NWKRTC: ಶಿರಡಿ ಸಾಯಿಬಾಬಾ ಭಕ್ತರಿಗೆ ಗುಡ್‌ನ್ಯೂಸ್; ಹುಬ್ಬಳ್ಳಿಯಿಂದ ಪ್ರತಿದಿನ AC ಸ್ಲೀಪರ್ ಬಸ್ ಕಾರ್ಯಾಚರಣೆ

ಹುಬ್ಬಳ್ಳಿ: ಉತ್ತರ ಕರ್ನಾಟಕದಿಂದ ಮಹಾರಾಷ್ಟ್ರದ ಶಿರಡಿಗೆ ತೆರಳುವವರಿಗೆ ವಾಯುವ್ಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (NWKRTC) ಗುಡ್ ನ್ಯೂಸ್ ನೀಡಿದೆ. ಶ್ರೀ ಸಾಯಿಬಾಬಾ ದರ್ಶನಕ್ಕೆ ಹೋಗಿ ಬರುವ ಭಕ್ತಾಧಿಗಳು ಹಾಗೂ ಇತರೆ ಪ್ರಯಾಣಿಕರ ಅನುಕೂಲಕ್ಕಾಗಿ ಬೇಡಿಕೆಯ ಮೇರೆಗೆ ಹುಬ್ಬಳ್ಳಿಯಿಂದ ಶಿರಡಿವರೆಗೆ ನೇರ ಮತ್ತು ಆರಾಮದಾಯಕ ಅನುಭವ ನೀಡುವ ಎಸಿ ಸ್ಲೀಪರ್ ಬಸ್ ಸೇವೆ ಆರಂಭವಾಗಿದೆ.

ಹೌದು, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ವತಿಯಿಂದ ಹುಬ್ಬಳ್ಳಿ- ಶಿರಡಿ ನಡುವೆ ಪ್ರತಿದಿನ ರಾಜರಥ ಎಸಿ ಸ್ಲೀಪರ್ ಬಸ್ ಸಂಚಾರವನ್ನು ಆರಂಭಿಸಲಾಗಿದೆ. ದೇವಸ್ಥಾನಕ್ಕೆ ತೆರಳುವವರು ಮಾತ್ರವಲ್ಲದ ಇತರ ಉದ್ದೇಶಗಳಿಗೆ ತೆರಳುವ ಪ್ರಯಾಣಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.

NWKRTC

ಮಹಾರಾಷ್ಟ್ರ ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರ ಶ್ರಿ ಸಾಯಿಬಾಬಾ ದರ್ಶನಕ್ಕಾಗಿ ಭಕ್ತಾದಿಗಳು, ವಾಣಿಜ್ಯ, ಉದ್ಯೋಗ, ವಿದ್ಯಾಭ್ಯಾಸ, ಪ್ರವಾಸ ಮತ್ತಿತರ ಕೆಲಸ ಕಾರ್ಯಗಳಿಗಾಗಿ ನೆರೆಯ ಮಹಾರಾಷ್ಟ್ರ ರಾಜ್ಯದ ಪ್ರಮುಖ ಸ್ಥಳಗಳಾದ ಪುಣೆ, ಪಿಂಪ್ರಿ, ಅಹ್ಮದನಗರ, ಶಿರಡಿ, ನಾಸಿಕ್, ಔರಂಗಾಬಾದ್ ಕಡೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪ್ರಯಾಣ ಮಾಡುತ್ತಾರೆ.

