ಕರ್ನಾಟಕದಿಂದ ಕಾಂಗ್ರೆಸ್ ಕಿತ್ತೆಸೆಯೋಣ: ಬಿ.ಎನ್. ವಿಜಯಕುಮಾರ್

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 10: ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಬೆಂಗಳೂರು ಸಮಸ್ಯೆಯ ಬೀಡಾಗಿದೆ. ಡ್ರಗ್ಸ್ ಮಾಫಿಯಾ ಹೆಚ್ಚಿದೆ, ಇರಾನಿಗಳು, ಸೌತ್ ಆಫ್ರಿಕಾದದಿಂದ ಬಂದಿರುವವರು ಡ್ರಗ್ ಮಾಫಿಯಾ ನಡೆಸುತ್ತಿದ್ದಾರೆ. ನಿಮ್ಮ ಮಕ್ಕಳು ತಿನ್ನೋ ಸೌತೆಕಾಯಿ, ಪಾನಿ ಪುರಿ ಎಲ್ಲದರಲ್ಲೂ ಡ್ರಗ್ಸ್ ಇರುತ್ತೆ ಎಂದು ಬಿಜೆಪಿ ಮುಖಂಡ, ಜಯನಗರ ಶಾಸಕ ಬಿ.ಎನ್.ವಿಜಯಕುಮಾರ್ ಹೇಳಿದರು.

ಬೆಂಗಳೂರು ರಕ್ಷಿಸಿ ಯಾತ್ರೆ: ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ

ರಾಜ್ಯ ಬಿಜೆಪಿ ನಡೆಸುತ್ತಿರುವ ಬೆಂಗಳೂರು ರಕ್ಷಿಸಿ ಯಾತ್ರೆ ಇಂದು(ಮಾ.10) ಎಂಟನೇ ದಿನಕ್ಕೆ ಕಾಲಿಟ್ಟಿದ್ದು, ಜಯನಗರದಲ್ಲಿ ಬಿಜೆಪಿ ನಾಯಕರು ಪಾದಯಾತ್ರೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ವಿಜಯಕುಮಾರ್, ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಕೆಲಸಗಳು ಆಗುತ್ತಿಲ್ಲ. ಕಸದ ಸಮಸ್ಯೆ ನಿವಾರಣೆ ಮಾಡೋದಕ್ಕೆ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಕೆ. ಆರ್ ಪುರಂ ಕ್ಷೇತ್ರದಲ್ಲಿ 118 ಕೊಲೆಗಾಳಾಗಿವೆ. ಇಷ್ಟೆಲ್ಲ ಅಪರಾಧ ಪ್ರಕರಣಗಳು ನಡೆಯುತ್ತಿದ್ದರೂ ರಾಜ್ಯ ಸರ್ಕಾರಕ್ಕೆ ಇವನ್ನೆಲ್ಲ ನಿಯಂತ್ರಣಕ್ಕೆ ತರುವುದಕ್ಕೆ ಸಾಧ್ಯವಾಗುತ್ತಿಲ್ಲ. ಕಾನೂನು ಸುವ್ಯವಸ್ಥೆಯ ಬಗ್ಗೆ ಚಿಂತಿಸುತ್ತಿಲ್ಲ ಎಂದು ಅವರು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು. ಬೆಂಗಳೂರು ಉಳಿಯಬೇಕು ಅಂದ್ರೆ ಮೊದಲು ಈ ಸರ್ಕಾರವನ್ನು ಕಿತ್ತೆಸೆಯಿರಿ. ರಾಜ್ಯವನ್ನು ಕಾಂಗ್ರೆಸ್ ಮುಕ್ತಮಾಡೋಣ ಎಂದು ಅವರು ಕರೆನೀಡಿದರು.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

Our aim is to kickout congress from Karnataka: BN Vijayakumar

ಇದೇ ಸಂದರ್ಭದಲ್ಲಿ ಮಾತನಾಡಿದ ಮಾಜಿ ಉಪಮುಖ್ಯಮಂತ್ರಿ ಆರ್ ಅಶೋಕ್, ಸಿಎಂ ಸಿದ್ದರಾಮಯ್ಯ ಅವರಿಗೆ ಬೆಂಗಳೂರು ಬೇಕಿರೋದು ಎಟಿಎಂ ಗಾಗಿ. ಅವರು ಸೋತ್ರೆ ಸಿದ್ದರಾಮನ ಹುಂಡಿಗೆ ಹೋಗ್ತಾರೆ. ಆದ್ರೆ ನಾವು ಗೆದ್ದರೂ ಇಲ್ಲೆ, ಸೋತರೂ ಇಲ್ಲೆ! ಬೆಂಗಳೂರನ್ನು ಇಂಥವರಿಂದ ರಕ್ಷಿಸಬೇಕಿದೆ ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka assembly elections 2018: "Our aim is to kickout congress from Karnataka" BJP MLA of Jayanagara constituency of Bengaluru, BN Vijayakumar said in BJP's Bengaluru Rakshisi(save Bengaluru) Rally on March 10.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