ಪ್ರಧಾನಿ ವಿಡಿಯೋ ಕಾನ್ಫರೆನ್ಸ್: ಸಿಎಂ ಬೊಮ್ಮಾಯಿ ವಿವರಿಸಿದ 20 ಅಂಶಗಳೇನು?

ಬೆಂಗಳೂರು, ಏಪ್ರಿಲ್ 27: ಕೋವಿಡ್ ಸ್ಥಿತಿಗತಿಯ ಬಗ್ಗೆ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾಹಿತಿ ಪಡೆಯುವ ಸಲುವಾಗಿ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದರು. ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗೃಹ ಕಚೇರಿ ಕೃಷ್ಣಾದಿಂದ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ರಾಜ್ಯದಲ್ಲಿ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ಎನ್ನುವುದರ ಬಗ್ಗೆ ಪ್ರಧಾನಮಂತ್ರಿಯವರಿಗೆ ವಿವರಿಸಿದರು.

ಸಿಎಂ ಬೊಮ್ಮಾಯಿ ವಿವರಿಸಿದ 20 ಅಂಶಗಳು ಹೀಗಿವೆ..

1. ಪ್ರಧಾನಮಂತ್ರಿಗಳ ಮಾರ್ಗದರ್ಶನದಲ್ಲಿ ಕೋವಿಡ್ ಮೂರೂ ಅಲೆಯನ್ನೂ ಸಮರ್ಥವಾಗಿ ಎದುರಿಸಲಾಗಿದೆ. ಈ ಅನುಭವದ ಮೇರೆಗೆ ನಾಲ್ಕನೇ ಅಲೆಯನ್ನೂ ಸಮರ್ಥವಾಗಿ ಎದುರಿಸುವ ಬಗ್ಗೆ ನಮಗೆ ಆತ್ಮವಿಶ್ವಾಸವಿದೆ ಹಾಗೂ ಸರ್ವರೀತಿಯಿಂದಲೂ ಸನ್ನದ್ಧರಾಗಿದ್ದೇವೆ.\

2. ಏಪ್ರಿಲ್ 9 ರವರೆಗೆ ಪಾಸಿಟಿವಿಟಿ ದರ ಕಡಿಮೆ ಇತ್ತು. ನಂತರದಲ್ಲಿ 0.3 ನಿಂದ 1.38 ವರಗೆ ಹಾಗೂ ಬೆಂಗಳೂರಿನಲ್ಲಿ 0.4 ನಿಂದ 2.07 ಗೆ ಏರಿಕೆಯಾಗಿದೆ.

PM held Vidieo conference meeting: CM explained 20 important points

3. ರಾಜ್ಯದಲ್ಲಿ ಈವರೆಗೆ 1686 ಸಕ್ರಿಯ ಪ್ರಕರಣಗಳು ವರದಿಯಾಗಿವೆ. ಕೋವಿಡ್ ನಿಂದ ಯಾವುದೇ ಸಾವು ವರದಿಯಾಗಿಲ್ಲ.

4. ಕೋವಿಡ್ ಪರೀಕ್ಷೆಗಳನ್ನು 30 ಸಾವಿರಕ್ಕೆ ಹೆಚ್ಚಿಸಲಾಗಿದೆ. ಬೆಂಗಳೂರಿನಲ್ಲಿ 10 ಸಾವಿರ ಹಾಗೂ ಇತರೆ ಜಿಲ್ಲೆಗಳಲ್ಲಿ 20 ಸಾವಿರ ಪರೀಕ್ಷೆಗಳನ್ನು ಪ್ರತಿನಿತ್ಯ ನಡೆಸಲಾಗುವುದು.

5. ವಿಮಾನನಿಲ್ದಾಣಗಳಲ್ಲಿ ದಕ್ಷಿಣ ಆಫ್ರಿಕಾ, ಥಾಯ್‍ಲ್ಯಾಂಡ್, ಇಂಡೋನೇಷ್ಯಾ, ರಷ್ಯಾ, ಚೈನಾ, ಆಸ್ಟ್ರೇಲಿಯಾ, ದಕ್ಷಿಣ ಕೊರಿಯಾದಿಂದ ಆಗಮಿಸುವ ಪ್ರಯಾಣಿಕರ ಪರೀಕ್ಷೆಗಳನ್ನು ಹೆಚ್ಚಿಸಿ ಟೆಲಿಟ್ಯಾಕಿಂಗ್ ಪ್ರಾರಂಭಿಸಲಾಗುವುದು.

6. ರಾಜ್ಯದಲ್ಲಿ 10 ಜಿನೋಮ್ ಸೀಕ್ವೆನ್ಸಿಂಗ್ ಪ್ರಯೋಗಾಲಯಗಳಿದ್ದು, ಈವರೆಗೆ 8890 ಪರೀಕ್ಷೆಗಳನ್ನು ಮಾಡಲಾಗಿದೆ. ಈ ಪೈಕಿ 4449 ಪ್ರಕರಣಗಳು ಓಮಿಕ್ರಾನ್ ವೈರಾಣು ಎಂದು ಧೃಢಪಟ್ಟಿದೆ.

