PM Surya Ghar Scheme: ಈವರೆಗೆ 6.3 ಲಕ್ಷ ಸೋಲಾರ್ ಘಟಕ ಸ್ಥಾಪನೆ, ನೀವು ಯೋಜನೆ ಲಾಭ ಪಡೆಯಿರಿ
ಬೆಂಗಳೂರು, ಡಿಸೆಂಬರ್ 31: ಮನೆ ಮೇಲೆ ಸೋಲಾರ್ ವಿದ್ಯುತ್ ವ್ಯವಸ್ಥೆ ಅಳಡಿಕೆ ಉದ್ದೇಶದಿಂದ ದೇಶದಲ್ಲಿ 'ಪ್ರಧಾನಮಂತ್ರಿ ಸೂರ್ಯ ಘರ್ ಮುಫ್ತ್ ಬಿಜಲಿ ಯೋಜನೆ' ಜಾರಿಯಾಗಿ ಒಂದು ವರ್ಷ ಇನ್ನೇನು ಪೂರ್ಣಗೊಳ್ಳಲಿದೆ. ಬ್ಯಾಂಕ್ ಮತ್ತು ಬೆಸ್ಕಾಂ ಸಹಾಯದಿಂದಲೂ ಮನೆ ಮೇಲೆ ಈ ಸೋಲಾರ್ ವಿದ್ಯುತ್ ವ್ಯವಸ್ಥೆ ಅಳವಡಿಕೆಗೆ ಅವಕಾಶ ಇದೆ. ಕಳೆದ 09 ತಿಂಗಳಲ್ಲಿ 6.3 ಲಕ್ಷ ಸೋಲಾರ್ ಘಟಕ ಸ್ಥಾಪಿಸಲಾಗಿದೆ ಎಂದು ಬಿಜೆಪಿಯು ಅಧಿಕೃತ ಅಂಕಿ ಸಂಖ್ಯೆ ನೀಡಿದೆ.
'ಸೂರ್ಯ ಘರ್ ಮುಫ್ತ್ ಬಿಜಲಿ ಯೋಜನೆ' ಮೂಲಕ ಗ್ರಾಮಗಳು ಸ್ವಾವಲಂಬಿಗಳಾಗುತ್ತಿದ್ದು, ವಿದ್ಯುತ್ ಉಳಿತಾಯದ ನಿಟ್ಟಿನಲ್ಲಿ ದೇಶ ಸಬಲೀಕರಣಗೊಳ್ಳುತ್ತಿದೆ ಎಂದು ಕರ್ನಾಟಕ ಬಿಜೆಪಿಯು ತಿಳಿಸಿದೆ.

ಪ್ರಧಾನಮಂತ್ರಿ ಸೋರ್ಯ ಘರ್ ಯೋಜನೆಯು 'ವಿದ್ಯುತ್ ಉತ್ಪಾದಿಸಿ ಹಣ ಉಳಿಸಿ, ಆದಾಯ ಗಳಿಸಿ' ಎಂಬ ಶಿರ್ಷಿಕೆಯಡಿ 2024ರ ಜನವರಿಯಲ್ಲಿ ಅನುಷ್ಠಾನಕ್ಕೆ ತರಲಾಯಿತು. ಅಲ್ಲಿಂದ ಈವರೆಗಿನ ಒಟ್ಟು ಅವಧಿಯಲ್ಲಿ ಕೇಲವ ಒಂಬತ್ತು ತಿಂಗಳಲ್ಲಿ ಬರೋಬ್ಬರಿ 6.3ಮನೆಗಳ ಮೇಲೆ ಸೋಲಾರ್ ಘಟಕ ಅವಳಡಿಕೆ ಆಗಿದೆ.
ಕರ್ನಾಟಕದ ಸೇರಿದಂತೆ ದೇಶದ ಅಸಂಖ್ಯಾತ ಜನರು ಈ ಯೋಜನೆಯಡಿ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಸೋಲಾರ್ ಅಳವಡಿಕೆ ಪ್ರಮಾಣ ಪ್ರತಿ ತಿಂಗಳಿಗೆ 10ಪಟ್ಟು ವೃದ್ಧಿ ಆಗುತ್ತಿದೆ. ಅಂದರೆ ತಿಂಗಳಿಂದ ತಿಂಗಳಿಗೆ ಯೋಜನೆಯಡಿ ಹೆಚ್ಚು ಹೆಚ್ಚು ಜನರು ಫಲಾನುಭವಿಗಳು ಆಗುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಸೋಲಾರ್ ವಿದ್ಯುತ್ ಅಳವಡಿಕೆ ಹೇಗೆ?
