ಕಲಬುರಗಿ: ಚುನಾವಣಾ ಪ್ರಚಾರದ ಮಧ್ಯೆ ಪುಟಾಣಿಗಳ ಜೊತೆ ಪ್ರಧಾನಿಗಳ ಆಟ

ಬೆಂಗಳೂರು, ಮೇ 03: ಪ್ರಧಾನ ಮಂತ್ರಿ ನರೇಂದ್ರ ಮೋದಿ ಸದ್ಯ ಕರ್ನಾಟಕ ಪ್ರವಾಸದಲ್ಲಿದ್ದಾರೆ. ಕರ್ನಾಟಕ ವಿಧಾನಸಭಾ ಚುನಾವಣೆ 2023ರ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸಿದ್ದು, ಬಿಜೆಪಿ ಅಭ್ಯರ್ಥಿಗಳ ಪರ ಭರ್ಜರಿ ಮತ ಬೇಟೆ ನಡೆಸುತ್ತಿದ್ದಾರೆ. ರೋಡ್‌ ಶೋ, ಚುನಾವಣಾ ಸಮಾವೇಶ, ಅಬ್ಬರದ ಪ್ರಚಾರ ನಡುವೆ ಅಪರೂಪದ ಘಳಿಗೆಗೆ ಕಲಬುರಗಿ ಸಾಕ್ಷಿಯಾಗಿದೆ.

ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಂಗಳವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದಾರೆ. ಇದರ ಮಧ್ಯೆಯೇ ಅಲ್ಲಿನ ಪುಟಾಣಿಗಳ ಜೊತೆ ಪ್ರಧಾನಿಗಳು ಕೆಲ ಸಮಯ ಕಳೆದಿದ್ದು, ಅವರೊಂದಿಗೆ ಆಟವಾಡಿದ್ದಾರೆ.

PM Narendra Modi Playing With Children At Kalaburagi Election Campaign

ಮಕ್ಕಳೊಂದಿಗೆ ಸಮಯ ಕಳೆದ ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ ಕಲಬುರಗಿ ಚುನಾವಣಾ ಪ್ರಚಾರದ ವೇಳೆ, ಮೋದಿ ಹೋಗುವ ದಾರಿಯಲ್ಲಿ ಮಕ್ಕಳ ಗುಂಪೊಂದು ನಿಂತು ಮೋದಿ ಮೋದಿ ಎಂದು ಜೈಕಾರ ಕೂಗುತ್ತಿದ್ದರು. ಇದನ್ನು ಗಮನಿಸಿದ ಪ್ರಧಾನಿ ಮೋದಿ, ತಾವೇ ಸ್ವತಃ ಕಾರಿನಿಂದ ಇಳಿದು ಮಕ್ಕಳ ಕಡೆ ಬಂದಿದ್ದಾರೆ. ಪ್ರಧಾನಿಗಳು ಬರುತ್ತಿದ್ದಂತೆ ಮಕ್ಕಳ ಸಂತೋಷ ದುಪ್ಪಟ್ಟು ಆಗಿದ್ದು, ಸರ್‌..ಸರ್‌.. ಎಂದು ಕೂಗಿದ್ದಾರೆ. ಬಳಿಕ ಮಕ್ಕಳ ಜೊತೆ ಮೋದಿ ಮಾತುಕತೆ ನಡೆಸಿದ್ದಾರೆ.

ಈ ವೇಳೆ ಶಾಲೆಗೆ ಹೋಗುತ್ತೀರಾ ಎಂದು ಮಕ್ಕಳನ್ನು ಪ್ರಶ್ನಿಸಿದ ಪ್ರಧಾನಿ ಮೋದಿ, ತಮ್ಮ ಕೈ ಬೆರಳಿನ ಮೂಲಕ ಮಕ್ಕಳಿಗೆ ಕೆಲವೊಂದು ಆಟವನ್ನು ತಿಳಿಸಿಕೊಟ್ಟಿದ್ದಾರೆ. ಅವರು ಹೇಳಿದಂತೆ ಮಾಡಿದ ಮಕ್ಕಳು ಖುಷಿಯಲ್ಲಿ ಮೋದಿ ಮೋದಿ ಎಂದು ಜೈಕಾರ ಹಾಕಿದ್ದಾರೆ. ಮಕ್ಕಳೊಂದಿಗೆ ಸಮಯ ಕಳೆದ ಪ್ರಧಾನಿ ಮೋದಿ ಬಳಿಕ ಜನರತ್ತ ಕೈ ಬೀಸಿ ಅಲ್ಲಿಂದ ತೆರಳಿದ್ದಾರೆ.

PM Narendra Modi Playing With Children At Kalaburagi Election Campaign

ಮಕ್ಕಳೊಂದಿಗೆ ಪ್ರಧಾನ ಮಂತ್ರಿ ಮೋದಿ ಸಮಯ ಕಳೆದ ವಿಡಿಯೋವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 'ಬಿಡುವಿಲ್ಲದ ಚುನಾವಣೆಯ ಪ್ರಚಾರದ ಕರ್ತವ್ಯದ ನಡುವೆಯೂ ದೇಶದ ಭವಿಷ್ಯದ ಪ್ರಜೆಗಳಿಗೆ ಚೇತೋಹಾರಿ ಪ್ರಶ್ನೆಗಳನ್ನು ಕೇಳಿ ಅವರನ್ನು ಹುರಿದುಂಬಿಸಿದ ವಿಶ್ವನಾಯಕ, ಭಾರತದ ಪ್ರಧಾನ ಸೇವಕ ಸನ್ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿ. ಕರ್ನಾಟಕದ ಕಲಬುರಗಿ ಇಂದು ಈ ಅಪರೂಪದ ಘಳಿಗೆಗೆ ಸಾಕ್ಷಿಯಾಯಿತು' ಎಂದು ಸಿಎಂ ಬೊಮ್ಮಾಯಿ ವಿಡಿಯೋ ಶೇರ್‌ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+