ಭಾಗಶಃ ಒಸಿ ಪಡೆದಿದ್ದ ಯೋಜನೆಗಳ ಮೇಲೆ ಕೆ-ರೇರಾಗೆ ಅಧಿಕಾರವಿಲ್ಲ; ಹೈಕೋರ್ಟ್

ಬೆಂಗಳೂರು, ಜನವರಿ 09; ರಿಯಲ್‌ ಎಸ್ಟೇಟ್‌ ಅಭಿವೃದ್ಧಿ ಮತ್ತು ನಿಯಂತ್ರಣ ಕಾಯಿದೆ ಜಾರಿಗೂ ಮುನ್ನ ಭಾಗಶಃ ಸ್ವಾಧೀನಾನುಭವ ಪತ್ರ (ಒಸಿ) ಪಡೆದಿದ್ದ ವಸತಿ ಯೋಜನೆಗಳ ಮೇಲೆ ರೇರಾ ಪ್ರಾಧಿಕಾರಕ್ಕೆ ಅಧಿಕಾರವಿಲ್ಲ.

ಹೀಗೆಂದು ಕರ್ನಾಟಕ ಹೈಕೋರ್ಟ್‌ ಮಹತ್ವದ ಆದೇಶ ನೀಡಿದ್ದು, ಇದು ಪ್ರಭಾವಿ ಬಿಲ್ಡರ್‌ಗಳ ವಿರುದ್ಧ ಹೋರಾಡುತ್ತಿರುವ ಗೃಹ ಖರೀದಿದಾರರಿಗೆ ತೀವ್ರ ಹಿನ್ನಡೆಯಾಗಿದೆ.

ಏಕೆಂದರೆ ಕಾಯಿದೆ ಜಾರಿಗೆ ಮುನ್ನ ಆಂಶಿಕ ಒಸಿ ಪಡೆದಿರುವ ಸಾವಿರಾರು ಬಿಲ್ಡರ್‌ಗಳ ವಿರುದ್ಧ ಗೃಹ ಖರೀದಿದಾರರು ಯಾವುದೇ ಕಾನೂನು ಕ್ರಮ ಜರುಗಿಸಲಾಗದು, ಹಾಗೆ ಮಾಡಿದರೆ ಸಾವಿರಾರು ಕೇಸುಗಳು ಬಿದ್ದ ಹೋಗಲಿವೆ.

No Authority For K RERA Before Partial OC Taken By Builder Prior To Implementation Of The Act

ಜತೆಗೆ ಪ್ರಾಧಿಕಾರ ಗೃಹ ಖರೀದಿದಾರರೊಬ್ಬರಿಗೆ ಹಣವನ್ನು ಮರುಪಾವತಿ ಮಾಡುವಂತೆ ಮೆಸರ್ಸ್‌ ಪ್ರಾವಿಡೆಂಟ್‌ ಹೌಸಿಂಗ್‌ ಲಿಮಿಟೆಡ್‌ಗೆ ನಿರ್ದೇಶನ ನೀಡಿ ಹೊರಡಿಸಿದ್ದ ಆದೇಶವನ್ನೂ ಸಹ ರದ್ದು ಮಾಡಿದೆ.

ಹಾಗಾಗಿ ಇದೀಗ ಬಿಲ್ಡರ್, ಆ ಗೃಹ ಖರೀದಾರರಿಗೆ ಹಣ ಮರುಪಾವತಿ ಮಾಡಬೇಕಾಗಿಲ್ಲ. ಮೆಸರ್ಸ್‌ ಪ್ರಾವಿಡೆಂಟ್‌ ಹೌಸಿಂಗ್‌ ಲಿಮಿಟೆಡ್‌ ಕೆ-ರೇರಾ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಪುರಸ್ಕರಿಸಿ ಈ ಗಮನಾರ್ಹ ಆದೇಶ ನೀಡಿದೆ.

ಪ್ರಕರಣದ ಹಿನ್ನೆಲೆ ಏನು?; ಮಂಗಳೂರು ಮೂಲದ ಶ್ಯಾಮ್‌ ಶೆಟ್ಟಿ ಎಂಬುವರು ಮೆಸರ್ಸ್‌ ಪ್ರಾವಿಡೆಂಟ್‌ ಹೌಸಿಂಗ್‌ ಲಿಮಿಟೆಡ್‌ ಜತೆ 2014ರಲ್ಲಿ ಫ್ಲಾಟ್‌ ಖರೀದಿ ಒಪ್ಪಂದ ಮಾಡಿಕೊಂಡಿದ್ದರು. ಬಿಡಿಎ ನೀಡಿದ್ದ ಕಮೆನ್ಸ್‌ ಮೆಂಟ್‌ ಸರ್ಟಿಫಿಕೇಟ್‌ ಆಧರಿಸಿ ಅರ್ಜಿದಾರರು ಫ್ಲಾಟ್‌ ಖರೀದಿಗೆ ಮುಂದಾಗಿದ್ದರು.

