100 ಸಿಸಿಗಿಂತ ಕಡಿಮೆ ಸಾಮರ್ಥ್ಯದ ಬೈಕ್ ಗಳಲ್ಲಿ ಡಬಲ್ ರೈಡ್ ನಿಷೇಧ?
ಬೆಂಗಳೂರು, ಅಕ್ಟೋಬರ್ 23: 100 ಸಿಸಿಗಿಂತ ಕಡಿಮೆ ಎಂಜಿನ್ ಸಾಮರ್ಥ್ಯ ಹೊಂದಿರುವ ಬೈಕ್ ಮತ್ತು ಸ್ಕೂಟರ್ ಗಳಲ್ಲಿ ಡಬಲ್ ರೈಡ್ ನಿಷೇಧಿಸಲು ರಾಜ್ಯ ಸರಕಾರ ಮುಂದಾಗಿದೆ. ಇದಕ್ಕೆ 100 ಸಿಸಿಗಿಂತ ಕಡಿಮೆಯ ಎಂಜಿನ್ ಹೊಂದಿರುವ ಬೈಕ್ ಗಳೇ ಹೆಚ್ಚಾಗಿ ಅಪಘಾತಕ್ಕೀಡಾಗುತ್ತಿರುವ ಕಾರಣವನ್ನು ಅದು ಮುಂದಿಟ್ಟಿದೆ.
ಇದಕ್ಕಾಗಿ 'ಕರ್ನಾಟಕ ಮೋಟಾರ್ ವಾಹನ ನಿಯಮ- 1989'ಕ್ಕೆ ತಿದ್ದುಪಡಿ ತರಲು ಸರ್ಕಾರ ಮುಂದಾಗಿದೆ.

ಅಪಘಾತ ಪ್ರಕರಣವೊಂದರಲ್ಲಿ ಕಡಿಮೆ ಸಾಮರ್ಥ್ಯದ ಬೈಕ್ ಗಳಲ್ಲಿ ಡಬಲ್ ರೈಡ್ ನಿಷೇಧಿಸುವ ಸಂಬಂಧ ಹೈಕೋರ್ಟ್ ರಾಜ್ಯ ಸರಕಾರದ ಬಳಿ ವಿವರಣೆ ಕೇಳಿದೆ. ಈ ಹಿನ್ನಲೆಯಲ್ಲಿ 100 ಸಿಸಿಗಿಂತ ಕಡಿಮೆ ಸಾಮರ್ಥ್ಯದ ಬೈಕ್ ಗಳಲ್ಲಿ ಹಿಂಬದಿಯ ಸವಾರರಿಗೆ ಅವಕಾಶ ನಿರಾಕರಿಸಲು ಸರಕಾರ ಮುಂದಾಗಿದೆ.
"ನಾವು 50 ಸಿಸಿ ಎಂಜಿನ್ ಸಾಮರ್ಥ್ಯದ ಬೈಕ್ ಗಳಿಗೆ ಈ ನಿಯಮಾವಲಿ ತರಲು ಆಲೋಚಿಸಿದ್ದೇವೆ. ಇದು ಹೊಸ ಬೈಕ್ ಗಳಿಗೆ ಮಾತ್ರ ಅನ್ವಯವಾಗಲಿದೆ. ಸದ್ಯ ಚಾಲ್ತಿಯಲ್ಲಿರುವ ಬೈಕ್ಗಳಿಗೆ ಈ ನಿಯಮ ಅನ್ವಯವಾಗುವುದಿಲ್ಲ," ಎಂದು ಸಾರಿಗೆ ಆಯುಕ್ತ ಬಿ ದಯಾನಂದ ಹೇಳಿದ್ದಾರೆ.
ಸದ್ಯ ಮಾರಾಟವಾಗುವ ಹೆಚ್ಚಿನ ಬೈಕ್ ಗಳು 100 ಸಿಸಿಗಿಂತ ಹೆಚ್ಚಾಗಿರುವುದರಿಂದ ಈ ನಿಯಮ ಅಷ್ಟಾಗಿ ಪರಿಣಾಮ ಬೀರದು ಎಂದುಕೊಳ್ಳಲಾಗಿದೆ.












Click it and Unblock the Notifications