ಒಟ್ಟು 25 ವರ್ಷ ಸುದೀರ್ಘ ಬಾಳಿಕ ಬರಬಹುದಾಗಿ ಸೋಲಾರ್ ಪ್ಲಾಂಟ್ ಅನ್ನು ಮನೆ ಮೇಲೆ ಅಳವಡಿಸಲು ಮೊದಲು ನೀವು ಅರ್ಜಿ ಸಲ್ಲಿಸಬೇಕು. ಸರ್ಕಾರದ ಅಧಿಕೃತ ಪೋರ್ಟಲ್ https://www.pmsuryaghar.gov.in/consumerLogin ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು. ಈ ಯೋಜನೆ ಲಾಭ ಪಡೆಯಲು ನಿಮಗೆ 10 ವರ್ಷಗಳ ಮಿತಿಗೆ ಶೇಕಡಾ 07ರಷ್ಟು ಬ್ಯಾಂಕ್ ಸಾಲ ದೊರೆಯಲಿದೆ. ಅಲ್ಲದೇ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ಸಹ ನಿಮಗೆ ಸಬ್ಸಿಡಿ ನೀಡಲಿದೆ. ಇದೆಲ್ಲದರ ಲಾಭ ಪಡೆದು ನೀವು ಸೋಲಾರ್ ವ್ಯವಸ್ಥೆಯನ್ನು ನಿಮ್ಮ ಮೇಲೆ ಅಳವಡಿಕೆ ಮಾಡಿಕೊಳ್ಳಬಹುದು.
ಸೋಲಾರ್ ಘಟಕ ನಿರ್ಮಿಸುವವರು ಗಮನಿಸಿ
* ಒಂದು ಕಿಲೋ ವ್ಯಾಟ್ ಗಾತ್ರದ ಸೋಲಾರ್ ಘಟಕ ನಿರ್ಮಿಸಲು 60ರಿಂದ 80 ಸಾವಿರ ರೂಪಾಯಿ ಖರ್ಚಾಗಲಿದೆ. ಬೆಸ್ಕಾಂ ನಿಮಗೆ 30,000 ರೂಪಾಯಿಯಷ್ಟು ಸಬ್ಸಿಡಿ ನೀಡುತ್ತದೆ.
* ಎರಡು ಕಿಲೋ ವ್ಯಾಟ್ ಗಾತ್ರದ ಸೋಲಾರ್ ಘಟಕ ನಿರ್ಮಿಸಲು 1.20 ಲಕ್ಷ ದಿಂದ 1.60 ಲಕ್ಷ ರೂಪಾಯಿವರೆಗೆ ಖರ್ಚಾಗಲಿದೆ. ಬೆಸ್ಕಾಂ ನಿಮಗೆ 60,000 ರೂಪಾಯಿ ಸಬ್ಸಿಡಿ ನೀಡುತ್ತದೆ.
* ಮೂರು ಕಿಲೋ ವ್ಯಾಟ್ ಗಾತ್ರದ ಸೋಲಾರ್ ಘಟಕ ನಿರ್ಮಿಸಲು 1.80 ಲಕ್ಷ ದಿಂದ 2.40 ಲಕ್ಷ ರೂಪಾಯಿವರೆಗೆ ಖರ್ಚಾಗಲಿದೆ. ಬೆಸ್ಕಾಂ ನಿಮಗೆ 78,000 ರೂಪಾಯಿ ಸಬ್ಸಿಡಿ ನೀಡುತ್ತದೆ.
ಸೋಲಾರ್ ಘಟಕ ಅಳಡಿಕೆ ಪ್ರಯೋಜನಗಳೇನು?
ನೀವು ಸೋಲಾರ್ ಘಟಕವನ್ನು ಮನೆ, ವಾಣಿಜ್ಯ ಮಳಿಗೆ ಇಲ್ಲವೇ ಆಪಾರ್ಟ್‌ಮೆಂಟ್ ಮೇಲೆ ಅಳವಸಿಕೊಂಡರೆ ವಾರ್ಷಿಕ ವಿದ್ಯುತ್ ಬಿಲ್‌ನಲ್ಲಿ 9.600 ರೂಪಾಯಿಯಿಂದ 36 ರೂಪಾಯಿವರೆಗೆ ಉಳಿತಾಯ ಮಾಡಬಹುದು. 1 ಕಿಲೋ ವ್ಯಾಟ್ ಘಟಕದಿಂದ 100 ಯೂನಿಟ್ ವಿದ್ಯುತ್ ಉತ್ಪಾದನೆ ಆಗುತ್ತದೆ. ನೀವು ಬೇಕಾದಷ್ಟು ವಿದ್ಯುತ್ ಬಳಕೆ ಮಾಡಿಕೊಂಡು ಉಳಿದ ಹೆಚ್ಚುವರಿ ವಿದ್ಯುತ್ ಅನ್ನು ಬೆಸ್ಕಾಂ ಗೆ ಮಾರಾಟ ಮಾಡಿ ಅದರಿಂದಲೂ ಹಣ ಗಳಿಸಬಹುದು. ಆ ಹಣವನ್ನು ನೀವು ಸಾಲದ ಕಂತು ಪಾವತಿಸಬಹುದು ಎಂದು ಸರ್ಕಾರ ತಿಳಿಸಿದೆ.












Click it and Unblock the Notifications