ಪಂಚೆ ಹಾಕಿ ಮಾಲ್‌ಗೆ ಬಂದಿದ್ದಕ್ಕೆ ನೋ ಎಂಟ್ರಿ: ಅನ್ನದಾತನಿಗೆ ಇದೆಂಥಾ ಅಪಮಾನ!
ಬೆಂಗಳೂರು, ಜುಲೈ 17: ದಿನೇ ದಿನೇ ಬೆಂಗಳೂರಿನಲ್ಲಿ ವಿಚಿತ್ರ ಘಟನೆಗಳು ನಡೆಯುತ್ತಿದೆ. ಮಂಗಳವಾರ ಬೆಂಗಳೂರಿನ ಪ್ರತಿಷ್ಠಿತ ಜಿಟಿ ಮಾಲ್‌ನಲ್ಲಿ ಅನ್ನದಾತನಿಗೆ ಅವಮಾನ ಮಾಡಲಾಗಿದ್ದು, ಸಾರ್ವಜನಿಕರು ಮಾಲ್ ಸಿಬ್ಬಂದಿಯ ವಿರುದ್ಧವಾಗಿ ಕಿಡಿಕಾರಿದ್ದಾರೆ.
ಬೆಂಗಳೂರಿನ ಮಾಗಡಿ ರಸ್ತೆಯ ಜಿಟಿ ಮಾಲ್ ನಲ್ಲಿ ಸಿನಿಮಾ ನೋಡಲು ಅಪ್ಪ-ಮಗ ಇಬ್ಬರು ಬಂದಿದ್ದರು. ಪಂಚೆ ಹಾಕಿ ಬಂದಿದ್ದ ರೈತನಿಗೆ ಮಾಲ್‌ನಲ್ಲಿ ಪ್ರವೇಶ ನೀಡಲಾಗಿಲ್ಲ. ಯಾಕೆ ಪ್ರವೇಶವಿಲ್ಲ ಎಂದು ಪ್ರಶ್ನಿಸಿದಾಗ ಪಂಚೆ ಹಾಕಿರೋ ಕಾರಣ ರೈತನಿಗೆ ಒಳಗಡೆ ಹೋಗೋದಕ್ಕೆ ಅವಕಾಶ ನೀಡಿಲ್ಲ. ನೀವು ಪ್ಯಾಂಟ್ ಹಾಕಿದ್ದೀರಿ ಒಳಗಡೆ ಹೋಗಬಹುದು ಅಂತ ಮಗನಿಗೆ ಹೇಳಿದ್ದಾರೆ. ಆದರೆ ಅಪ್ಪನಿಗೆ ಪ್ರವೇಶ ನಿರಾಕರಿಸಿದ್ದಾರೆ.

ಹಾವೇರಿ ಮೂಲದ ನಾಗರಾಜ್ ತಮ್ಮ ತಂದೆ, ತಾಯಿಯನ್ನು ಜಿಟಿ ಮಾಲ್‌ಗೆ ನಿನ್ನೆ (ಮಂಗಳವಾರ) ಸಂಜೆ ಸಿನೆಮಾ ತೋರಿಸಲು ಕರೆದುಕೊಂಡು ಹೋಗುವಾಗ ಮಾಲ್ ಪ್ರವೇಶ ದ್ವಾರದಲ್ಲಿ ಸಿಬ್ಬಂದಿ ಪಂಚೆ ಹಾಕಿದ್ದಾರೆ ಅನ್ನೋ ಕಾರಣಕ್ಕೆ ಅವರನ್ನು ಮಾಲ್ ಒಳಗೆ ಪ್ರವೇಶ ಮಾಡಲು ನಿರಾಕರಿಸಿದ್ದಾರೆ. ನಾಗರಾಜ್ ತಂದೆ ಹಾವೇರಿ ಜಿಲ್ಲೆಯ ಅರೇಮಲ್ಲಾಪುರ ಎಂಬ ಗ್ರಾಮದ ರೈತರಾಗಿದ್ದಾರೆ.
