ಪೆಟ್ರೋಲ್‌ & ಡೀಸೆಲ್ ಬೆಲೆ ಕಡಿಮೆಯಾಗಲ್ಲ, ಜಾಸ್ತಿ ಆಗ್ಬೋದು!

ಕರ್ನಾಟಕದಲ್ಲಿ ಹಾಗೂ ದೇಶದಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ಸದ್ಯಕ್ಕೆ ಕಡಿಮೆಯಾಗುವ ಯಾವ ಲಕ್ಷಣವೂ ಕಾಣಿಸುತ್ತಿಲ್ಲ. ಇಸ್ರೇಲ್‌ ಹಾಗೂ ಇರಾನ್‌ನ ನಡುವೆ ವಾರ್‌ ಮುಂದುವರಿದಿದೆ. ಅಲ್ಲದೇ ದೇಶದಲ್ಲಿ ಷೇರು ಮಾರುಕಟ್ಟೆಯೂ ಕುಸಿಯುತ್ತಿದೆ. ಹೀಗಾಗಿ, ಸದ್ಯಕ್ಕೆ ಪೆಟ್ರೋಲ್‌ ಡೀಸೆಲ್‌ ಬೆಲೆ ಇಳಿಕೆಗಿಂತ ಹೆಚ್ಚಾಗುವ ಸಾಧ್ಯತೆಯೇ ಹೆಚ್ಚಾಗಿ ಇದೆ.

ಇಸ್ರೇಲ್‌ ಹಾಗೂ ಇರಾನ್‌ನ ನಡುವೆ ಯುದ್ಧ ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಅಲ್ಲದೇ ಅಮೆರಿಕಾದ ಡಾಲರ್‌ನ ಮುಂದೆ ರೂಪಾಯಿ ಮೌಲ್ಯ ನಿರಂತರವಾಗಿ ಕುಸಿಯುತ್ತಲ್ಲೇ ಇದೆ. ಇದಲ್ಲದೆ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ಇಳಿಕೆಯಾಗದೆ ಇರುವುದಕ್ಕೆ ಇನ್ನೂ ಹಲವು ಕಾರಣಗಳು ಇವೆ. ಇಸ್ರೇಲ್‌ ಹಾಗೂ ಇರಾನ್‌ನ ನಡುವೆ ಯುದ್ಧ ತೀವ್ರಗೊಂಡ ಬೆನ್ನಲ್ಲೇ ಕಚ್ಚಾ ತೈಲ ಹಾಗೂ ಆಯಿಲ್‌ ಬೆಲೆಗಳು ಏರಿಕೆಯಾಗಿವೆ. ಇನ್ನು ಮುಖ್ಯವಾಗಿ ಭಾರತವು ಮಧ್ಯ ಪ್ರಾಚ್ಯ (ಮಿಡಲ್‌ ಈಸ್ಟ್‌)ನಿಂದಲೇ ಶೇ 65ರಷ್ಟು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತದೆ.

Petrol amp amp Diesel prices are unlikely to decrease may increase

ಕಚ್ಚಾ ತೈಲದ ಬ್ಯಾರೇಜ್‌ ಬೆಲೆ ಇಳಿಕೆಯಾಗುತ್ತಿದೆ ಇನ್ನೇನು ಪೆಟ್ರೋಲ್‌ & ಡೀಸೆಲ್‌ ಬೆಲೆ ಇಳಿಕೆಯಾಯ್ತು ಎನ್ನುವಾಗಲೇ ಇಸ್ರೇಲ್‌ ಮತ್ತು ಇರಾನ್‌ನ ನಡುವೆ ಬೆಂಕಿ ಹೊತ್ತಿಕೊಂಡಿತು. ಇದರ ಪರಿಣಾಮವಾಗಿ, ಕಚ್ಚಾ ತೈಲ ವಸ್ತುಗಳು ಸೇರಿದಂತೆ ಹಲವು ವಸ್ತುಗಳ ಬೆಲೆ ಏಕಾಏಕಿ ಗಗನಮುಖಿಯಾಗಿವೆ. ರಷ್ಯಾ ಹಾಗೂ ಉಕ್ರೇನ್‌ನ ನಡುವೆ ಉಂಟಾಗಿರುವ ಬಿಕ್ಕಟ್ಟು ಇನ್ನೂ ಸಂಪೂರ್ಣವಾಗಿ ಇತ್ಯಾರ್ಥವಾಗಿಲ್ಲ.

