ಒನ್ ಇಂಡಿಯಾ ಸಮೀಕ್ಷೆ : ಸಿದ್ದರಾಮಯ್ಯ ಸರ್ಕಾರಕ್ಕೆ ಜನರು ಕೊಟ್ಟ ಅಂಕವೆಷ್ಟು?

ಬೆಂಗಳೂರು, ಮಾರ್ಚ್ 16 : ಮುಖ್ಯಮಂತ್ರಿ ಸಿದ್ದರಾಮಯ್ಯ ಐದು ವರ್ಷಗಳ ಆಡಳಿತವನ್ನು ಕೆಲವೇ ದಿನಗಳಲ್ಲಿ ಪೂರ್ಣಗೊಳಿಸಲಿದ್ದಾರೆ. ಚುಣಾವಣೆ ಎದುರಾಗಿದ್ದು, 2018ರ ಚುನಾವಣೆಯಲ್ಲಿ ಯಾರಿಗೆ ಗೆಲುವು ಎಂಬ ಲೆಕ್ಕಾಚಾರ ನಡೆಯುತ್ತಿದೆ.

2013ರ ಮೇ 13ರಂದು ಸಿದ್ದರಾಮಯ್ಯ ಅವರು ರಾಜ್ಯದ 28ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಹಲವು ಭಾಗ್ಯಗಳನ್ನು ಕೊಡುವ ಮೂಲಕ ಐದು ವರ್ಷಗಳ ಕಾಲ ಆಡಳಿತ ನಡೆಸಿದ್ದಾರೆ. ಮುಂದಿನ ಬಾರಿಯೂ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬ ನಿರೀಕ್ಷೆಯಲ್ಲಿ ಕಾಂಗ್ರೆಸ್ ಪಕ್ಷವಿದೆ.

ಕರ್ನಾಟಕವನ್ನು ಸುಧೀರ್ಘ ಕಾಲ ಆಳಿದ ನಾಲ್ಕನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹೊಸ ಸಾಧನೆ ಮಾಡಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿಯಾಗಿ ಐದು ವರ್ಷ ಪೂರೈಸಿದ ಖ್ಯಾತಿ ಎಸ್.ನಿಜಲಿಂಗಪ್ಪ, ದೇವರಾಜು ಅರಸು ಅವರಿಗೆ ಇದೆ. ಸಿದ್ದರಾಮಯ್ಯ ಈ ದಾಖಲೆಯನ್ನು ಕೆಲವೇ ದಿನಗಳಲ್ಲಿ ಮುರಿಯಲಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಹಾಗಾದರೆ ಸಿದ್ದರಾಮಯ್ಯ ಅವರ ಐದು ವರ್ಷಗಳ ಸರ್ಕಾರಕ್ಕೆ ಜನರು ಕೊಡುವ ಅಂಕವೆಷ್ಟು?. ಒನ್ ಇಂಡಿಯಾ ಕನ್ನಡ ಜನರ ಮುಂದೆ ಈ ಪ್ರಶ್ನೆ ಇಟ್ಟಿತ್ತು. ಸಾವಿರಾರು ಜನರು ಸಿದ್ದರಾಮಯ್ಯ ಸರ್ಕಾರಕ್ಕೆ ಅಂಕ ನೀಡಿದ್ದಾರೆ, ಕೆಲವರು ಕಮೆಂಟ್ ಮಾಡಿದ್ದಾರೆ. ಅದರ ವಿವರ ಚಿತ್ರಗಳಲ್ಲಿ ಇದೆ...

ಓದುಗರಿಗೆ ಅಭಿನಂದನೆಗಳು

ಓದುಗರಿಗೆ ಅಭಿನಂದನೆಗಳು

ಸಿದ್ದರಾಮಯ್ಯ ಸರ್ಕಾರಕ್ಕೆ ನೀವು ಕೊಡುವ ಅಂಕವೆಷ್ಟು? ಎಂದು ಜನರನ್ನು ಪ್ರಶ್ನಿಸಲಾಗಿತ್ತು.

