ಕರಾವಳಿ ಟೂರ್ ಪ್ಯಾಕೇಜ್; ದೇವಾಲಯಗಳಿಗೆ ಭೇಟಿ ಕೊಡಲು ದರ ಪಟ್ಟಿ
ಕಾರವಾರ, ನವೆಂಬರ್ 15; ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಉತ್ತರ ಕನ್ನಡ ವಿಭಾಗದ ಶಿರಸಿ ಘಟಕ ಕರಾವಳಿ ದೇವಾಲಯಗಳ ದರ್ಶನ ಎಂಬ ಪ್ಯಾಕೇಜ್ ಆರಂಭಿಸಿದೆ. ಆಸಕ್ತರು ಈ ಎರಡು ದಿನದ ಟೂರ್ ಪ್ಯಾಕೇಜ್ ಉಪಯೋಗ ಪಡೆಯಬೇಕು ಎಂದು ಕರೆ ನೀಡಲಾಗಿದೆ.
'ಕರಾವಳಿ ದೇವಸ್ಥಾನಗಳ ಮತ್ತು ಧರ್ಮಸ್ಥಳ ದರ್ಶನ' ಎಂದು ಈ ಟೂರ್ ಪ್ಯಾಕೇಜ್‌ಗೆ ಹೆಸರು ಇಡಲಾಗಿದೆ. ಪ್ರತಿ ಶನಿವಾರ, ಭಾನುವಾರ ಮತ್ತು ಸಾರ್ವತ್ರಿಕ ರಜಾ ದಿನಗಳಂದು ಬಸ್ ಕಾರ್ಯಾಚರಣೆ ಮಾಡಲಾಗುವುದು ಎಂದು ಸಂಸ್ಥೆ ಹೇಳಿದೆ.
ಕಾರವಾರ, ಕೊಲ್ಲೂರು, ಉಡುಪಿ, ಧರ್ಮಸ್ಥಳ, ಸುಬ್ರಮಣ್ಯ ಈ ಟೂರ್ ಪ್ಯಾಕೇಜ್‌ನಲ್ಲಿ ಸೇರಿವೆ. ವಯಸ್ಕರಿಗೆ ಪ್ರಯಾಣ ದರ 800 ರೂ., ಮಕ್ಕಳಿಗೆ (12 ವರ್ಷದೊಳಗಿನ) 600 ರೂ. ದರವನ್ನು ನಿಗದಿ ಮಾಡಲಾಗಿದೆ.

ಪ್ರೇಕ್ಷಣೀಯ ಸ್ಥಳಗಳನ್ನು ಸಂದರ್ಶಿಸುವ ಎರಡು ದಿನದ ವಿಶೇಷ ಪ್ಯಾಕೇಜ್ ಟೂರ್ ಇದಾಗಿದೆ. ಊಟ, ಉಪಹಾರ ವೆಚ್ಚ ಮತ್ತು ದೇವಾಲಯದ ಪ್ರವೇಶ ಶುಲ್ಕ, ಪೂಜಾ ಖರ್ಚನ್ನು ಹೊರತುಪಡಿಸಿ ಪ್ರಯಾಣ ದರವನ್ನು ಪಾವತಿಸಬೇಕಾಗುತ್ತದೆ.
ಕರಾವಳಿ ದೇವಾಲಯಗಳ ಮತ್ತು ಧರ್ಮಸ್ಥಳ ದರ್ಶನ ಪ್ಯಾಕೇಜ್‌ಗಾಗಿ ಜನರು ಆನ್‌ಲೈನ್ ಮೂಲಕವೂ ಬುಕ್ ಮಾಡಲು ವ್ಯವಸ್ಥೆ ಮಾಡಲಾಗಿದೆ. ಜನರು ಹತ್ತಿರದ ರಿಸರ್ವೇಶನ್ ಕೌಂಟರ್‌ಗೆ ಭೇಟಿ ನೀಡಿ ಸಹ ಪ್ಯಾಕೇಜ್ ಕುರಿತು ವಿಚಾರಣೆ ನಡೆಸಬಹುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶಿರಸಿ ಘಟಕದ 7760991625, ಕಾರವಾರ ಘಟಕದ 7760991627 ಸಂಖ್ಯೆಗೆ ಕರೆ ಮಾಡಬಹುದಾಗಿದೆ.
ಯಾವ-ಯಾವ ದೇವಾಲಯಗಳು; ಕಾರವಾರದಿಂದ 8 ಗಂಟೆಗೆ ಹೊರಡುವ ಬಸ್‌ಗೆ ಕಾರವಾರ ಬಸ್ ನಿಲ್ದಾಣ, ಅರಗಾ ನೌಕಾನೆಲೆ ಗೇಟ್, ಅಂಕೋಲಾ ಬಸ್ ನಿಲ್ದಾಣದಲ್ಲಿ ಪಿಕ್ ಅಪ್ ವ್ಯವಸ್ಥೆ ಮಾಡಲಾಗಿದೆ.
