ನ್ಯೂ ಇಯರ್ ಗೆ ಎಣ್ಣೆ ಪ್ರಿಯರಿಗೆ ಬಿಗ್ ಶಾಕ್: ಸರ್ಕಾರದ ಪ್ಲಾನ್ ಏನು?
ಬೆಂಗಳೂರು, ಡಿಸೆಂಬರ್ 11: ನ್ಯೂ ಇಯರ್ ಹತ್ತಿರ ಬರ್ತಾ ಇದ್ದ ಹಾಗೇ ಎಣ್ಣೆ ಪ್ರಿಯರಿಗೆ ಶಾಕ್ ಕೊಡಲು ಸರ್ಕಾರ ಮುಂದಾಗಿದೆ. ಅದ್ರಲ್ಲೂ ಬಿಯರ್ ಪ್ರಿಯರಿಗೆ ಗವರ್ನೆಮಂಟ್ ಬಿಗ್ ಶಾಕ್ ಕೊಡುತ್ತಿದೆ. ಮೈಸೂರಿನ 4 ಉತ್ಪಾದನಾ ಕಂಪನಿಗಳಿಗೆ ಬಿಯರ್ ಉತ್ಪಾದನೆ ಸ್ಥಗಿತ ಮಾಡಲು ಸೂಚನೆ ಕೊಟ್ಟಿದೆ. ಅಂದ್ರೆ ಅಬಕಾರಿ ಇಲಾಖೆಯಿಂದ ಒಂದು ಪಾಳಿಯಲ್ಲಿ ಬಿಯರ್ ಉತ್ಪಾದನೆ ಸ್ಥಗಿತಕ್ಕೆ ನಾಲ್ಕು ಕಂಪನಿಗಳಿಗೆ ಸರ್ಕಾರ ಸೂಚನೆ ಕೊಟ್ಟಿದೆ.
ಅಷ್ಟಕ್ಕೂ ಸರ್ಕಾರ ಈ ನಿರ್ಧಾರಕ್ಕೆ ಬರೋದಕ್ಕೆ ಕಾರಣ ಏನು ಅಂತ ನೋಡೋದಾದ್ರೆ ಬಿಯರ್ ಗೆ ಇರೋ ಡಿಮ್ಯಾಂಡ್ ಜೊತೆಗೆ ಸರ್ಕಾರದ ಆದಾಯಕ್ಕೆ ಬೀಳ್ತೀರೋ ಪೆಟ್ಟು. ಸರ್ಕಾರದ ಬೊಕ್ಕಸ ತುಂಬಿ ಕೊಳ್ಳಲು ಬಿಯರ್ ಪ್ರಿಯರಿಗೆ ಶಾಕ್ ಕೊಟ್ಟಿರುವುದು..

ಸದ್ಯ ರಾಜ್ಯದಲ್ಲಿ ಬಿಯರ್ಗೆ ಸಖತ್ ಡಿಮ್ಯಾಂಡ್ ಇದೆ. ರಾಜ್ಯವಷ್ಟೇ ಅಲ್ಲದೆ, ಹೊರ ರಾಜ್ಯದಿಂದಲೂ ಬೇಡಿಕೆ ಸಿಕ್ಕಾಪಟ್ಟೆ ಇದೆ. ಜೊತೆಗೆ ಹೊಸ ವರ್ಷ ಕೂಡ ಹತ್ತಿರದಲ್ಲಿ ಇರೋದ್ರಿಂದ ಬಿಯರ್ ಗೆ ಡಿಮ್ಯಾಂಡ್ ಕೂಡ ಒನ್ ಟು ಡಬಲ್ ಹೆಚ್ಚಾಗಿದೆ. ಏಕಾಏಕಿ ಉತ್ಪಾದನೆ ಕಮ್ಮಿ ಆದರೆ ಕೊರತೆ ಆಗುತ್ತದೆ. ಜನ IML ಜಾಸ್ತಿ ಪರ್ಚೆಸ್ ಮಾಡಬಹುದು ಅನ್ನೋದು ಸರ್ಕಾರದ ಲೆಕ್ಕಾಚಾರವಾಗಿದೆ.
ಇನ್ನೂ ಉತ್ಪಾದನೆ ಕಡಿಮೆ ಮಾಡಲು ಕಂಪನಿಗೆ ಸೂಚನೆ ಕೊಟ್ಟಿರೋ ಬಗ್ಗೆ ಅಬಕಾರಿ ಇಲಾಖೆ ಕೊಡೋ ಸಮಜಾಯಿಷಿ ಬೇರೆ. ಮೈಸೂರು ಜಿಲ್ಲೆಯಲ್ಲಿ ಅಬಕಾರಿ ಸಿಬ್ಬಂದಿ ಕೊರತೆ
ಸಿಬ್ಬಂದಿ ಕೊರತೆ ಇರೋದ್ರಿಂದ ಈ ನಿರ್ಧಾರ ಬಂದಿದ್ದೇವೆ. ಆದರೆ, ಸರ್ಕಾರದ ನಿರ್ಧಾರ ಹಿಂದಿದೆಯಂತೆ ಬೇರೆ ಕಾರಣ ಇರೋ ಬಗ್ಗೆ ಸದ್ಯ ಚರ್ಚೆ ಆಗುತ್ತಿದೆ.
ಬಿಯರ್ ಮಾರಾಟದಿಂದ ಹೆಚ್ಚಿನ ಆದಾಯ ಬರುತ್ತಿಲ್ಲವಂತೆ ಐಎಂಎಲ್ಗಳ ಮಾರಾಟದಿಂದ ಹೆಚ್ಚಿನ ಆದಾಯ ಬರುತ್ತದೆ, ಐಎಂಎಲ್ ಮಾರಾಟ ಹೆಚ್ಚಳ ಮಾಡಿ ಆದಾಯ ಹೆಚ್ಚಳ ಪ್ಲಾನ್ ಮಾಡಲು ಸರ್ಕಾರ ಮಾಸ್ಟರ್ ಪ್ಲಾನ್ ಮಾಡಿರುವುದು ಗೊತ್ತಾಗ್ತಾ ಇದೆ.

