ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಎಸ್ಐ ಅಕ್ರಮದ ಕಿಂಗ್ ಪಿನ್: ಪರೋಕ್ಷವಾಗಿ ಸಿಎಂ ಬೊಮ್ಮಾಯಿ ಹೆಸರು ಉಲ್ಲೇಖ

|
Google Oneindia Kannada News

ಕಲಬುರಗಿ, ಜುಲೈ 7: ಪಿಎಸ್ಐ ಅಕ್ರಮ ನೇಮಕಾತಿ ವಿಚಾರದಲ್ಲಿ ಎಡಿಜಿಪಿ ಅಮೃತ್ ಪಾಲ್ ಬಂಧನದ ನಂತರ, ವಿರೋಧ ಪಕ್ಷವಾದ ಕಾಂಗ್ರೆಸ್ ಆಡಳಿತ ಪಕ್ಷದ ವಿರುದ್ದ ವಾಗ್ದಾಳಿಯನ್ನು ಇನ್ನಷ್ಟು ತೀವ್ರಗೊಳಿಸಿದೆ. ಕಾಂಗ್ರೆಸ್ ನಾಯಕರು ಸತತ ಸುದ್ದಿಗೋಷ್ಠಿ ನಡೆಸಿ ಮಾಹಿತಿಯನ್ನು ಹೊರಹಾಕುತ್ತಿದ್ದಾರೆ.

ಈ ಭ್ರಷ್ಟಾಚಾರದಲ್ಲಿ ಸರಿಯಾದ ತನಿಖೆ ನಡೆದರೆ ಮುಖ್ಯಮಂತ್ರಿ ಬದಲಾವಣೆ ನಿಶ್ಚಿತ ಎಂದಿದ್ದ ಕಾಂಗ್ರೆಸ್ ನಾಯಕ ಮತ್ತು ಚಿತ್ತಾಪುರ ಕ್ಷೇತ್ರದ ಶಾಸಕರೂ ಆಗಿರುವ ಪ್ರಿಯಾಂಕ್ ಖರ್ಗೆ, ಪರೋಕ್ಷವಾಗಿ ಈ ಅಕ್ರಮದ ಹಿಂದಿನ ಕಿಂಗ್ ಪಿನ್ ಈಗಿನ ಸಿಎಂ ಬಸವರಾಜ ಬೊಮ್ಮಾಯಿ ಎಂದು ಬೊಟ್ಟು ಮಾಡಿದ್ದಾರೆ.

ಕಾಂಗ್ರೆಸ್ ಬಿಟ್ಟು, ಜೆಡಿಎಸ್ ಸೇರುವ ವಿಚಾರ: ಕೆ.ಎಚ್.ಮುನಿಯಪ್ಪ ಸ್ಪಷ್ಟನೆಕಾಂಗ್ರೆಸ್ ಬಿಟ್ಟು, ಜೆಡಿಎಸ್ ಸೇರುವ ವಿಚಾರ: ಕೆ.ಎಚ್.ಮುನಿಯಪ್ಪ ಸ್ಪಷ್ಟನೆ

ಈ ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಆರೋಪ/ಪ್ರತ್ಯಾರೋಪವನ್ನು ಮಾಡುತ್ತಿದ್ದಾರೆ. ಇವೆಲ್ಲದರ ನಡುವೆ, ಅಮೃತ್ ಪಾಲ್ ಬರೀ ಹೆಸರು ಮಾತ್ರ, ಅಸಲಿ ಹೆಸರು ಬೇರೆಯೇ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸಿಐಡಿಯ ಪ್ರತ್ಯೇಕ ತಂಡಗಳು ಅಮೃತ್ ಪಾಲ್ ಅವರ ನಿವಾಸ ಮತ್ತು ಫಾರಂಹೌಸಿನಲ್ಲಿ ಶೋಧವನ್ನು ಮುಂದುವರಿಸಿವೆ. ಕೆಲವೊಂದು ದಾಖಲೆಗಳು ಲಭ್ಯವಾಗಿವೆ ಎಂದು ಹೇಳಲಾಗುತ್ತಿದ್ದು, ಈ ಹಗರಣದ ಹಿಂದಿನ ಕಿಂಗ್ ಪಿನ್ ಹಿಂದಿನ ಗೃಹಸಚಿವರು ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.

