ಡಿಸೆಂಬರ್ 31 ರಂದು ನಂದಿಬೆಟ್ಟ, ಆವಲಬೆಟ್ಟಕ್ಕೆ ಪ್ರವೇಶ ನಿಷೇಧ
ಬೆಂಗಳೂರು, ಡಿಸೆಂಬರ್ 30 : ಹೊಸ ವರ್ಷ ಆಚರಣೆ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ನಂದಿ ಬೆಟ್ಟ, ಆವಲಬೆಟ್ಟ ದಲ್ಲಿ ಡಿ.೩೧ ರ ಸಂಜೆ ೪ರಿಂದ ಜನವರಿ ೧ರ ಬೆಳಗ್ಗೆ ೮ಗಂಟೆಯವರೆಗೆ ಪ್ರವೇಶ ನಿಷೇಧಿಸಲಾಗಿದೆ ಎಂದು ಚಿಕ್ಕಬಳ್ಳಾಪುರ ಎಸ್ಪಿ ಕಾರ್ತಿಕ್ ರೆಡ್ಡಿ ಹೇಳಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರ ಸುರಕ್ಷತೆ ದೃಷ್ಟಿಯಿಂದ ಈ ನಿರ್ಣಯ ಕೈಗೊಳ್ಳಲಾಗಿದೆ. ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ನಂದಿ ಬೆಟ್ಟ ಅಥವಾ ಆವಲಬೆಟ್ಟಕ್ಕೆ ಭೇಟಿ ನೀಡುವವರು ಡಿ.31ರ ಮಧ್ಯಾಹ್ನ3 ಗಂಟೆಯ ಒಳಗೆ ಪ್ರವೇಶಿಸಬೇಕು 4 ಗಂಟೆಯ ನಂತರ ಪ್ರವೇಶ ನೀಡುವುದಿಲ್ಲ, ನಿಷೇಧಿತ ಗಿರಿಧಾಮಗಳಿಗೆ ಭೇಟಿ ನೀಡಬೇಡಿ ಎಂದು ಸೂಚನೆ ನೀಡಿದ್ದಾರೆ.












Click it and Unblock the Notifications