ಪ್ರಯಾಣಿಕರ ಗಮನಕ್ಕೆ: ಹುಬ್ಬಳ್ಳಿ-ಸೊಲ್ಲಾಪುರ, ಬೆಂಗಳೂರು ಮಾರ್ಗದ ಈ ರೈಲುಗಳ ಸಮಯ ಬದಲಾವಣೆ
ಹುಬ್ಬಳ್ಳಿ,ಜುಲೈ 09: ಹುಬ್ಬಳ್ಳಿ-ಸೊಲ್ಲಾಪುರ ಪ್ಯಾಸೆಂಜರ್ ಸೇರಿಂದತೆ ರಾಜ್ಯದ ಒಂಬುತ್ತು ರೈಲಗಳ ಸಂಚಾರ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಈ ಸಮಯ ಬದಲಾವಣೆ ಮುಂದಿನ ವಾರದಿಂದ ಜಾರಿಗೆ ಬರಲಿದೆ ಎಂದು ಎಂದು ನೈಋತ್ಯ ರೈಲ್ವೆ ವಲಯ ಮಾಧ್ಯಮ ಪ್ರಕಟಣೆ ಹೊರಡಿಸಿದೆ.
ಹೌದು, ಈ ಕುರಿತು ನೈಋತ್ಯ ರೈಲ್ವೆ ವಲಯ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಲಾಗಿದ್ದು, ಹುಬ್ಬಳ್ಳಿ ಮತ್ತು ಬೆಳಗಾವಿಯಿಂದ ಸೂರತ್ನ ಉಧ್ನಾದಿಂದ ವಿಶೇಷ ರೈಲು ಬಿಡಲಾಗಿದೆ. ಹುಬ್ಬಳ್ಳಿ-ಸೊಲ್ಲಾಪುರ, ಹುಬ್ಬಳ್ಳಿ-ನರಸಾಪುರ ಅಮರಾವತಿ ಎಕ್ಸಪ್ರೆಸ್, ದಾದರ್-ಮೈಸೂರು ಶರಾವತಿ ವೀಕ್ಲಿ ಎಕ್ಸಪ್ರೆಸ್, ಅಜಮೀರ್-ಮೈಸೂರು ವೀಕ್ಲಿ ಎಕ್ಸಪ್ರೆಸ್, ಜೋದಪುರ-ಕೆಎಸ್ಆರ್ ವೀಕ್ಲಿ ಎಕ್ಸಪ್ರೆಸ್, ಗಾಂಧಿದಾಮ್-ಕೆಎಸ್ಆರ್ ಬೆಂಗಳೂರು ವೀಕ್ಲಿ ಎಕ್ಸಪ್ರೆಸ್, ದಾದರ್-ಪಾಂಡಿಚೇರಿ ವೀಕ್ಲಿ ಎಕ್ಸಪ್ರೆಸ್, ಹುಬ್ಬಳ್ಳಿ-ಯಶವಂತಪುರ ವೀಕ್ಲಿ ಸೂಪರ್ ಫಾಸ್ಟ್ ಎಕ್ಸಪ್ರೆಸ್, ಮತ್ತು ದಾದರ್-ತಿರುನೆಲ್ವೇಲಿ ವೀಕ್ಲಿ ಎಕ್ಸಪ್ರೆಸ್ ರೈಲಿನ ಸಮಯ ಬದಲಾವಣೆಯಾಗಲಿದೆ.

ಸಮಯ ಬದಲಾವಣೆ ಸಂಪೂರ್ಣ ಮಾಹಿತಿ ಇಲ್ಲಿದೆ
1. ರೈಲು ಸಂಖ್ಯೆ 07332: ಎಸ್ಎಸ್ಎಸ್ ಹುಬ್ಬಳ್ಳಿ-ಸೊಲ್ಲಾಪುರ ಪ್ಯಾಸೆಂಜರ್ ರೈಲು ಜು.15 ರಿಂದ ಹುಬ್ಬಳ್ಳಿ ರೈಲು ನಿಲ್ದಾಣದಿಂದ ಮಧ್ಯಾಹ್ನ 1:15ಕ್ಕೆ ಹೊರಡಲಿದೆ.
2. ರೈಲು ಸಂಖ್ಯೆ 17226: ಎಸ್ಎಸ್ಎಸ್ ಹುಬ್ಬಳ್ಳಿ-ನರಸಾಪುರ ಅಮರಾವತಿ ಎಕ್ಸಪ್ರೆಸ್ ಜು.15 ರಿಂದ ಹುಬ್ಬಳ್ಳಿ ರೈಲು ನಿಲ್ದಾಣದಿಂದ ಮಧ್ಯಾಹ್ನ 1ಕ್ಕೆ ಹೊರಡಲಿದೆ.