ಇಡೀ PSI ಹಗರಣಕ್ಕೆ ಬಿಗ್ ಟ್ವಿಸ್ಟ್ ಕೊಟ್ಟ ಹೆಚ್.ಡಿ.ಕುಮಾರಸ್ವಾಮಿಇಡೀ PSI ಹಗರಣಕ್ಕೆ ಬಿಗ್ ಟ್ವಿಸ್ಟ್ ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ

 ಇದು ನಮ್ಮ ಸರಕಾರ ಭ್ರಷ್ಟರ ವಿರುದ್ದ ನಡೆಸುವ ಕ್ರಮ ಎಂದ ಬೊಮ್ಮಾಯಿ

ಇದು ನಮ್ಮ ಸರಕಾರ ಭ್ರಷ್ಟರ ವಿರುದ್ದ ನಡೆಸುವ ಕ್ರಮ ಎಂದ ಬೊಮ್ಮಾಯಿ

"ಭ್ರಷ್ಟಾಚಾರ ತಡೆಗಟ್ಟುವ ವಿಚಾರದಲ್ಲಿ ಯಾವುದೇ ರಾಜಿಯಿಲ್ಲ ಎಂದು ಹೇಳಿಕೊಂಡು ಬರುತ್ತಿದ್ದೇನೆ. ಕಾಂಗ್ರೆಸ್ ಅವಧಿಯಲ್ಲಿ ದೊಡ್ಡದೊಡ್ಡ ಭ್ರಷ್ಟಾಚಾರಗಳು ನಡೆದಿವೆ. ಆದರೆ, ಅದನ್ನು ಅಕ್ರಮವಾಗಿ ಹಣವನ್ನು ಪಡೆದು ಮುಚ್ಚಲಾಗಿದೆ. ಎಡಿಜಿಪಿಯಂತಹ ದೊಡ್ಡ ಅಧಿಕಾರಿಗಳನ್ನೇ ಬಂಧಿಸಿ ವಿಚಾರಣಗೆ ಒಳಪಡಿಸಲಾಗಿದೆ. ಇದು ನಮ್ಮ ಸರಕಾರ ಭ್ರಷ್ಟರ ವಿರುದ್ದ ನಡೆಸುವ ಕ್ರಮ"ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

 ಹೆಸರು ಉಲ್ಲೇಖಿಸದೇ ಬೊಮ್ಮಾಯಿಯವರ ಹೆಸರನ್ನು ಹೇಳಿದ ಖರ್ಗೆ

ಹೆಸರು ಉಲ್ಲೇಖಿಸದೇ ಬೊಮ್ಮಾಯಿಯವರ ಹೆಸರನ್ನು ಹೇಳಿದ ಖರ್ಗೆ

"ಈ ಅಕ್ರಮ ನೇಮಕಾತಿಯ ವಿಚಾರದಲ್ಲಿ ಅಮೃತ್ ಪಾಲ್ ಅವರ ಬಂಧನವಾಗಿದೆ, ಇವರು ಕೇವಲ ದಾಳವಾಗಿದ್ದಾರೆ ಅಷ್ಟೇ..ಅಕ್ರಮ ನಡೆದಾಗ ಇದ್ದ ಗೃಹ ಸಚಿವರೇ ಇದರ ಕಿಂಗ್ ಪಿನ್"ಎಂದು ಪ್ರಿಯಾಂಕ್ ಖರ್ಗೆ ಎಂದು ಹೆಸರು ಉಲ್ಲೇಖಿಸದೇ ಬೊಮ್ಮಾಯಿಯವರ ಹೆಸರನ್ನು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಆ ವೇಳೆ ಗೃಹ ಸಚಿವರಾಗಿ ಬಸವರಾಜ ಬೊಮ್ಮಾಯಿ ಕಾರ್ಯ ನಿರ್ವಹಿಸುತ್ತಿದ್ದರು.

