ವಾಹನಕ್ಕೆ ಸುಲಭವಾಗಿ ಫ್ಯಾನ್ಸಿ ನಂಬರ್‌ ಪಡೆಯಿರಿ

ಬೆಂಗಳೂರು, ಜ. 13 : ವಾಹನಗಳಿಗೆ ಫ್ಯಾನ್ಸಿ ನಂಬರ್ ಬೇಕು ಎಂದು ಹುಡುಕಾಡುವ ಜನರಿಗೆ ಸಿಹಿ ಸುದ್ದಿ. ಫ್ಯಾನ್ಸಿ ನಂಬರ್ ಪಡೆಯಲು ಇನ್ನು ಪರದಾಡಬೇಕಿಲ್ಲ. ಸಾರಿಗೆ ಇಲಾಖೆಯು ಹರಾಜು ಮೂಲಕ ವಾಹನಗಳಿಗೆ ಫ್ಯಾನ್ಸಿ ನಂಬರ್ ನೀಡಲಿದೆ.

ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರ ನೇತೃತ್ವದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಮಂಗಳವಾರದಿಂದಲೇ ಈ ಪದ್ಧತಿ ಜಾರಿಗೆ ಬರಲಿದೆ. ಒಂದೇ ಫ್ಯಾನ್ಸಿ ನಂಬರ್‌ಗೆ ಹಲವಾರು ಅರ್ಜಿಗಳು ಬಂದಿದ್ದರೆ, ಹರಾಜು ಪ್ರಕ್ರಿಯೆ ನಡೆಯಲಿದೆ.

fancy number

ಆರ್‌ಟಿಒ ಮತ್ತು ಎಆರ್‌ಟಿಒ ಕಚೇರಿಗಳಲ್ಲಿ ಆಯಾ ದಿನ ಆರಂಭವಾಗುವ ಮೊದಲ ನೋಂದಣಿ ಸಂಖ್ಯೆಯಿಂದ ಅಥವಾ ಹಿಂದಿನ ದಿನ ಕೊನೆಯದಾಗಿ ನೀಡಿದ ನೋಂದಣಿ ಸಂಖ್ಯೆಯಿಂದ 1000 ಸಂಖ್ಯೆಗಳ ಪರಿಮಿತಿಯಲ್ಲಿ ಫ್ಯಾನ್ಸಿ ನಂಬರ್ ಪಡೆಯಲು ಅವಕಾಶವಿದೆ.

ಅರ್ಜಿ ಸಲ್ಲಿಸುವ ವಿಧಾನ : ಬೆಳಗ್ಗೆ 10.30ರಿಂದ ಫ್ಯಾನ್ಸಿ ನಂಬರ್‌ಗಾಗಿ ಅರ್ಜಿ ಸಲ್ಲಿಸಬಹುದು. ಜನರು ವಿಳಾಸ, ದೂರವಾಣಿ ಸಂಖ್ಯೆ, ಇ-ಮೇಲ್‌ ವಿಳಾಸದ ಜೊತೆಗೆ ನೋಂದಣಿ ಸಂಖ್ಯೆ ಕಾಯ್ದಿರಿಸಲು ನಿಗದಿಪಡಿಸಲಾಗಿರುವ ರೂ. 20 ಸಾವಿರ ಮತ್ತು ಮುಂಗಡ ಶುಲ್ಕ ರೂ. 75 ಸಾವಿರ ಮೊತ್ತದ ಡಿಡಿಯನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಹೆಸರಿನಲ್ಲಿ ತೆಗೆದು ಬೆಳಿಗ್ಗೆ 11.45ರ ಒಳಗೆ ಡ್ರಾಪ್‌ ಬಾಕ್ಸ್‌ನಲ್ಲಿ ಹಾಕಬೇಕು.

ಫ್ಯಾನ್ಸಿ ನಂಬರ್ ಪಡೆಯಲು ಆರ್‌ಟಿಒ/ಎಆರ್‌ಟಿಒ ಕಚೇರಿಗಳಲ್ಲಿ ಅನುಸರಿಸುವ ಪ್ರಕ್ರಿಯೆಗಳನ್ನೇ ಆಯುಕ್ತರ ಕಚೇರಿಯಲ್ಲೂ ಪಾಲಿಸಬೇಕಾಗುತ್ತದೆ. ಆದರೆ, ಡಿಡಿಯನ್ನು ಮಾತ್ರ ರಾಜ್ಯ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ಹೆಸರಿನಲ್ಲಿ ಪಡೆಯಬೇಕು.

ಡಿಡಿ ಮೊತ್ತ ವಾಪಸ್ : ಫ್ಯಾನ್ಸಿ ನಂಬರ್ ಪಡೆಯಲು ಡ್ರಾಪ್ ಬಾಕ್ಸ್‌ನಲ್ಲಿ ಹಾಕಿದ ಅರ್ಜಿಗಳನ್ನು ಮಧ್ಯಾಹ್ನ 12ಕ್ಕೆ ತೆಗೆಯಲಾಗುತ್ತದೆ. ಈ ವೇಳೆ ಅರ್ಜಿದಾರರು ಗೈರಾದರೆ ಅವರ ಅರ್ಜಿಗಳನ್ನು ತಿರಸ್ಕರಿಸಿ, ಡಿಡಿ ಮೊತ್ತವನ್ನು ವಾಪಸ್ ನೀಡಲಾಗುತ್ತದೆ.

ಹರಾಜು ಹೇಗೆ : ಒಂದೇ ಫ್ಯಾನ್ಸಿ ಸಂಖ್ಯೆಗೆ ಹೆಚ್ಚು ಅರ್ಜಿಗಳು ಬಂದಿದ್ದರೆ ಅರ್ಜಿದಾರರು ಸಂಬಂಧಪಟ್ಟ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಹೆಸರಿನಲ್ಲಿ ಬಿಡ್‌ ಮಾಡುವ ಮೊತ್ತಕ್ಕೆ ಡಿಡಿಯನ್ನು ಟೆಂಡರ್ ಅರ್ಜಿಯೊಂದಿಗೆ ಮುಚ್ಚಿದ ಲಕೋಟೆಯಲ್ಲಿ ಮಧ್ಯಾಹ್ನ 1 ಗಂಟೆ ಒಳಗಾಗಿ ಡ್ರಾಪ್‌ ಬಾಕ್ಸ್‌ನಲ್ಲಿ ಹಾಕಬೇಕು.

ನಂತರ 1.15ಕ್ಕೆ ಅರ್ಜಿಗಳನ್ನು ತೆರೆದು ಹೆಚ್ಚಿನ ಮೊತ್ತಕ್ಕೆ ಬಿಡ್ ಮಾಡಿದವರಿಗೆ 1.30ರ ಒಳಗೆ ಸಂಖ್ಯೆ ನೀಡ­ಲಾ­ಗುತ್ತದೆ. ಬಿಡ್‌ನಲ್ಲಿ ನೋಂದಣಿ ಸಂಖ್ಯೆ ಪಡೆದವರು ಮೂರು ತಿಂಗಳ ಒಳಗಾಗಿ ನೋಂದಣಿ ಮಾಡಿಸಿಕೊಳ್ಳಬೇಕು. ಇಲ್ಲದಿದ್ದರೆ ನೋಂದಣಿ ಸಂಖ್ಯೆ ಕಾಯ್ದಿರಿಸಲು ಪಾವತಿಸಿದ ಶುಲ್ಕವನ್ನು ಮುಟ್ಟು­ಗೋಲು ಹಾಕಿಕೊಳ್ಳಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+