* ಉತ್ತಮ ಆಡಳಿತ 5 ಅಂಕ
* ಸಮಾಧಾನಕರ ಆಡಳಿತ 3ಅಂಕ
* ಆಡಳಿತ ತೃಪ್ತಿ ತಂದಿಲ್ಲ 1 ಅಂಕಗಳನ್ನು ನೀಡಲಾಗಿತ್ತು

ಒನ್ ಇಂಡಿಯಾ ಕನ್ನಡಸ ಫೇಸ್‌ಬುಕ್ ಪುಟದಲ್ಲಿ ಈ ಪ್ರಶ್ನೆಗೆ 2.3 ಸಾವಿರ ಓದುಗರು ಕಮೆಂಟ್ ಮಾಡಿದ್ದಾರೆ. ಈ ಪೋಸ್ಟ್‌ ಅನ್ನು 142 ಜನರು ಶೇರ್ ಮಾಡಿದ್ದು, 863 ಜನರು ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಎಲ್ಲಾ ಓದುಗರಿಗೆ ಅಭಿನಂದನೆಗಳು.

ಸಮಾಧಾನಕರ ಆಡಳಿತ

ಸಮಾಧಾನಕರ ಆಡಳಿತ

ಐದು ವರ್ಷಗಳ ಆಡಳಿತ ನಡೆಸಿದ ಸಿದ್ದರಾಮಯ್ಯ ಅವರಿಗೆ ಅಭಿನಂದನೆಗಳು. ನಾ ಕಂಡ ಸರ್ಕಾರಗಳಲ್ಲಿ ಸಿದ್ದರಾಮಯ್ಯ ಅವರ ಸರ್ಕಾರ ಸಮಾಧಾನಕರ ಆಡಳಿತವನ್ನು ನಡೆಸಿದೆ.

ಮುಖ್ಯಮಂತ್ರಿಗಳು ಜೈಲಿನಲ್ಲಿ ಇರುತ್ತಿದ್ದರು

ಮುಖ್ಯಮಂತ್ರಿಗಳು ಜೈಲಿನಲ್ಲಿ ಇರುತ್ತಿದ್ದರು

ರಾಜ್ಯದಲ್ಲಿ ಲೋಕಾಯುಕ್ತ ಇದ್ದಿದ್ದರೆ ಕಾಂಗ್ರೆಸ್‌ನ ಎಂಪಿ, ಎಂಎಲ್‌ಎ ಜೊತೆ ಸಿಎಂ ಸಹ ಜೈಲಿನಲ್ಲಿ ಇರುತ್ತಿದ್ದರು ಎಂದು ಓದುಗರು ಕಮೆಂಟ್ ಮಾಡಿದ್ದಾರೆ.

ಉತ್ತಮ ಆಡಳಿತವನ್ನು ಕೊಟ್ಟಿರಿ

ಉತ್ತಮವಾದ ಆಡಳಿತವನ್ನು ಕೊಟ್ಟಿದ್ದಕ್ಕೆ ನಿಮಗೆ 5 ಅಂಕಗಳು

ವಿವಿಧ ಅಂಕಗಳನ್ನು ನೀಡಿದ ಓದುಗರು

ವಿವಿಧ ಅಂಕಗಳನ್ನು ನೀಡಿದ ಓದುಗರು

ವಿವಿಧ ಓದುಗರು 5, 1, 2 ಅಂಕಗಳನ್ನು ಸಿದ್ದರಾಮಯ್ಯ ಸರ್ಕಾರಕ್ಕೆ ನೀಡಿದ್ದಾರೆ. ಕೆಲವು ಓದುಗರು ಸರ್ಕಾರದ ಬಗ್ಗೆ ಕಮೆಂಟ್ ಮಾಡಿದ್ದಾರೆ.

ಇತಿಹಾಸದಲ್ಲಿಯೇ ಉತ್ತಮ ಸರ್ಕಾರ

ಸರ್ಕಾರ ಹಲವು ಭಾಗ್ಯಗಳನ್ನು ನೀಡಿದೆ. ರೈತರ ಸಾಲವನ್ನು ಮನ್ನಾ ಮಾಡಿದೆ. ರಾಜ್ಯದ ಇತಿಹಾಸದಲ್ಲಿಯೇ ಉತ್ತಮವಾದ ಸರ್ಕಾರವಿದು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+