ಬಿಲ್ಡರ್‌ 2015ರಲ್ಲಿ ಬಿಡಿಎಗೆ ಭಾಗಶಃ ಒಸಿ ನೀಡುವಂತೆ ಮನವಿ ಸಲ್ಲಿಸಿತ್ತು ಮತ್ತು ಬಿಡಿಎ 2015ರ ನ.18ರಂದು ಪಾರ್ಶಿಯಲ್‌ ಒಸಿ ನೀಡಿತ್ತು. 2017ರಲ್ಲಿ ನಂತರ ಬಿಡಿಎ ಎರಡನೇ ಒಸಿಯನ್ನೂ ಸಹ ಮಂಜೂರು ಮಾಡಿತ್ತು.

ಆದರೆ ಶೆಟ್ಟಿ ಅವರಿಗೆ ಅಪಾರ್ಟ್‌ಮೆಂಟ್‌ ನಿರ್ಮಾಣವಾಗುತ್ತಿರುವ ಜಾಗದ ಮಾಲೀಕತ್ವವನ್ನು ಬಿಲ್ಡರ್‌ ಕಂಪನಿ ಹೊಂದಿಲ್ಲವೆಂಬ ಮಾಹಿತಿ ಮೇರೆಗೆ ಫ್ಲಾಟ್‌ ಖರೀದಿ ಕರಾರು ರದ್ದುಪಡಿಸಿಕೊಂಡರು.

ಅದರಂತೆ ಬಿಲ್ಡರ್‌ ಕಂಪನಿ 2017ರಲ್ಲಿಒಪ್ಪಂದ ರದ್ದುಗೊಳಿಸಿ 17.85 ಲಕ್ಷ ರೂ.ಗಳನ್ನು ಹಿಂತಿರುಗಿಸಿತ್ತು. ನಂತರ ರೇರಾ ಮೊರೆ ಹೋದ ಅರ್ಜಿದಾರರು ತಮಗೆ ಇನ್ನೂ 6.84 ಲಕ್ಷ ರೂ. ಬಡ್ಡಿ ಸಮೇತ ಹಣವನ್ನು ನೀಡುವಂತೆ ಬಿಲ್ಡರ್‌ ಆದೇಶಿಸಬೇಕೆಂದು ಕೋರಿದ್ದರು.

ರೇರಾ ಪ್ರಾಧಿಕಾರ 2020ರ ಸೆ.30ರಂದು ಶೆಟ್ಟಿ ಅವರಿಗೆ 6.84 ಲಕ್ಷ ರೂ. ಹಣ ಮರುಪಾವತಿಗೆ ಆದೇಶ ನೀಡಿತ್ತು. ಅದನ್ನು ಬಿಲ್ಡರ್‌ ಕಂಪನಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು.

ವ್ಯಾಪ್ತಿ ಮೀರಿದ ಆದೇಶ: ರೇರಾ ಪ್ರಾಧಿಕಾರ ತನ್ನ ಅಧಿಕಾರ ವ್ಯಾಪ್ತಿ ಮೀರಿ ಆದೇಶ ನೀಡಿದೆ. ಕಾನೂನಿನಲ್ಲಿ ಅದಕ್ಕೆ ಮಾನ್ಯತೆ ಇಲ್ಲ, ಹಾಗೆ ಕಾನೂನಿನ ಮನ್ನಣೆ ಇಲ್ಲವಾದರೆ ಅದು ಊರ್ಜಿತವಾಗುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.

ದಾಖಲೆಗಳನ್ನು ಪರಿಶೀಲಿಸಿದ ಬಳಿಕ ನ್ಯಾಯಪೀಠ, ಕಾಯಿದೆ ಜಾರಿಗೆ ಬರುವ ಮುನ್ನ ಅಂದರೆ 2016ರಲ್ಲಿಯೇ ಒಸಿ ಪಡೆದಿರುವುದನ್ನು ಎಲ್ಲರೂ ಒಪ್ಪಿದ್ದು, ಆ ಬಗ್ಗೆ ಯಾವುದೇ ತಕರಾರು ಇಲ್ಲ. ಆದ್ದರಿಂದ ಕೆ-ರೇರಾ ನಿಯಮಾವಳಿಯ ನಿಯಮ-4ರ ಪ್ರಕಾರ ಆ ವಸತಿ ಯೋಜನೆ ಕಾಮಗಾರಿ ಪ್ರಗತಿಯಲ್ಲಿರುವ ಯೋಜನೆಯ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಆದೇಶಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+