ನ.23 ಬೆಂಗಳೂರು ರೇಸ್ ಕ್ಲಬ್‌ಗೆ ಅಂಬರೀಶ್ ಕೊನೆ ಭೇಟಿ

ಬೆಂಗಳೂರು, ನವೆಂಬರ್ 26 : ಮಾಜಿ ಸಚಿವ, ಹಿರಿಯ ನಟ ಅಂಬರೀಶ್ ಇಂದು ನಮ್ಮೊಂದಿಗೆ ಇಲ್ಲ. ಅಂಬರೀಶ್ ಬೆಂಗಳೂರು ಮತ್ತು ಮೈಸೂರಿನ ರೇಸ್‌ ಕ್ಲಬ್‌ಗಳಿಗೆ ಭೇಟಿ ನೀಡುವುದು ಎಲ್ಲರಿಗೂ ತಿಳಿದಿತ್ತು. ಅವರು ಸಾಯುವ ಒಂದು ದಿನ ಮೊದಲು ಬೆಂಗಳೂರು ರೇಸ್‌ ಕ್ಲಬ್‌ಗೆ ಭೇಟಿ ನೀಡಿದ್ದರು.

ಶುಕ್ರವಾರ ಅವರು ಬೆಂಗಳೂರು ರೇಸ್ ಕ್ಲಬ್ (ಬಿಟಿಸಿ)ಗೆ ಭೇಟಿ ಕೊಟ್ಟಿದ್ದರು. ಅಲ್ಲಿ ಸುಮಾರು ಹೊತ್ತು ಇದ್ದ ಅವರು, ರೇಸ್ ವೀಕ್ಷಣೆ ಮಾಡಿದ್ದರು. ಆದರೆ, ಮರುದಿನ ನವೆಂಬರ್ 24ರಂದು ಅವರು ವಿಧಿವಶರಾಗಿದ್ದಾರೆ.

ಚಿತ್ರೀಕರಣ, ರಾಜಕೀಯದ ಕೆಲಸಗಳ ನಡುವೆಯೇ ಅಂಬರೀಶ್ ಬೆಂಗಳೂರು ರೇಸ್ ಕ್ಲಬ್‌ಗೆ ಯಾವಾಗಲೂ ಭೇಟಿ ನೀಡುತ್ತಿದ್ದರು. 1992ರಲ್ಲಿ ಅವರು ಕ್ಲಬಸ್ ಸದಸ್ಯತ್ವನ್ನು ಪಡೆದಿದ್ದರು. ರೇಸ್‌ಕೋರ್ಸ್‌ನಲ್ಲಿ ಅಂಬರೀಶ್ ಆಕರ್ಷಣೆಯ ಕೇಂದ್ರ ಬಿಂದು ವಾಗಿರುತ್ತಿದ್ದರು.

November 23 Ambareesh last visit to Bangalore Turf Club

ರೇಸ್‌ಕೋರ್ಸ್‌ನಲ್ಲಿ ಸೂಟು-ಬೂಟಿನಲ್ಲಿ ಅಂಬರೀಶ್ ಮಿಂಚುತ್ತಿದ್ದರು. ಎಲ್ಲರೊಂದಿಗೆ ಪ್ರೀತಿಯಿಂದ ಮಾತನಾಡುತ್ತಾ, ಸೀಗರೇಟು ಸೇದುತ್ತಾ ಓಡಾಡುತ್ತಿದ್ದರು. ಕ್ಲಬ್‌ನ ಕೆಲಸಗಾರರು ಸಹ ಅಂಬರೀಶ್ ಅವರಿಗೆ ಚಿರಪರಿಚಿತರಾಗಿದ್ದರು.

ಅಂಬರೀಶ್ ಅವರಿಗೆ ಸೇರಿದ 'ಸ್ಪೀಡ್ ಹಾಕ್' ಎಂಬ ಕುದುರೆ ಬೆಂಗಳೂರು ರೇಸ್ ಕ್ಲಬ್‌ನಲ್ಲಿದೆ. 2018ರ ಜುಲೈನಲ್ಲಿ ನಡೆದ ರೇಸ್ ವೊಂದರಲ್ಲಿ ಅದು ಕಪ್‌ ಸಹ ಗೆದ್ದಿತ್ತು. ಕ್ಲಬ್ ಸದಸ್ಯತ್ವ ಪಡೆಯುವುದಕ್ಕೂ ಮೊದಲು ಸಹ ಅವರು ಬೆಂಗಳೂರು ರೇಸ್ ಕ್ಲಬ್‌ಗೆ ಬರುತ್ತಿದ್ದರು.

ಡರ್ಬಿ ರೇಸ್‌ಗಳಿದ್ದಾಗ ಅಂಬರೀಶ್ ಅವರು ಪ್ರಮುಖ ಆಕರ್ಷಣೆಯಾಗಿರುತ್ತಿದ್ದರು. ರೇಸ್ ನೋಡಲು ಅವರು ತಪ್ಪದೇ ಬರುತ್ತಿದ್ದರು. ಮೈಸೂರಿಗೆ ಭೇಟಿ ನೀಡಿದಾಗ ಅಲ್ಲಿಯೂ ರೇಸ್ ಕ್ಲಬ್‌ಗೆ ಅಂಬರೀಶ್ ಭೇಟಿ ನೀಡುತ್ತಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+