OYO Rooms: 10 ಲಕ್ಷ ಜನರಿಂದ ಓಯೋ ರೂಂ ಬುಕ್! ಓಯೋ ಬುಕ್ ಮಾಡಿದ್ದವರಲ್ಲಿ....
ಓಯೋ ರೂಂ ಅನ್ನೋ ಕಾನ್ಸೆಪ್ಟ್ ಭಾರತದಲ್ಲಿ ಹುಟ್ಟಿದ್ದರೂ ಜಗತ್ತಿನಾದ್ಯಂತ ದೊಡ್ಡದಾಗಿ ಸದ್ದು ಮಾಡುತ್ತಿದೆ. ಅದರಲ್ಲೂ ಹೊಸ ವರ್ಷ ಆಚರಣೆ ಸಮಯದಲ್ಲಿ ಓಯೋ ರೂಂ ಬಗ್ಗೆ ಜನರಲ್ಲಿ ಆಸಕ್ತಿ ಕೂಡ ಹೆಚ್ಚಾಗಿಯೇ ಇರುತ್ತದೆ. ಹೀಗಿದ್ದಾಗ, 10 ಲಕ್ಷ ಜನರಿಂದ ಓಯೋ ರೂಂ ಬುಕಿಂಗ್ ಆಗಿದೆಯಂತೆ. ಅದು ಒಂದೇ ದಿನದಲ್ಲಿ 10 ಲಕ್ಷ ಜನರಿಂದ ಓಯೋ ರೂಂ ಬುಕ್ ಆಗಿದ್ದು, ಕಂಪ್ಲೀಟ್ ಕಹಾನಿ ಇಲ್ಲಿದೆ!
ಹೌದು, ಹ್ಯಾಪಿ ನ್ಯೂ ಇಯರ್.. ಹ್ಯಾಪಿ ನ್ಯೂ ಇಯರ್... ಅಂತಾ ಶುಭಾಶಯ ಹೇಳ್ತಿದ್ದಾರೆ ಜನ. 2024 ಮುಗಿದು 2025 ಶುರುವಾಗಿದ್ದು, ಹೊಸ ವರ್ಷವು ಆರಂಭವಾಗಿದೆ. ಹೀಗಾಗಿ ಜನ ಕೂಡ ವಿಶ್ ಮಾಡಿ ಶುಭಾಶಯ ಕೋರುತ್ತಿದ್ದಾರೆ. ಹೊಸ ವರ್ಷದಲ್ಲಿ ಕೆಲವರು ಎಣ್ಣೆ ಬಿಡುವ ನಿರ್ಧಾರ ಮಾಡಿದ್ದರೆ, ಇನ್ನೂ ಕೆಲವರು ಹೊಸ ವರ್ಷದಿಂದಲೇ ಎಣ್ಣೆ ಹೊಡೆಯಲು ಶುರುನ ಮಾಡಿದ್ದಾರೆ. ಹೀಗಿದ್ದಾಗ ಕೆಲವರು ಸೇಫ್ಟಿಗಾಗಿ ಓಯೋ ರೂಂ ಬುಕ್ ಮಾಡಿ ಈಗ ಸದ್ದು ಮಾಡ್ತಾ ಇದ್ದಾರೆ!

10 ಲಕ್ಷ ಜನರಿಂದ ಓಯೋ ರೂಮ್ಸ್ ಬುಕ್!
