ್ ಕಟ್ ಮಾಡಲಾಗುತ್ತಿದೆ. ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳ ವಿವಿಧ ಭಾಗಗಳು ಸೇರಿದಂತೆ ರಾಜ್ಯದ ಹಲವು ಭಾಗದಲ್ಲಿ ಪವರ್ ಕಟ್ ಇರಲಿದೆ. ಸೋಮವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆ ಇರುವುದಿಲ್ಲ. ಎಲ್ಲೆಲ್ಲಿ ಪವರ್ ಕಟ್ ಆಗಲಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಚಿತ್ರದುರ್ಗ ಜಿಲ್ಲೆ: ಚಿತ್ರದುರ್ಗದ ವಿವಿಧ ಭಾಗದಲ್ಲಿ ಇಂದು ಪವರ್ ಕಟ್ ಇರಲಿದೆ. ಪವರ್ ಕಟ್ ಆಗುವ ಪ್ರಮುಖ ಪ್ರದೇಶಗಳ ವಿವರ ಇಲ್ಲಿದೆ.
* ZP ಕಚೇರಿಯ ಸುತ್ತಮುತ್ತಲಿನ ಪ್ರದೇಶ, ಶಿಕ್ಷಕರ ಕಾಲೋನಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಪವರ್ ಕಟ್ ಇರಲಿದೆ. ಡಿಎಸ್ ಹಳ್ಳಿ, ಕುಂಚನಪಲ್ಲಿ, ಇಂಗಳದಾಳ್ ಮಾದನಾಯಕನಹಳ್ಳಿ, ಚಳ್ಳಕೆರೆ ರಸ್ತೆ ಹಾಗೂ ಇಲ್ಲಿನ ಕೈಗಾರಿಕಾ ಪ್ರದೇಶ, ಕಮಂಡಲ ಬಡಾವಣೆ, ಜಗನ್ನಾಥ ರಸ್ತೆ, ಕೋಟೆ ರಸ್ತೆ ಸುತ್ತಮುತ್ತ, ಕಲ್ಲಹಳ್ಳಿ, ದ್ಯಾಮಳ್ಳಿ, ಜೆಸಿ ಕೋಟೆ, ನೇರಲಹಳ್ಳಿ, ಕೊಲ್ಲೂರು, ಸಿಗಂಡೇರು ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಪವರ್ ಕಟ್ ಇರಲಿದೆ. ಅಲ್ಲದೆ ಚಿಕ್ಕಹಳ್ಳಿ, ಸಿದ್ದಾಪುರ, ಕೊಣಸೂರು, ಆಲಗಟ್ಟಾ ಮತ್ತು ದೊಡ್ಡಗಟ್ಟಾ ಭಾಗದಲ್ಲಿ ಪವರ್ ಕಟ್ ಇರಲಿದೆ.
ತುಮಕೂರು: ಇನ್ನು ತುಮಕೂರಿನಲ್ಲೂ ಪವರ್ ಕಟ್ ಇರಲಿದೆ ಎಂದು ಮುನ್ನೆಚ್ಚರಿಕೆ ಕೊಡಲಾಗಿದೆ. ತುಮಕೂರಿನಲ್ಲಿ ಹೈ - ಟೆನ್ಷನ್ ರಿಕಂಡಕ್ಟರಿಂಗ್ ಕೆಲಸ ನಡೆಯುತ್ತಿರುವುದರಿಂದ ಈ ಜಿಲ್ಲೆಯ ವಿವಿಧ ಭಾಗದಲ್ಲಿ ಪವರ್ ಕಟ್ ಇರಲಿದೆ.
ಇಲ್ಲಿನ ದೊಡ್ಡಸಾಗರ, ಚಿಕ್ಕಗಂಗವಳ್ಳಿ, ಮತ್ತು ಕುಣಿಗಲ್ ರಸ್ತೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪವರ್ ಕಟ್ ಇರಲಿದೆ. ಇದರೊಂದಿಗೆ ಕುಪ್ಪಸನಹಳ್ಳಿ, ಬ್ರಹ್ಮಸಂದ್ರ, ಕಪ್ಪೆನಹಳ್ಳಿ, ಜೋಡಿದಾಸೇನಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲೂ ಇಂದು ಪವರ್ ಕಟ್ ಇರಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.
ಪರ್ಯಾಯ ವ್ಯವಸ್ಥೆ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸೋಮವಾರ ಪವರ್ ಕಟ್ ಆಗಲಿರುವ ಹಿನ್ನೆಲೆಯಲ್ಲಿ ಪರ್ಯಾಯ ವ್ಯವಸ್ಥೆ ಕೆಪಿಟಿಸಿಎಲ್ ಮನವಿ ಮಾಡಿದೆ. ತುರ್ತು ನಿರ್ವಹಣೆಯ ಉದ್ದೇಶದಿಂದ ಪವರ್ ಕಟ್ ಮಾಡಲಾಗುತ್ತಿದ್ದು, ಸಾರ್ವಜನಿಕರು ಸಹ ಇದಕ್ಕೆ ಸಹಕಾರ ನೀಡಬೇಕು ಎಂದು ಹೇಳಲಾಗಿದೆ.












Click it and Unblock the Notifications