Organ Donation: ಮಿಥ್ಸ್‌ vs ಫ್ಯಾಕ್ಟ್ಸ್: ಅಂಗಾಂಗ ದಾನದ ಬಗ್ಗೆ ಭಾರತೀಯರು ತಿಳಿದುಕೊಳ್ಳಬೇಕಾದ ಸತ್ಯಗಳು

ಅಂಗದಾನವು ಮನುಷ್ಯನು ಮರಣಾನಂತರವೂ ಮತ್ತೊಬ್ಬರಿಗೆ ಹೊಸ ಬದುಕನ್ನು ನೀಡಬಲ್ಲ ಅತ್ಯುನ್ನತ ಮಾನವೀಯ ಕಾರ್ಯವಾಗಿದೆ. ಆದರೂ ನಮ್ಮ ದೇಶದಲ್ಲಿ ಅಂಗದಾನದ ಬಗ್ಗೆ ಇರುವ ತಪ್ಪು ಕಲ್ಪನೆಗಳು, ಮೂಢನಂಬಿಕೆಗಳು ಮತ್ತು ಸರಿಯಾದ ಮಾಹಿತಿಯ ಕೊರತೆಯಿಂದ ಅನೇಕರು ಅಂಗದಾನಕ್ಕೆ ಮುಂದೆ ಬರುತ್ತಿಲ್ಲ. ಇದರ ಪರಿಣಾಮವಾಗಿ ಜೀವ ಉಳಿಸಿಕೊಳ್ಳಲು ಕಾಯುತ್ತಿರುವ ಸಾವಿರಾರು ರೋಗಿಗಳಿಗೆ ಸಮಯಕ್ಕೆ ಸರಿಯಾಗಿ ಅಂಗಗಳು ದೊರೆಯುವುದಿಲ್ಲ. ಆದ್ದರಿಂದ ಅಂಗದಾನದ ಬಗ್ಗೆ ಇರುವ ಅಪನಂಬಿಕೆಗಳನ್ನು ದೂರ ಮಾಡಿ, ವೈಜ್ಞಾನಿಕ ಸತ್ಯಗಳನ್ನು ತಿಳಿದುಕೊಳ್ಳುವುದು ಅತ್ಯಗತ್ಯ. ಈ ಬಗ್ಗೆ ಡಾ. ಕೃಷ್ಣಮೂರ್ತಿ ಎನ್ ಅವರು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಡಾ. ಕೃಷ್ಣಮೂರ್ತಿ ಎನ್ ಬರಹ ಇಲ್ಲಿದೆ.

ತಪ್ಪು ಕಲ್ಪನೆ: ಅಂಗದಾನ ಮಾಡಿದರೆ ಮುಂದಿನ ಜನ್ಮದಲ್ಲಿ ದೇಹದ ಅಂಗಗಳು ಇರುವುದಿಲ್ಲ.
ಸತ್ಯ: ಇದು ಸಂಪೂರ್ಣವಾಗಿ ಮೂಢನಂಬಿಕೆಯಾಗಿದೆ. ಯಾವುದೇ ವೈಜ್ಞಾನಿಕ ಅಥವಾ ಧಾರ್ಮಿಕ ಆಧಾರ ಇದಕ್ಕೆ ಇಲ್ಲ. ಬಹುತೇಕ ಎಲ್ಲಾ ಧರ್ಮಗಳು ಮತ್ತೊಬ್ಬರ ಜೀವ ಉಳಿಸುವ ಕಾರ್ಯವನ್ನು ಶ್ರೇಷ್ಠ ದಾನವೆಂದು ಪರಿಗಣಿಸುತ್ತವೆ.

Organ Donation

ತಪ್ಪು ಕಲ್ಪನೆ: ಅಂಗದಾನ ಮಾಡಿದರೆ ಆತ್ಮಕ್ಕೆ ಶಾಂತಿ ಸಿಗುವುದಿಲ್ಲ ಅಥವಾ ಅಂತ್ಯಕ್ರಿಯೆಗಳು ಪೂರ್ಣವಾಗುವುದಿಲ್ಲ .
ಸತ್ಯ: ಅಂಗದಾನವು ಅಂತ್ಯಕ್ರಿಯೆಗಳಿಗೆ ಯಾವುದೇ ಅಡ್ಡಿಯಾಗುವುದಿಲ್ಲ. ಕುಟುಂಬದವರು ಎಲ್ಲಾ ಧಾರ್ಮಿಕ ವಿಧಿವಿಧಾನಗಳನ್ನು ಎಂದಿನಂತೆ ನೆರವೇರಿಸಬಹುದು.

ತಪ್ಪು ಕಲ್ಪನೆ: ವೈದ್ಯರು ಅಂಗದಾನಕ್ಕಾಗಿ ರೋಗಿಯ ಜೀವ ಉಳಿಸಲು ಪ್ರಯತ್ನಿಸುವುದಿಲ್ಲ.
ಸತ್ಯ: ವೈದ್ಯರ ಮೊದಲ ಕರ್ತವ್ಯ ರೋಗಿಯ ಜೀವವನ್ನು ಉಳಿಸುವುದಾಗಿದೆ. ಎಲ್ಲಾ ಚಿಕಿತ್ಸಾ ಪ್ರಯತ್ನಗಳು ವಿಫಲವಾದ ನಂತರ ಮತ್ತು ಮಿದುಳಿನ ಮರಣವನ್ನು ಕಾನೂನುಬದ್ಧವಾಗಿ ದೃಢೀಕರಿಸಿದ ಬಳಿಕವೇ ಅಂಗದಾನದ ಪ್ರಕ್ರಿಯೆ ಆರಂಭವಾಗುತ್ತದೆ.