 ಯಡಿಯೂರಪ್ಪನವರು ಸಿಎಂ ಆಗಿದ್ದಾಗ ರಾಜ್ಯ ಭ್ರಷ್ಟಾಚಾರದಲ್ಲಿ ಮೊದಲನೇ ಸ್ಥಾನ

ಯಡಿಯೂರಪ್ಪನವರು ಸಿಎಂ ಆಗಿದ್ದಾಗ ರಾಜ್ಯ ಭ್ರಷ್ಟಾಚಾರದಲ್ಲಿ ಮೊದಲನೇ ಸ್ಥಾನ

"ಅಕ್ರಮ ನೇಮಕಾತಿಯ ವಿಚಾರದಲ್ಲಿ ನ್ಯಾಯಾಂಗ ತನಿಖೆ ನಡೆಯಬೇಕು, ಅಕ್ರಮ ನಡೆದಾಗ ಎಲ್ಲವೂ ಅಂದಿನ ಗೃಹ ಸಚಿವರ ಅಣತಿಯಂತೆ ನಡೆದಿತ್ತು. ಈ ಬಗ್ಗೆ ಮೊದಲು ತನಿಖೆಯಾಗಲಿ, ಈಗಿನ ಗೃಹ ಸಚಿವರು ಇನ್ನೊಬ್ಬರನ್ನು ಉಳಿಸುವ ಕೆಲಸದಲ್ಲಿ ತೊಡಗಿದ್ದಾರೆ. ಯಡಿಯೂರಪ್ಪನವರು ಸಿಎಂ ಆಗಿದ್ದಾಗ ರಾಜ್ಯ ಭ್ರಷ್ಟಾಚಾರದಲ್ಲಿ ಮೊದಲನೇ ಸ್ಥಾನದಲ್ಲಿತ್ತು"ಎಂದು ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.

 ಬಿಟ್ ಕಾಯಿನ್, ಅಕ್ರಮ ನೇಮಕಾತಿ ಪ್ರಕರಣ

ಬಿಟ್ ಕಾಯಿನ್, ಅಕ್ರಮ ನೇಮಕಾತಿ ಪ್ರಕರಣ

ಬಿಟ್ ಕಾಯಿನ್, ಅಕ್ರಮ ನೇಮಕಾತಿ ಪ್ರಕರಣದ ಬಗ್ಗೆ ಸರಕಾರ ಸರಿಯಾದ ತನಿಖೆ ನಡೆಸಿಲ್ಲ, ಒಂದು ವೇಳೆ ತನಿಖೆ ಸರಿಯಾದ ದಿಕ್ಕಿನಲ್ಲಿ ನಡೆದಿದ್ದರೆ ಮೂರನೇ ಸಿಎಂ ಬರುತ್ತಿದ್ದರು ಎಂದಿದ್ದೆ. ಈಗಲೂ ನನ್ನ ಹೇಳಿಕೆಗೆ ಬದ್ಧನಾಗಿದ್ದೇನೆ. ಈಗಲೂ ತನಿಖೆ ಸರಿಯಾದ ದಿಕ್ಕಿನಲ್ಲಿ ನಡೆದರೆ ಮೂರನೇ ಸಿಎಂ ಫಿಕ್ಸ್​ ಎಂದು ಪ್ರಿಯಾಂಕ್​ ಖರ್ಗೆ ಹೇಳಿದ್ದರು. ಪ್ರಿಯಾಂಕ್​ ಖರ್ಗೆ ಪ್ರತಿನಿತ್ಯ ಒಂದೊಂದು ಮಾಹಿತಿ, ಸಾಕ್ಷಿ ನೀಡಿ ಸರ್ಕಾರನ್ನು ಸಂಕಷ್ಟಕ್ಕೀಡು ಮಾಡುತ್ತಿದ್ದಾರೆ.

Recommended Video

ಸುಧಾ ಮೂರ್ತಿ ಅಳಿಯ ರಿಷಿ ಸುನಕ್ ಗೆ ಒಲಿಯುತ್ತಾ ಬ್ರಿಟನ್ ಪ್ರಧಾನಿ ಸ್ಥಾನ?? | *World | OneIndia Kannada

English summary
PSI Recruitment Scam Kingpin Is Former Home Minister, Said Priyank Kharge. Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X