ಕಳೆದ ವರ್ಷಕ್ಕಿಂತ ಬಿಯರ್ ಮಾರಾಟದಲ್ಲಿ 15% ಹೆಚ್ಚಳ ಆಗಿದ್ದು ಐಎಂಎಲ್ ಮಾರಾಟದಲ್ಲಿ ಕೇವಲ 2 ಪರ್ಸೆಂಟ್ ಹೆಚ್ಚಳ ಆಗಿದೆ. ಆದ್ರೆ ಬೆಲೆ ಏರಿಕೆಯಿಂದಾಗಿ ₹2500 ಕೋಟಿ ಹೆಚ್ಚು ಆದಾಯ ಬಂದಿದೆ. ಐಎಂಎಲ್ ಮಾರಾಟವೇ ಹೆಚ್ಚಿದರೆ ಇನ್ನೂ ಹೆಚ್ಚಿನ ಆದಾಯ ಆದಾಯ ಮತ್ತಷ್ಟು ಹೆಚ್ಚಳವಾಗುವ ನಿರೀಕ್ಷೆಯಿದೆ. ಆದರೆ ಬಹುತೇಕ ಯುವ ಜನತೆಯ ಫೇವರಿಟ್ ಬಿಯರ್ ಆಗಿದೆ. ಉತ್ಪಾದನೆ ಕಮ್ಮಿ ಮಾಡಿದರೆ ಬಿಯರ್ ಕೊರತೆ ಉಂಟಾಗುತ್ತೆ, ಹೀಗಾಗಿ ಅನಿವಾರ್ಯವಾಗಿ ಐಎಂಎಲ್ ಮಾರಾಟವೂ ಹೆಚ್ಚಾಗುತ್ತದೆ.
ಎಣ್ಣೆ ಆದಾಯದ ಲೆಕ್ಕ 2022
ಐಎಂಎಲ್ - ₹24,663 ಕೋಟಿ
ಬಿಯರ್ - ₹4,460 ಕೋಟಿ
ಒಟ್ಟು ಆದಾಯ - ₹29,920.37 ಕೋಟಿ
2023 (ನವೆಂಬರ್ ವರೆಗೆ)
ಐಎಂಎಲ್ - ₹17,864.48 ಕೋಟಿ
ಬಿಯರ್ - ₹3,515.76 ಕೋಟಿ
ಒಟ್ಟು ಆದಾಯ - ₹22,157.25 ಕೋಟಿ
2022 ರಲ್ಲಿ ಸೇಲ್ ಆಗಿದ್ದೆಷ್ಟು?
ಐಎಂಎಲ್ ಮಾರಟ 698 ಲಕ್ಷ ಬಾಕ್ಸ್
ಬಿಯರ್ ಮಾರಟ 390 ಲಕ್ಷ ಕೇಸ್
2೦23(ನವೆಂಬರ್ ವರೆಗೆ)
ಐಎಂಎಲ್ ಮಾರಟ 468.91 ಲಕ್ಷ ಬಾಕ್ಸ್
ಬಿಯರ್ ಮಾರಟ 282.64 ಲಕ್ಷ ಕೇಸ್
ಯಾವ ತಿಂಗಳಲ್ಲೆಷ್ಟು?
ಸೆಪ್ಟೆಂಬರ್
2022 - 30.20 ಲಕ್ಷ ಕೇಸ್
2023 - 31.27 ಲಕ್ಷ ಕೇಸ್
ಅಕ್ಟೋಬರ್
2022 - 30.32 ಲಕ್ಷ ಕೇಸ್
2023 - 36.28 ಲಕ್ಷ ಕೇಸ್
ನವೆಂಬರ್
2೦22 - 29.5 ಲಕ್ಷ ಕೇಸ್
2023 - 35 ಲಕ್ಷ ಕೇಸ್












Click it and Unblock the Notifications