ಕೊಲ್ಲೂರು ತಲುಪುವ ಸಮಯ 12, ಹೊರಡುವ ಸಮಯ 13, ಸ್ಥಳ ವೀಕ್ಷಿಸಲು ನಿಗದಿಪಡಿಸಿದ ಅವಧಿ 1 ತಾಸು. ಶ್ರೀ ಮೂಕಾಂಬಿಕಾ ದೇವಾಲಯದ ದರ್ಶನ, ಊಟ.
ಉಡುಪಿ ತಲುಪುವ ಸಮಯ 15, ಹೊರಡುವ ಸಮಯ 16, ಸ್ಥಳ ವೀಕ್ಷಿಸಲು ನಿಗದಿಪಡಿಸಿದ ಅವಧಿ 1 ತಾಸು. ದೇವಾಲಯ ದರ್ಶನ.
ಧರ್ಮಸ್ಥಳ ತಲುಪುವ ಸಮಯ 19. ದೇವಾಲಯ ದರ್ಶನ & ಊಟ ವಸತಿ (ಪ್ರಯಾಣಿಕರ ಖರ್ಚಿನಲ್ಲಿ). ಧರ್ಮಸ್ಥಳ ಎರಡನೇ ದಿನ ಹೊರಡುವ ಸಮಯ 10.
ಸುಬ್ರಮಣ್ಯ ತಲುಪುವ ಸಮಯ 11.30. ಹೊರಡುವ ಸಮಯ 12.30. ಸ್ಥಳ ವೀಕ್ಷಿಸಲು ನಿಗದಿಪಡಿಸಿದ ಸಮಯ 1 ತಾಸು. ಸುಬ್ರಮಣ್ಯ ದೇವಾಸ್ಥಾನ ದರ್ಶನ & ಊಟ. ಕಾರವಾರ ಹೊರಡುವ ಸಮಯ 19.30.
ಕರಾವಳಿ ವಿಶೇಷ ಟೂರ್; ಕೆಲವು ದಿನಗಳ ಹಿಂದೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಉತ್ತರ ಕನ್ನಡ ಜಿಲ್ಲೆಯ ಶಿರಸಿ ವಿಭಾಗ ಕರಾವಳಿ ಪ್ರವಾಸಿ ತಾಣಗಳ ವೀಕ್ಷಣೆಗೆ ವಿಶೇಷ ಟೂರ್ ಪ್ಯಾಕೇಜ್ ಘೋಷಣೆ ಮಾಡಿತ್ತು.
ರಜೆ ದಿನಗಳು, ಸಾಮಾನ್ಯ ದಿನಗಳಲ್ಲಿಯೂ ಈ ಪ್ಯಾಕೇಜ್ ಲಭ್ಯವಿದೆ ಎಂದು ಹೇಳಿತ್ತು. ಈ ಪ್ಯಾಕೇಜ್‌ನಲ್ಲಿ ಕರ್ನಾಟಕದ ಕರಾವಳಿ ಪ್ರವಾಸಿ ತಾಣಗಳನ್ನು ವೀಕ್ಷಣೆ ಮಾಡಬಹುದಾಗಿದೆ. ಇದೊಂದು ವಿಶೇಷ ಟೂರ್ ಪ್ಯಾಕೇಜ್ ಆಗಿದ್ದು, ಜನರು ಉಪಯೋಗ ಮಾಡಿಕೊಳ್ಳುವಂತೆ ಕರೆ ನೀಡಿದೆ.
ಈ ವಿಶೇಷ ಟೂರ್ ಪ್ಯಾಕೇಜ್‌ನಲ್ಲಿ ವಯಸ್ಕರಿಗೆ ದರ 300 ರೂ.ಗಳು. ಮಕ್ಕಳಿಗೆ 250 ರೂ.ಗಳ ದರವನ್ನು ನಿಗದಿ ಮಾಡಲಾಗಿದೆ ಎಂದು ವಾ.ಕ.ರ.ಸಾ.ಸಂಸ್ಥೆ ಮಾಹಿತಿ ನೀಡಿತ್ತು. ಕುಮಟಾದಿಂದ ಆರಂಭವಾಗುವ ಪ್ರವಾಸಿ ಪ್ಯಾಕೇಜ್ ಗೋಕರ್ಣದಲ್ಲಿ ಅಂತ್ಯವಾಗುತ್ತಿತ್ತು.












Click it and Unblock the Notifications