OYO Rooms: ಓಯೋ ಸಂಸ್ಕೃತಿ ಜಾಸ್ತಿ ಆಯ್ತು, ಯುವತಿಯರು & ಯುವಕರು...
ಓಯೋ.. ಓಯೋ.. ಓಯೋ... ಹಿಂಗೆ ಯಾರಾದರೂ ರೂಂ ಬುಕಿಂಗ್ ಮಾಡಬೇಕು ಅಂತ ಹೇಳಿದಾಗೆಲ್ಲಾ ಇದೊಂದೇ ಹೆಸರು ಪಠಣ ಮಾಡುತ್ತಾರೆ. ಅದರಲ್ಲೂ ಚಿಕ್ಕ ವಯಸ್ಸಿನಲ್ಲೇ ಈ ಸಂಸ್ಥೆ ಕಟ್ಟಿ ಬೆಳೆಸಿದ್ದ ಓಯೋ ಸಂಸ್ಥೆ ಮಾಲೀಕ, ಇಡೀ ಭಾರತವೇ ಜಾಗತಿಕ ಮಟ್ಟದಲ್ಲಿ ಹೋಟೆಲ್ ಇಂಡಸ್ಟ್ರಿಯಲ್ಲಿ ಮತ್ತೊಮ್ಮೆ ಗುರುತಿಸಿಕೊಳ್ಳಲು ಕಾರಣವಾಗಿದ್ದರು. ಓಯೋ ರೂಂ ಬಗ್ಗೆ ಜನರಲ್ಲಿ ನಂಬಿಕೆ ಕೂಡ ಹೆಚ್ಚಾಗುತ್ತಿದ್ದು, ಬುಕಿಂಗ್ ಮಾಡುವವರ ಸಂಖ್ಯೆ ಕೂಡ ಈಗ ಹೆಚ್ಚಾಗುತ್ತಿದೆ!
ಯುವತಿ & ಯುವಕರು ಸೇರಿದಂತೆ ಬಹುತೇಕರು ತಾವು ಉಳಿದುಕೊಳ್ಳಲು 'ಓಯೋ ರೂಂ' ಬುಕ್ ಮಾಡುತ್ತಾರೆ, ಅಲ್ಲದೆ 'ಓಯೋ ರೂಂ' ಬೇಕೆ ಬೇಕು ಅಂತಾರೆ. ಇದಕ್ಕೆ ತಾಜಾ ತಾಜಾ ಉದಾಹರಣೆ ಅಂದ್ರೆ ಹೊಸ ವರ್ಷಾಚರಣೆ ಸಮಯದಲ್ಲಿ ಕೂಡ 'ಓಯೋ ರೂಂ' ಬುಕಿಂಗ್ ಮಾಡಿದ್ದವರ ಸಂಖ್ಯೆ 11 ಲಕ್ಷ ಮೀರಿದೆ. ಹೀಗೆ, 11,00,000 ಲಕ್ಷ ಹುಡುಗಿ & ಹುಡುಗರು ಸೇರಿ ಹಲವರು ಓಯೋ ರೂಂನ ನ್ಯೂ ಇಯರ್ ದಿನ ಬುಕ್ ಮಾಡಿದ್ದರಂತೆ. ಹೀಗಿದ್ದಾಗಲೇ, ಓಯೋ ಸಂಸ್ಕೃತಿ ಜಾಸ್ತಿ ಆಯ್ತು, ಯುವತಿಯರು & ಯುವಕರು...

ಓಯೋ ಸಂಸ್ಕೃತಿ ಜಾಸ್ತಿ ಆಯ್ತಾ?
ಹೌದು, ಓಯೋ ಸಂಸ್ಕೃತಿ ಜಾಸ್ತಿ ಆಯ್ತು, ಯುವತಿಯರು & ಯುವಕರು ಓಯೋ ಸಂಸ್ಕೃತಿಗೆ ಮಾರು ಹೋಗುತ್ತಿದ್ದಾರೆ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ಶುರುವಾಗಿದೆ. ಅದರಲ್ಲೂ ಹೊಸ ವರ್ಷ ಆಚರಣೆ ದಿನವೇ ಭಾರಿ ಪ್ರಮಾಣದಲ್ಲಿ ಓಯೋ ಬುಕಿಂಗ್ ಆದ ವಿಚಾರ ಕೂಡ ಸಂಚಲನ ಸೃಷ್ಟಿ ಮಾಡಿದ್ದು, ಒಂದು ಕಡೆ ಪರ & ವಿರೋಧದ ಚರ್ಚೆಗಳು ಇದೀಗ ನಡೆಯುತ್ತಿವೆ.
ಭಾರತದಲ್ಲಿ ಹುಟ್ಟಿದ್ದ ಓಯೋ!
ಹೀಗೆ ಓಯೋ ರೂಂ ಎಂಬ ಕಾನ್ಸೆಪ್ಟ್ ಭಾರತದಲ್ಲಿ ಹುಟ್ಟಿದ್ದರೂ, ಜಗತ್ತಿನಾದ್ಯಂತ ದೊಡ್ಡದಾಗಿ ಸದ್ದು ಮಾಡುತ್ತಿದೆ. ಅದ್ರಲ್ಲೂ ಹೊಸ ವರ್ಷ ಆಚರಣೆ ವೇಳೆ ಓಯೋ ರೂಂಗಳ ಬಗ್ಗೆ ಜನರಲ್ಲಿ ಆಸಕ್ತಿ ಕೂಡ ಹೆಚ್ಚಾಗಿ ಇರುತ್ತದೆ. ಹೀಗಿದ್ದಾಗ, 11 ಲಕ್ಷ ಜನರಿಂದಲೇ ಓಯೋ ರೂಂ ಬುಕಿಂಗ್ ಆಗಿದೆಯಂತೆ. ಅದು ಒಂದೇ ದಿನದಲ್ಲಿ 11 ಲಕ್ಷ ಜನರಿಂದ ಓಯೋ ರೂಂ ಬುಕ್ ಆದ ಕುರಿತಾಗಿ ಇದೀಗ ಭರ್ಜರಿ ಚರ್ಚೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಓಯೋ ರೂಂ ಬುಕಿಂಗ್ ಮತ್ತೆ ಹೆಚ್ಚಾಗುವ ನಿರೀಕ್ಷೆ ಸಂಸ್ಥೆಗೆ ಇದೆ.
ಒಟ್ನಲ್ಲಿ ಭಾರತೀಯ ಹೋಟೆಲ್ ಉದ್ಯಮ ದೊಡ್ಡ ಮಟ್ಟಿಗೆ ಸಾಧನೆ ಮಾಡುತ್ತಿದ್ದು, ಹೀಗೆ ಜಾಗತಿಕ ಮಟ್ಟದಲ್ಲಿ ಕೂಡ ಭಾರತದಲ್ಲಿ ಹುಟ್ಟಿ ಬೆಳೆದ ಉದ್ಯಮಗಳು ಸೌಂಡ್ ಮಾಡ್ತಿವೆ. ಅದರಲ್ಲೂ ಮಧ್ಯಮ & ಬಡ ವರ್ಗದವರಿಗೆ ಓಯೋ ರೂಮ್ಸ್ ಸುಲಭವಾಗಿ ಸಿಗುತ್ತವೆ ಎಂಬ ಕಾರಣಕ್ಕೆ ಮತ್ತಷ್ಟು ಹತ್ತಿರವಾಗುತ್ತಿವೆ ಅಂತಾರೆ ಸೋಷಿಯಲ್ ಮೀಡಿಯಾ ಬಳಕೆದಾರರು.












Click it and Unblock the Notifications