ಎರಡು ದಿಕ್ಕಿನಲ್ಲಿ ಸಂಚಾರ ಸೇವೆ

ಈ ವರ್ಗದ ಪ್ರಯಾಣಿಕರ ಅನುಕೂಲಕ್ಕಾಗಿ ಸಾರ್ವಜನಿಕರ ಬೇಡಿಕೆಯ ಮೇರೆಗೆ ಧಾರವಾಡ, ಬೆಳಗಾವಿ, ಕೊಲ್ಹಾಪುರ, ಪುಣೆ, ಪಿಂಪ್ರಿ, ಅಹ್ಮದ ನಗರ ಮಾರ್ಗವಾಗಿ ಹುಬ್ಬಳ್ಳಿ ಹಾಗೂ ಶಿರಡಿ ನಡುವೆ ಎರಡು ನೂತನ ರಾಜರಥ ಎಸಿ ಸ್ಲೀಪರ್ ಬಸ್ ಗಳ ಸಂಚಾರವನ್ನು ಆರಂಭಿಸಲಾಗಿದೆ. ಪ್ರತಿದಿನ ರಾತ್ರಿ ಒಂದು ಬಸ್ಸು ಹುಬ್ಬಳ್ಳಿಯಿಂದ ಶಿರಡಿಗೆ ಹಾಗೂ ಇನ್ನೊಂದು ಬಸ್ಸು ಶಿರಡಿಯಿಂದ ಹುಬ್ಬಳ್ಳಿಗೆ ಎರಡು ದಿಕ್ಕಿನಲ್ಲಿ ಬಸ್‌ಗಳ ಸೇವೆ ಲಭ್ಯವಿದೆ ಎಂದರು.

ಶಿರಡಿ ಬಸ್ ವೇಳಾಪಟ್ಟಿ ಇಲ್ಲಿದೆ

ಹುಬ್ಬಳ್ಳಿಯಿಂದ ಶಿರಡಿಗೆ ಹೋಗುವ ಬಸ್ಸು ಗೋಕುಲ ರಸ್ತೆ ಕೇಂದ್ರ ಬಸ್ ನಿಲ್ದಾಣದಿಂದ ಪ್ರತಿದಿನ ರಾತ್ರಿ 8 ಗಂಟೆಗೆ ಹೊರಡುತ್ತದೆ. ಹೊಸೂರು ಬಸ್ ನಿಲ್ದಾಣದಿಂದ 8:15ಕ್ಕೆ, ಧಾರವಾಡ ಹೊಸ ಬಸ್ ನಿಲ್ದಾಣದಿಂದ 9ಕ್ಕೆ ಹಾಗೂ ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಿಂದ 10:15ಗಂಟೆಗೆ ಸಂಚಾರ ಆರಂಭಿಸುತ್ತದೆ. ಮಾರನೇ ದಿನ ಬೆಳಗ್ಗೆ ಪುಣೆ ಸ್ವಾರ ಗೇಟ್ ಬಸ್ ನಿಲ್ದಾಣವನ್ನು ಬೆಳಗ್ಗೆ 5 ಗಂಟೆಗೆ ತಲುಪುತ್ತದೆ. ಅಹ್ಮದ ನಗರಕ್ಕೆ 8:00 ಹಾಗೂ ಶಿರಡಿಗೆ ಬೆಳಗ್ಗೆ 9:30ಕ್ಕೆ ತಲುಪುತ್ತದೆ ಎಂದು ಅವರು ವಿವರಿಸಿದರು.

ಶಿರಡಿ-ಹುಬ್ಬಳ್ಳಿ ಬಸ್ ವಿವರ

ಶಿರಡಿಯಿಂದ ಹುಬ್ಬಳ್ಳಿಗೆ ಬರುವ ಬಸ್‌ ಶಿರಡಿ ಬಸ್ ನಿಲ್ದಾಣದಿಂದ ಸಂಜೆ 6:35ಕ್ಕೆ ಹೊರಡುತ್ತದೆ. ಅಹ್ಮದನಗರದ ತಾರಕಪುರ ಬಸ್ ನಿಲ್ದಾಣದಿಂದ 8:35ಕ್ಕೆ, ಪುಣೆ ಸ್ವಾರಗೇಟ್ ಬಸ್ ನಿಲ್ದಾಣದಿಂದ ರಾತ್ರಿ 11:20ಕ್ಕೆ ಪ್ರಯಾಣ ಬಳೆಸುತ್ತದೆ. ಮರುದಿನ ಬೆಳಿಗ್ಗೆ ಬೆಳಗಾವಿಗೆ 5:05 ತಲುಪಿದರೆ, ಧಾರವಾಡಕ್ಕೆ 6:20ಕ್ಕೆ ಹಾಗೂ ಹುಬ್ಬಳ್ಳಿಗೆ ಬೆಳಗ್ಗೆ 7 ಗಂಟೆಗೆ ಆಗಮಿಸುತ್ತದೆ.