ತಪ್ಪು ಕಲ್ಪನೆ: ವಯಸ್ಸಾದವರು ಅಥವಾ ಕೆಲವು ಕಾಯಿಲೆಗಳಿರುವವರು ಅಂಗದಾನ ಮಾಡಲು ಸಾಧ್ಯವಿಲ್ಲ.
ಸತ್ಯ: ಅಂಗದಾನದ ಅರ್ಹತೆಯನ್ನು ವೈದ್ಯರು ಮರಣದ ನಂತರ ವೈದ್ಯಕೀಯ ಪರೀಕ್ಷೆಗಳ ಆಧಾರದ ಮೇಲೆ ನಿರ್ಧರಿಸುತ್ತಾರೆ. ವಯಸ್ಸು ಮಾತ್ರ ನಿರ್ಧಾರಕವಾಗುವುದಿಲ್ಲ.

ತಪ್ಪು ಕಲ್ಪನೆ: ಅಂಗದಾನ ಮಾಡಿದರೆ ಮೃತದೇಹ ವಿರೂಪಗೊಳ್ಳುತ್ತದೆ.
ಸತ್ಯ: ಅಂಗಗಳನ್ನು ಅತ್ಯಂತ ಗೌರವದಿಂದ ಮತ್ತು ವೈಜ್ಞಾನಿಕ ವಿಧಾನದಲ್ಲಿ ತೆಗೆದುಕೊಳ್ಳಲಾಗುತ್ತದೆ. ನಂತರ ಕುಟುಂಬದವರು ಮೃತದೇಹದ ಅಂತಿಮ ದರ್ಶನ ಹಾಗೂ ಅಂತ್ಯಕ್ರಿಯೆಗಳನ್ನು ಯಾವುದೇ ತೊಂದರೆಯಿಲ್ಲದೆ ನೆರವೇರಿಸಬಹುದು.

ತಪ್ಪು ಕಲ್ಪನೆ: ಅಂಗದಾನವು ಶ್ರೀಮಂತರಿಗೆ ಮಾತ್ರ ಪ್ರಯೋಜನವಾಗುತ್ತದೆ.
ಸತ್ಯ: ಅಂಗಗಳ ಹಂಚಿಕೆ ವೈದ್ಯಕೀಯ ತುರ್ತು ಅಗತ್ಯ, ಹೊಂದಾಣಿಕೆ ಮತ್ತು ಕಾನೂನುಬದ್ಧ ನಿಯಮಗಳ ಆಧಾರದ ಮೇಲೆ ನಡೆಯುತ್ತದೆ; ಆರ್ಥಿಕ ಸ್ಥಿತಿಯ ಆಧಾರದ ಮೇಲೆ ಅಲ್ಲ.

ಅಂಗದಾನದ ಬಗ್ಗೆ ಶಾಲೆಗಳು, ಕಾಲೇಜುಗಳು ಹಾಗೂ ಸಮಾಜದಲ್ಲಿ ನಿರಂತರ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುವುದು ಇಂದಿನ ಅಗತ್ಯವಾಗಿದೆ. ಸಮಾಜದಲ್ಲಿ ಹರಡಿರುವ ಮೂಢನಂಬಿಕೆಗಳನ್ನು ಬದಿಗೊತ್ತಿ, ವೈಜ್ಞಾನಿಕ ಸತ್ಯಗಳನ್ನು ಅಳವಡಿಸಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಕುಟುಂಬದವರೊಂದಿಗೆ ಅಂಗದಾನದ ಕುರಿತು ಮುಂಚಿತವಾಗಿ ಚರ್ಚಿಸಿ, ಜಾಗೃತಿ ಮೂಡಿಸುವ ಮೂಲಕ ಅನೇಕ ಜೀವಗಳಿಗೆ ಹೊಸ ಆಶಾಕಿರಣವಾಗಬಹುದು. ಅಂಗದಾನವು ಮರಣದ ಅಂತ್ಯವಲ್ಲ; ಅದು ಮತ್ತೊಬ್ಬರ ಬದುಕಿನ ಹೊಸ ಆರಂಭವಾಗಿದೆ.

ಬರಹಗಾರರ ವಿವರ

ಡಾ. ಕೃಷ್ಣಮೂರ್ತಿ ಎನ್, ಪ್ರಾಧ್ಯಾಪಕರು ಮತ್ತು ವಿಭಾಗ ಮುಖ್ಯಸ್ಥರು
ರಚನಾ ಶರೀರ ವಿಭಾಗ (ಎಸ್. ಡಿ. ಎಂ. ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ವಿಭಾಗ, ಕುತ್ಪಾಡಿ ಉಡುಪಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+