PM held Vidieo conference meeting: CM explained 20 important points

7. ರಾಜ್ಯದಲ್ಲಿ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳು ಚಿಕಿತ್ಸೆ ಲಭ್ಯವಿದೆ. 1,43,000 ಆಕ್ಷಿಜನ್ ಹಾಸಿಗೆಗಳು ಪ್ರಸ್ತುತ ಲಭ್ಯವಿದೆ.

8. ಈಗಾಗಲೇ ಕೋವಿಡ್ ಸೂಕ್ತ ನಡವಳಿಕೆಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ.

9. ಈ ಕುರಿತು ಭಾರತ ಸರ್ಕಾರ ಈಗಾಗಲೇ ನೀಡಿರುವ ನಿಯಮಗಳನ್ನು ಪಾಲಿಸಲಾಗುತ್ತಿದೆ.

10. ಕರ್ನಾಟಕ ಲಸಿಕೆ ಅಭಿಯಾನದಲ್ಲಿ ಮುಂಚೂಣಿಯಲ್ಲಿದ್ದು, ಶೇ 98% ಜನಸಂಖ್ಯೆಗೆ ಲಸಿಕೆ ಹಾಕಲಾಗಿದೆ.

11. ಒಟ್ಟು 10.56 ಕೋಟಿ ಡೋಸ್‍ಗಳನ್ನು ಹಾಕಲಾಗಿದ್ದು, 4.98 ಕೋಟಿ ಮೊದಲ ಡೋಸ್ ಹಾಗೂ 4.80 ಕೋಟಿ ಎರಡನೇ ಡೋಸ್ ಲಸಿಕೆ ಹಾಕಲಾಗಿದೆ.

12. ಹದಿನೈದರಿಂದ - ಹದಿನೇಳು ವಯೋಮಾನದವರಿಗೆ ಈವರೆಗೆ 50 ಲಕ್ಷ ಡೋಸ್‍ಗಳನ್ನು ಹಾಕಲಾಗಿದೆ.

13. ಶೇ. 27ರಷ್ಟು ಜನಸಂಖ್ಯೆ ಮುಂಜಾಗ್ರತಾ ಲಸಿಕೆಯನ್ನು ಪಡೆದಿದ್ದಾರೆ.

14. ರಾಜ್ಯದಲ್ಲಿ ಪ್ರಸ್ತುತ 61 ಲಕ್ಷ ಲಸಿಕೆಗಳ ದಾಸ್ತಾನು ಲಭ್ಯವಿದೆ.

15. ಸಾರ್ವಜನಿಕರಲ್ಲಿ ಕೋವಿಡ್ ಬಗ್ಗೆ ಜಾಗೃತಿ ಮೂಡಿಸಲು ಮಾಹಿತಿ, ಶಿಕ್ಷಣ ಮತ್ತು ಸಂವಹನ ಚಟುವಟಿಕೆಗಳನ್ನು ತೀವ್ರಗೊಳಿಸಲಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿಯೂ ಈ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.

16. ರಾಜ್ಯದ ಗಡಿಗಳಲ್ಲಿ ತಪಾಸಣೆಯನ್ನು ಹೆಚ್ಚಿಸಲಾಗುತ್ತಿದೆ.

17. ಕೋವಿಡ್ ನಿರ್ವಹಣೆಗಾಗಿ ರಾಜ್ಯಕ್ಕೆ ಒದಗಿಸಲಾಗಿರುವ 831 ಕೋಟಿ ರೂ.ಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ. ಎಲ್ಲಾ ಕಾಮಗಾರಿಗಳು ಪ್ರಗತಿಯಲ್ಲಿವೆ.

18. 1220 ಮೆಟ್ರಿಕ್ ಟನ್ ಆಕ್ಸಿಜನ್ ದಾಸ್ತಾನು ರಾಜ್ಯದಲ್ಲಿ ಲಭ್ಯವಿದೆ. 243 ಆಕ್ಸಿಜನ್ ಘಟಕಗಳ ಪೈಕಿ 242 ಆಕ್ಸಿಜನ್ ಘಟಕಗಳ ಕಾಮಗಾರಿ ಪೂರ್ಣಗೊಂಡಿವೆ.

19. ಆರ್ಥಿಕ ಚಟುವಟಿಕೆಗಳಿಗೆ ಯಾವುದೇ ನಿರ್ಬಂಧಗಳಿಲ್ಲದೆ, ಸಾಂಕ್ರಾಮಿಕವನ್ನು ನಿರ್ವಹಿಸಲು ಕ್ರಮ ವಹಿಸಲಾಗುವುದು.

20. ಕೋವಿಡ್ ಸಾಂಕ್ರಾಮಿಕದ ಸಂಭಾವ್ಯ 4ನೇ ಅಲೆಯನ್ನು ಎದುರಿಸಲು ರಾಜ್ಯ ಎಲ್ಲ ಸಿದ್ಧತೆ ಮಾಡಿಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+