ಅಂದಹಾಗೆ, ಓಯೋ ಕಾನ್ಸೆಪ್ಟ್ ಶುರುವಾದ ನಂತರ ಅದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ ಯುವ ಸಮುದಾಯಕ್ಕೆ ಓಯೋ ಫೇವರಿಟ್ ಆಗಿದೆ ಎಂಬ ಮಾತು & ತಮಾಷೆ ಮಾತುಗಳು ಟ್ರೋಲ್ ಆಗುತ್ತಿವೆ. ಹೀಗಿದ್ದಾಗಲೇ 2025ರ ಹೊಸ ವರ್ಷಾಚರಣೆಗೆ ಅಂತಾನೇ ಸುಮಾರು 10 ಲಕ್ಷ ಜನರು ಓಯೋ ರೂಮ್ಸ್ ಬುಕ್ ಮಾಡಿದ್ದರಂತೆ. ಈ ಕುರಿತು ಮಾಹಿತಿ ಹೊರ ಬಿದ್ದಿದ್ದು, ಸ್ವತಃ ಓಯೋ ಸಂಸ್ಥೆ ಹಲವು ಪ್ರಮುಖ ವಿಚಾರಗಳನ್ನ ಇದೀಗ ಶೇರ್ ಮಾಡಿಕೊಂಡಿದೆ.
ಪ್ರತಿ ನಿಮಿಷಕ್ಕೆ 768 ಜನರಿಂದ...
ಭಾರತದಲ್ಲಿ ಮಾತ್ರವಲ್ಲ, ಓಯೋ ರೂಮ್ಸ್ ಇದೀಗ ಜಗತ್ತಿನ ವಿವಿಧ ಜಾಗದಲ್ಲಿ ಕೂಡ ತನ್ನ ಕಾರ್ಯಾಚರಣೆ ಆರಂಭ ಮಾಡಿದೆ. ಹೀಗಿದ್ದಾಗ ಸಿಕ್ಕಾಪಟ್ಟೆ ಡಿಮ್ಯಾಂಡ್ ಕೂಡ ಕ್ರಿಯೇಟ್ ಆಗಿದ್ದು, ಓಯೋ ರೂಮ್ಸ್ ಸಿಕ್ಕಾಪಟ್ಟೆ ಬುಕಿಂಗ್ ಆಗುತ್ತಿದೆ.
ಅದರಲ್ಲೂ ಭಾರತದಲ್ಲಿ ಹೊಸ ವರ್ಷಾಚರಣೆ ಸಮಯದಲ್ಲಿ ಒಂದೇ ದಿನ ಸುಮಾರು 11 ಲಕ್ಷ ಯುವಕ & ಯುವತಿಯರು ಓಯೋ ರೂಮ್ಸ್ ಬುಕಿಂಗ್ ಮಾಡಿದ್ದಾರಂತೆ! ಈ ಮೂಲಕ ಪ್ರತಿ ನಿಮಿಷಕ್ಕೆ 768 ಜನ ಓಯೋ ರೂಮ್ಸ್ ಬುಕ್ ಮಾಡಿದ್ದಾರೆ ಎಂದು ಮಾಹಿತಿ ನೀಡಲಾಗಿದೆ.
ಒಟ್ನಲ್ಲಿ ಓಯೋ ರೂಮ್ಸ್ ಸಂಸ್ಥೆ ತನ್ನ ಜನಪ್ರಿಯತೆ ಮತ್ತಷ್ಟು ಹೆಚ್ಚು ಮಾಡಿಕೊಳ್ಳುತ್ತಿದೆ. ಅಲ್ಲದೆ ಓಯೋ ರೂಮ್ಸ್ ಬೇಡಿಕೆ ಇನ್ನಷ್ಟು ಹೆಚ್ಚಾಗುತ್ತಿದ್ದು, ಹೊರ ದೇಶಗಳಲ್ಲಿ ಕೂಡ ಈ ಸಂಸ್ಥೆ ಹೊಸ ಕಮಾಲ್ ಮಾಡುತ್ತಿದೆ. ಹಾಗೇ ಕಡಿಮೆ ವೆಚ್ಚಕ್ಕೆ ಉತ್ತಮ ರೂಂಗಳ ಸೌಲಭ್ಯ ಸಿಗುತ್ತಿರುವುದು ಗ್ರಾಹಕರನ್ನು ಸೆಳೆಯುತ್ತಿದೆ.












Click it and Unblock the Notifications