ಪಂಚೆ ಹಾಕಿ ಬಂದಿದ್ದಕ್ಕೆ ನೋ ಎಂಟ್ರಿ: ಅನ್ನದಾತನಿಗೆ ಇದೆಂಥಾ ಅಪಮಾನ!#Farmer #ViralVideo #mall #ಒನ್ಇಂಡಿಯಾಕನ್ನಡಸುದ್ದಿ pic.twitter.com/r6QAjWDcA3
— oneindiakannada (@OneindiaKannada) July 17, 2024
ಮಾಲ್ ಮುಂಭಾಗದಲ್ಲಿಯೇ ಅರ್ಧ ಗಂಟೆಗೂ ಹೆಚ್ಚು ಕಾಲ ಕೂರಿಸಿದ್ದಾರೆ. ನಾಗರಾಜ್ ಎಂಬುವರು ಒಳಗೆ ಬಿಡಿ ಅಂತ ಎಷ್ಟು ಬಾರಿ ಕೇಳಿದರು ಪಂಚೆ ಹಾಕೊಂಡಿದ್ದರೆ ಹಾಗಾಗಿ ಬಿಡುವುದಿಲ್ಲ, ಮಾಲ್‌ನಲ್ಲಿ ಪಂಚೆ ಹಾಕಿದವರನ್ನು ಬಿಡುವುದಿಲ್ಲ. ನಮ್ಮ ಮಾಲ್‌ನಲ್ಲಿ ಈ ರೀತಿ ರೂಲ್ಸ್ ಇದೆ ಅಂತ ಹೇಳಿದ್ದಾರೆ. ಮಾಲ್ ಸಿಬ್ಬಂದಿಗಳ ವರ್ತನೆಯಿಂದ ನಾಗರಾಜ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ರೈತ ಫಕೀರಪ್ಪ ಎಂಬುವವರಿಗೆ ಜಿಟಿ ವರ್ಲ್ಡ್ ಮಾಲ್‌ನಲ್ಲಿ ಪ್ರವೇಶ ನಿರಾಕರಿಸಿದ್ದಾರೆ. ರೈತ ಬೆಳೆಯುವ ಬೆಳೆ ಬೇಕು. ರೈತನಿಗೆ ಮರ್ಯಾದೆ ಕೊಡೋಕೆ ಬರಲ್ವಾ ಎಂದು ಈ ಘಟನೆಗೆ ನೆಟ್ಟಗರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಕೆಲವರು ಮಾಲ್ ಗೆ ಪಂಚೆ ಹಾಕಿ ಬಂದ್ರೆ ಏನು ತಪ್ಪು. ಕಾಸು ಕೊಟ್ಟು ಸಿನಿಮಾ ನೋಡೋಕೆ ಅವರು ಬಂದಿರೋದು, ಫ್ರೀಯಾಗಿ ನೋಡೋಕೆ ಅಲ್ವಲ್ಲ ಅಂತ ಮಾಲ್ ವಿರುದ್ಧ ಕಿಡಿಕಾರುತ್ತಿದ್ದಾರೆ.
ಅನ್ನದಾತನಿಗೆ ಕೊಡುವ ಮರ್ಯಾದೆ ಕೊಡಬೇಕು. ಹೀಗೆ ಅವಮಾನ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಅಂತ ಕೆಲ ನೆಟ್ಟಿಗರು ಆಗ್ರಹಿಸುತ್ತಿದ್ದಾರೆ. ಇನ್ನೂ ಬೆಂಗಳೂರಿನಲ್ಲಿ ಈ ರೀತಿಯ ಪ್ರಕರಣಗಳು ಹೊಸದೆನಲ್ಲ. ಈ ಹಿಂದೆಯೂ ರೈತರು ಮೆಟ್ರೋದಲ್ಲಿ ಪ್ರವೇಶ ನಿರ್ಬಂಧ ಮಾಡಿದ್ದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಇದೀಗ ಮಾಲ್ ನಲ್ಲಿ ಪ್ರವೇಶ ನಿರಾಕರಿಸಿದಕ್ಕೆ ಬಾರಿ ವಿರೋಧ ವ್ಯಕ್ತವಾಗುತ್ತಿದೆ.












Click it and Unblock the Notifications