ಒಬ್ಬರಿಗೆ ಟಿಕೆಟ್ ದರ ಎಷ್ಟು?

ಪ್ರಯಾಣ ದರ ಅಪಘಾತ ಪರಿಹಾರ ವಿಮೆ, ಟೋಲ್ ಫೀ ಇತ್ಯಾದಿ ಸೇರಿದಂತೆ ಒಟ್ಟು ಪ್ರಯಾಣ ದರ ಹುಬ್ಬಳ್ಳಿಯಿಂದ ಪುಣೆಗೆ ರೂ.1,223 ಹಾಗೂ ಹುಬ್ಬಳ್ಳಿಯಿಂದ ಶಿರಡಿಗೆ ರೂ.1,822 ನಿಗದಿಪಡಿಸಲಾಗಿದೆ.

ಮುಂಗಡ ಬುಕ್ಕಿಂಗ್, 10% ರಿಯಾಯಿತಿ

ಹುಬ್ಬಳ್ಳೀ-ಶಿರಡಿ-ಹುಬ್ಬಳ್ಳಿ ಮಾರ್ಗದಲ್ಲಿ ತೆರಳುವ ಪ್ರಯಾಣಿಕರು ಸಾರ್ವಜನಿಕರು www.ksrtc.in ವೆಬ್ ಸೈಟ್, KSRTC Mobile App, ವಾಟ್ಸಪ್ ಸಂಖ್ಯೆ: 63649 40880, ಹೊಸೂರು ಬಸ್ ನಿಲ್ದಾಣ, ಗೋಕುಲ ರಸ್ತೆ ಕೇಂದ್ರ ಬಸ್ ನಿಲ್ದಾಣ ಹಾಗೂ ಇತರೆ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಮುಂಗಡ ಟಿಕೆಟ್ ಬುಕ್ಕಿಂಗ್ ಮಾಡಬಹುದಾಗಿದೆ.

ಒಂದೆ ಬಾರಿಗೆ 4 ಅಥವಾ ಹೆಚ್ಚು ಸೀಟುಗಳನ್ನು ಕಾಯ್ದಿರಿಸಿದರೆ ಟೆಕೆಟ್ ಬೆಲೆಯಲ್ಲಿ ಶೆಕಡ 5ರಷ್ಟು ರಿಯಾಯಿತಿ ಸಿಗುತ್ತದೆ. ಒಂದು ವೇಳೆ ಒಂದೇ ಬಾರಿಗೆ ನೀಡುವ ಎರಡು ಬದಿ ಪ್ರಯಾಣದ ಟಿಕೆಟ್ ಬುಕ್ ಮಾಡಿದಲ್ಲಿ ಪ್ರಯಾಣ ದರದಲ್ಲಿ ಶೇಕಡ 10ರಷ್ಟು ರಿಯಾಯಿತಿ ನೀಡಲಾಗುತ್ತದೆ ಎಂದು ತಿಳಿಸಿದರು.

ಈ ನೂತನ ಬಸ್ಸುಗಳಿಂದ ಧಾರವಾಡ, ಬೆಳಗಾವಿ ಜಿಲ್ಲೆಗಳ ಸಾರ್ವಜನಿಕರು ಹಾಗೂ ಮಹಾರಾಷ್ಟ್ರ ರಾಜ್ಯದ ಪುಣೆ,ಶಿರಡಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೆಲೆಸಿರುವ ಕನ್ನಡಿಗರಿಗೆ, ಮತ್ತು ಇತರರಿಗೆ ಅನುಕೂಲವಾಗಲಿದೆ. ನೆರೆಯ ರಾಜ್ಯಗಳ ಇತರೆ ಪ್ರಮುಖ ಸ್ಥಳಗಳಿಗೆ ಹುಬ್ಬಳ್ಳಿಯಿಂದ ನೇರವಾಗಿ ಪ್ರತಿಷ್ಟಿತ ಬಸ್ಸುಗಳ ಸಂಚಾರ ಆರಂಭಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಅವರು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+