3. ರೈಲು ಸಂಖ್ಯೆ 11005: ದಾದರ್-ಪಾಂಡಿಚೇರಿ ವೀಕ್ಲಿ ಎಕ್ಸಪ್ರೆಸ್ ಜು.15 ರಿಂದ ಹುಬ್ಬಳ್ಳಿ ರೈಲು ನಿಲ್ದಾಣದಿಂದ ಮಧ್ಯಾಹ್ನ 12:05ಕ್ಕೆ ಅಥವಾ 12:15ಕ್ಕೆ ಹೊರಡಲಿದೆ.
4. ರೈಲು ಸಂಖ್ಯೆ 11035: ದಾದರ್-ತಿರುನೆಲ್ವೇಲಿ ವೀಕ್ಲಿ ಎಕ್ಸಪ್ರೆಸ್ ಜು.15 ರಿಂದ ಹುಬ್ಬಳ್ಳಿ ರೈಲು ನಿಲ್ದಾಣದಿಂದ ಮಧ್ಯಾಹ್ನ 12:05ಕ್ಕೆ ಅಥವಾ 12:15ಕ್ಕೆ ಹೊರಡಲಿದೆ.
5. ರೈಲು ಸಂಖ್ಯೆ 11035: ಮೈಸೂರು-ಶರಾವತಿ ವೀಕ್ಲಿ ಎಕ್ಸಪ್ರೆಸ್ ಜು.18 ರಿಂದ ಹುಬ್ಬಳ್ಳಿ ರೈಲು ನಿಲ್ದಾಣದಿಂದ ಮಧ್ಯಾಹ್ನ 12:05ಕ್ಕೆ ಅಥವಾ 12:15ಕ್ಕೆ ಹೊರಡಲಿದೆ.
6. ರೈಲು ಸಂಖ್ಯೆ 16209: ಅಜ್ಮೀರ್-ಮೈಸೂರು ವೀಕ್ಲಿ ಎಕ್ಸಪ್ರೆಸ್ ಜು.19 ರಿಂದ ಹುಬ್ಬಳ್ಳಿ ರೈಲು ನಿಲ್ದಾಣದಿಂದ ಮಧ್ಯಾಹ್ನ 2:00 ಗಂಟೆ ಅಥವಾ 02:15ಕ್ಕೆ ಹೊರಡಲಿದೆ.
7. ರೈಲು ಸಂಖ್ಯೆ 16507: ಜೋದಪುರ್-ಕೆಎಸ್ಆರ್ ಬೆಂಗಳೂರು ವೀಕ್ಲಿ ಎಕ್ಸಪ್ರೆಸ್ ಜು.18 ರಿಂದ ಹುಬ್ಬಳ್ಳಿ ರೈಲು ನಿಲ್ದಾಣದಿಂದ ಮಧ್ಯಾಹ್ನ 2:00 ಗಂಟೆ ಅಥವಾ 02:15ಕ್ಕೆ ನಿರ್ಗಮಿಸಲಿದೆ.
8. ರೈಲು ಸಂಖ್ಯೆ 16505: ಗಾಂಧಿಧಾಮ್-ಕೆಎಸ್ಆರ್ ಬೆಂಗಳೂರು ವೀಕ್ಲಿ ಎಕ್ಸಪ್ರೆಸ್ ಜು.16 ರಿಂದ ಹುಬ್ಬಳ್ಳಿ ರೈಲು ನಿಲ್ದಾಣದಿಂದ ಮಧ್ಯಾಹ್ನ 2:00 ಗಂಟೆ ಅಥವಾ 02:15ಕ್ಕೆ ನಿರ್ಗಮಿಸಲಿದೆ.
Attention passengers:
— South Western Railway (@SWRRLY) July 8, 2024
Kindly note the revision in timings of the following trains as detailed below.#SWRupdates pic.twitter.com/WlhYK2ErlK
9. ರೈಲು ಸಂಖ್ಯೆ 20656: ಎಸ್ಎಸ್ಎಸ್ ಹುಬ್ಬಳ್ಳಿ-ಯಶವಂತಪುರ ವೀಕ್ಲಿ ಎಕ್ಸಪ್ರೆಸ್ ಜು.20 ರಿಂದ ಬೆಳಗ್ಗೆ 11ಕ್ಕೆ ಹುಬ್ಬಳ್ಳಿ ರೈಲು ನಿಲ್ದಾಣದಿಂದ ಹೊರಡಲಿದೆ.












Click it and Unblock the Notifications