ಈ ಎಲ್ಲಾ ಬೆಳವಣಿಗೆಗಳ ನಡುವೆ ಅಮೆರಿಕಾದ ಡಾಲರ್‌ನ ಮುಂದೆ ರೂಪಾಯಿ ಮೌಲ್ಯ ಸರ್ವಕಾಲಿಕ ಕುಸಿತ ಕಂಡಿದೆ. ಅಮೆರಿಕಾದ ಡಾಲರ್‌ನ ಮುಂದೆ ರೂಪಾಯಿ ಮೌಲ್ಯ ಕುಸಿದಾಗೆಲ್ಲ ಹಣದುಬ್ಬರ ಹಾಗೂ ವಿವಿಧ ವಸ್ತುಗಳ ಬೆಲೆ ಏರಿಕೆ ಆಗುತ್ತದೆ.

ವಿಶ್ವದ ವಿವಿಧ ರಾಷ್ಟ್ರಗಳ ನಡುವೆ ನಡೆಯುತ್ತಿರುವ ಯುದ್ಧ ಹಾಗೂ ವಿಷಮಸ್ಥಿತಿಯಿಂದಾಗಿ ಕಚ್ಚಾ ತೈಲ ಸೇರಿದಂತೆ ವಿವಿಧ ವಸ್ತುಗಳ ಆಮದು, ರಫ್ತು ಹಾಗೂ ಪುನರ್‌ರಫ್ತುಗಳ ಮೇಲೆ ಭಾರೀ ಹೊಡೆತ ಬಿದ್ದಿದೆ. ಅಂತರರಾಷ್ಟ್ರೀಯ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆಯಾದಂತೆ ದೇಶದಲ್ಲಿ ಕಚ್ಚಾ ತೈಲದ ಬೆಲೆಯನ್ನು ಆಯಿಲ್‌ ಕಂಪನಿಗಳು ಪರಿಷ್ಕರಣೆ (ಇಳಿಸುವುದು ಅಥವಾ ಹೆಚ್ಚಳ) ಮಾಡುತ್ತವೆ.

ಆದರೆ, ಇತ್ತೀಚಿನ ದಿನಗಳಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾಗಿಲ್ಲ. ವಿವಿಧ ದೇಶಗಳಲ್ಲಿ ನಡೆಯುತ್ತಿರುವ ಬೆಳವಣಿಗೆಯನ್ನು ನೋಡಿದರೆ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಏರಿಕೆಯಾದರೂ ಅಚ್ಚರಿ ಇಲ್ಲ ಎಂದೇ ಹೇಳಲಾಗುತ್ತಿದೆ.

ಇಂದಿನ ಪೆಟ್ರೋಲ್‌ ಮತ್ತು ಡೀಸೆಲ್ ಬೆಲೆ ಎಷ್ಟಿದೆ: ಬೆಂಗಳೂರಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್ ಬೆಲೆ ಅಕ್ಟೋಬರ್‌ 23ಕ್ಕೆ ಯಥಾಸ್ಥಿತಿಯಲ್ಲಿ ಇದೆ. ಪೆಟ್ರೋಲ್‌ ಬೆಲೆ ಪ್ರತಿ ಲೀಟರ್‌ಗೆ 102.86 ರೂಪಾಯಿ ಹಾಗೂ ಡೀಸೆಲ್ ಬೆಲೆ 88.94 ರೂಪಾಯಿ ಆಗಿದೆ.

ಮಹಾರಾಷ್ಟ್ರ ಚುನಾವಣೆಗೂ ಮುಂಚೆ ಇಳಿಕೆ: ನವೆಂಬರ್‌ 20ಕ್ಕೆ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನಡೆಯಲಿದೆ. ಮಹಾರಾಷ್ಟ್ರದಲ್ಲಿ 288 ವಿಧಾನಸಭಾ ಕ್ಷೇತ್ರಗಳಿದ್ದು ಒಂದೇ ಹಂತದಲ್ಲಿ ಈ ಬಾರಿ ಚುನಾವಣೆ ನಡೆಯುತ್ತಿದೆ. ಮಹಾರಾಷ್ಟ್ರದಲ್ಲಿ ಚುನಾವಣೆ ನಡೆಯುವುದಕ್ಕೂ ಮೊದಲೇ ದೇಶದಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ಇಳಿಕೆಯಾಗಲಿದೆ ಎಂದು ಹೇಳಲಾಗಿತ್ತು. ಆದರೆ, ಆ ಲೆಕ್ಕಾಚಾರಗಳು ತಲೆಕೆಳಗಾಗಿವೆ. ಈಗಾಗಲೇ ಮಹಾರಾಷ್ಟ್ರದಲ್ಲಿ ಹಾಗೂ ಜಾರ್ಖಂಡ್‌ನಲ್ಲಿ ಚುನಾವಣಾ ದಿನಾಂಕ ಘೋಷಣೆಯಾಗಿದ್ದು, ನೀತಿ ಸಂಹಿತೆ ಸಹ ಜಾರಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+